For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸರ್ಜಾ 'ಉಪಸ್ಥಿತಿ'ಯಲ್ಲಿ ಮೇಘನಾ ರಾಜ್ ಸೀಮಂತ

  |

  ಚಿರಂಜೀವಿ ಸರ್ಜಾ ಇಲ್ಲವಾಗಿ ನಾಲ್ಕು ತಿಂಗಳಾದವು. ಅವರ ಅಭಿಮಾನಿಗಳು, ಗೆಳೆಯರು ಕುಟುಂಬದವರ ಮನದಲ್ಲಿ ಚಿರಂಜೀವಿ ಸರ್ಜಾ ನೆನಪು ಹಸಿರಾಗಿದೆ.

  Chiru ನಿಧನದ ನಂತರ ಮೊದಲ ಭಾರಿಗೆ ಕ್ಯಾಮೆರಾ ಮುಂದೆ ಬಂದ Meghana | Filmibeat Kannada

  ಚಿರಂಜೀವಿ ಸರ್ಜಾ ನಿಧನ ಹೊಂದಿದಾಗ ಪ್ರೀತಿಯ ಪತ್ನಿ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಚಿರಂಜೀವಿ ಸರ್ಜಾ ಎಲ್ಲೂ ಹೋಗಿಲ್ಲ ತಮ್ಮ ಬಳಿಯೇ ಇದ್ದಾರೆ ಎಂದು ಕಣ್ಣಲ್ಲಿ ಕಂಬನಿ ತುಂಬಿಕೊಂಡು ಹೇಳಿದ್ದರು ಮೇಘನಾ ರಾಜ್.

  ಮೇಘನಾ ರಾಜ್ ಬಗ್ಗೆ ಹರಿದಾಡುತ್ತಿದೆ ಸುಳ್ಳು ಸುದ್ದಿ: ಸ್ಪಷ್ಟನೆ ನೀಡಿದ ಚಿರು ಪತ್ನಿ

  ತಾಯಿಯಾಗುವ ಹಾದಿಯಲ್ಲಿರುವ ಮೇಘನಾ ರಾಜ್‌ಗೆ ಇವು ಅತ್ಯಂತ ಮಹತ್ವದ ದಿನಗಳು, ಮೇಘನಾ ರಾಜ್‌ ಗೆ ಇಂದು ಏಳು ತಿಂಗಳ ಸೀಮಂತ. ಚಿರಂಜೀವಿ ಸರ್ಜಾ ಭೌತಿಕವಾಗಿ ಇಲ್ಲದೇ ಹೋದರೂ ಅವರ ಅನುಪಸ್ಥಿತಿ ಮೇಘನಾ ರಾಜ್ ಗೆ ಕಾಡದಂತೆ 'ವ್ಯವಸ್ಥೆ' ಮಾಡಿ ಮೇಘನಾ ಅವರ ಸೀಮಂತ ಕಾರ್ಯಕ್ರಮ ನಡೆಸಲಾಗಿದೆ.

  ಚಿರಂಜೀವಿ ಸರ್ಜಾ ಚಿತ್ರ ಇಡಲಾಗಿದೆ

  ಚಿರಂಜೀವಿ ಸರ್ಜಾ ಚಿತ್ರ ಇಡಲಾಗಿದೆ

  ಮೇಘನಾ ರಾಜ್ ಸೀಮಂತದ ದಿನ ಚಿರಂಜೀವಿ ಸರ್ಜಾ ಅವರ ಉದ್ದದ ಕಟೌಟ್ ಮಾದರಿಯ ಚಿತ್ರ ನಿರ್ಮಿಸಿ ಮೇಘನಾ ರಾಜ್ ಅವರ ಪಕ್ಕ ನಿಲ್ಲಿಸಿ ಸೀಮಂತ ಕಾರ್ಯಕ್ರಮ ನಡೆಸಲಾಗಿದೆ.

  ಶುಭಾಶಯ ತಿಳಿಸಿರುವ ಗೆಳೆಯರು

  ಶುಭಾಶಯ ತಿಳಿಸಿರುವ ಗೆಳೆಯರು

  ಮೇಘನಾ ರಾಜ್ ಪಕ್ಕ ಚಿರಂಜೀವಿ ಸರ್ಜಾ ಚಿತ್ರ ಇಟ್ಟು ಸೀಮಂತ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೇಘನಾ ರಾಜ್‌ಗೆ ಅಭಿಮಾನಿಗಳು, ಸಿನಿಮಾ ರಂಗದ ಗೆಳಯ-ಗೆಳತಿಯರು ಶುಭಾಶಯಗಳನ್ನು ತಿಳಿಸಿದ್ದಾರೆ.

  ಸ್ನೇಹಿತೆಯರ ಸಂಘ: ಮೇಘನಾ ರಾಜ್ ಮುಖದಲ್ಲಿ ಮತ್ತೆ ಮೂಡಿದ ನಗು

  ಹಸಿರು ಸೀರೆ-ಕೈತುಂಬಾ ಬಳೆ

  ಹಸಿರು ಸೀರೆ-ಕೈತುಂಬಾ ಬಳೆ

  ಮೇಘನಾ ರಾಜ್ ತಂದೆ ಸುಂದರ್‌ ರಾಜ್ ತಾಯಿ ಪ್ರಮಿಳಾ ಜೋಷಾಯ್ ಕುಟುಂಬದ ಆಪ್ತರು, ಗೆಳಯರು ಉಪಸ್ಥಿತಿಯಲ್ಲಿ ಶಾಸ್ತ್ರೋಪ್ತವಾಗಿ ಮೇಘನಾ ರವರ ಸೀಮಂತ ಕಾರ್ಯ ನಡೆಸಲಾಗಿದೆ. ಹಸಿರು ಸೀರೆ, ಕೈತುಂಬ ಬಳೆ ತೊಟ್ಟು ಮೇಘನಾ ಸುಂದರವಾಗಿ ಕಾಣುತ್ತಿದ್ದಾರೆ.

  ಜೂನ್ 7, 2020 ಕ್ಕೆ ಚಿರು ಸರ್ಜಾ ನಿಧನ

  ಜೂನ್ 7, 2020 ಕ್ಕೆ ಚಿರು ಸರ್ಜಾ ನಿಧನ

  ಮೇಘನಾ ರಾಜ್, ಚಿರಂಜೀವಿ ಸರ್ಜಾ 2018 ರಲ್ಲಿ ವಿವಾಹವಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಜೂನ್ 7, 2020 ರಂದು ಚಿರಂಜೀವಿ ಸರ್ಜಾ ನಿಧನ ಹೊಂದಿದರು.

  'ನಾನು ನಗಲು ಚಿರು ಕಾರಣ...': ಮೇಘನಾ ರಾಜ್ ಬರೆದ ಹೃದಯಸ್ಪರ್ಶಿ ಬರಹ

  English summary
  Actress Meghana Raj's baby shower ceremony celebrated by her parents. Chiranjeevi Sarja's live size image kept beside Meghana Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X