For Quick Alerts
  ALLOW NOTIFICATIONS  
  For Daily Alerts

  ಇದಕ್ಕೆ ನೋಡಿ ಕನ್ನಡದ ಹುಡುಗರಿಗೆ ನಿತ್ಯಾ ಮೆನನ್ ಇಷ್ಟ ಆಗೋದು

  By Suneetha
  |

  ತೆಲುಗು-ತಮಿಳು ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಮಲ್ಲುಕುಟ್ಟಿ ನಿತ್ಯಾ ಮೆನನ್ ಅವರು ಅಪ್ಪಟ ಕನ್ನಡದ ಹುಡುಗಿ. ಹುಟ್ಟಿದ್ದು ನಮ್ಮ ರಾಜಧಾನಿ ಬೆಂಗಳೂರಿನಲ್ಲಾದರೂ ಗುರುತಿಸಿಕೊಂಡಿದ್ದು ಹಾಗೂ ಖ್ಯಾತಿ ಪಡೆದಿದ್ದು ಮಾತ್ರ ಪರಭಾಷೆಯಲ್ಲಿ.

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ ಇದೇ ಮೊದಲ ಬಾರಿಗೆ ನಟಿ ನಿತ್ಯಾ ಮೆನನ್ ಕಾಣಿಸಿಕೊಂಡಿರುವ, ಕನ್ನಡದಲ್ಲಿ 'ಕೋಟಿಗೊಬ್ಬ 2' (ಇನ್ನು ಹೆಸರು ಪಕ್ಕಾ ಆಗಿಲ್ಲ) ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಚಿತ್ರ ಕೊನೆಯ ಹಂತದಲ್ಲಿದ್ದು, ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.[ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ]

  ಅಂದಹಾಗೆ ಕೆ.ಎಸ್ ರವಿಕುಮಾರ್ ನಿರ್ದೇಶನದ 'ಮುಡಿಂಜ ಇವನ ಪುಡಿ' ಚಿತ್ರಕ್ಕೆ ನಟಿ ನಿತ್ಯಾ ಮೆನನ್ ಅವರು ತಮ್ಮ ಪಾಲಿನ ಪಾತ್ರಕ್ಕೆ ಕನ್ನಡದಲ್ಲೇ ಡಬ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಡಬ್ಬಿಂಗ್ ಇನ್ನಷ್ಟೇ ಆಗಬೇಕಿದೆ.

  '7 ಓ ಕ್ಲಾಕ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿತ್ಯಾ ಮೆನನ್ ತದನಂತರ 'ಜೋಶ್' ಮತ್ತು ನಾಗಶೇಖರ್ ಅವರ 'ಮೈನಾ' ಚಿತ್ರದಲ್ಲಿ ಮಿಂಚಿದ್ದರು. ಮಾತ್ರವಲ್ಲದೇ 'ಮೈನಾ' ಚಿತ್ರದಲ್ಲಿ ಹಾಡೊಂದಕ್ಕೂ ಧ್ವನಿಯಾಗಿದ್ದರು.[2 ಕೋಟಿ ರೂ.ವೆಚ್ಚದಲ್ಲಿ ಸುದೀಪ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್]

  ಇನ್ನು ಕಿಚ್ಚ ಮತ್ತು ನಿತ್ಯಾ ಮೆನನ್ ಕಾಂಬಿನೇಷನ್ ನ ಈ ಚಿತ್ರದಲ್ಲಿ ಮೂರು ಹಾಡುಗಳ ಶೂಟಿಂಗ್ ಬಾಕಿ ಉಳಿದಿದ್ದು, ಈ ತಿಂಗಳ ಕೊನೆಯಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ.

  ಇದೀಗ 'ಮೈನಾ' ಬೆಡಗಿ ಕನ್ನಡದಲ್ಲೇ ಡಬ್ ಮಾಡಿರುವುದಕ್ಕೆ ಫುಲ್ ಖುಷ್ ಆಗಿರುವ ಅಭಿಮಾನಿಗಳು ನಿತ್ಯಾ ಮೆನನ್ ಅವರ ಕನ್ನಡ ಪ್ರೀತಿಯನ್ನು ಕಂಡು ಹೊಗಳಿಕೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.[ಸಿಸಿಎಲ್ ಮ್ಯಾಚ್ ನಿಂದ ಕಿಚ್ಚ ಅವರಿಗೆ ಸಿಗುವ ಸಂಭಾವನೆ ಎಷ್ಟು]

  ನಿರ್ಮಾಪಕ ಸೂರಪ್ಪ ಬಾಬು ಬಂಡವಾಳ ಹೂಡಿರುವ ಚಿತ್ರಕ್ಕೆ ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರು ಆಕ್ಷನ್-ಕಟ್ ಹೇಳಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ಸುದೀಪ್ ಅವರು ಬರೋಬ್ಬರಿ 6 ಘಟಾನುಘಟಿ ವಿಲನ್ ಗಳ ಜೊತೆ ಫೈಟ್ ಮಾಡಿದ್ದಾರೆ.

  ಒಟ್ನಲ್ಲಿ ಭಾರಿ ಕುತೂಹಲ ಹುಟ್ಟಿಸಿರುವ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರಕ್ಕೆ ಅಭಿಮಾನಿಗಳಂತೂ ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಊಟಿಯಲ್ಲಿ ಶೂಟಿಂಗ್ ಮಾಡಲಾಗಿತ್ತು.

  English summary
  Nithya Menen completes dubbing for upcoming bilingual flick Mudinja Ivana Pudi. The movie is helmed by Lingaa fame KS Ravikumar & produced by Babu M B. The film-makers are yet to confirm the Kannada title of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X