For Quick Alerts
  ALLOW NOTIFICATIONS  
  For Daily Alerts

  ಕಿರುಕುಳದ ಸುದ್ದಿ ಸುಳ್ಳು : ನಟಿ ಪಾರ್ವತಿ ನಾಯರ್‌ ಸ್ಪಷ್ಟನೆ

  By Naveen
  |
  ಪಾರ್ವತಿ ನಾಯರ್‌ ಕಿರುಕುಳದ ಸುದ್ದಿ ಬಗ್ಗೆ ಹೇಳಿದ್ದೇನು ? | Filmibeat Kannada

  ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ಪಾರ್ವತಿ ನಾಯರ್ ಬಗ್ಗೆ ನಿನ್ನೆ ಒಂದು ಸುದ್ದಿ ಹಬ್ಬಿತ್ತು. ಪಾರ್ವತಿ ನಾಯರ್ ಓಲಾ ಕ್ಯಾಬ್ ನಲ್ಲಿ ಪ್ರಯಾಣ ಮಾಡುವ ವೇಳೆ ಅವರ ಮೇಲೆ ಕಿರುಕುಳ ಆಗಿದೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿತ್ತು. ಆದರೆ ವಾಸ್ತವವಾಗಿ ನಡೆದ ಘಟನೆ ಬಗ್ಗೆ ಈಗ ಪಾರ್ವತಿ ನಾಯರ್ 'ಓನ್ ಇಂಡಿಯಾ ಕನ್ನಡ'ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ನಿನ್ನೆ ಪಾರ್ವತಿ ಅವರ ಟ್ವಿಟ್ಟರ್ ಖಾತೆಯಲ್ಲಿ ''ಓಲಾ ಕ್ಯಾಬ್ ನಲ್ಲಿ ಪ್ರಯಾಣ ಮಾಡುವುದು ಅಸುರಕ್ಷಿತ, ಓಲಾ ಕ್ಯಾಬ್ ಸೇವೆ ಥರ್ಡ್ ಗ್ರೇಡ್'' ಎಂದು ಓಲಾ ಕ್ಯಾಬ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಹಿಳಾ ದಿನಾಚರಣೆಯ ದಿನ ಪಾರ್ವತಿ ಮಾಡಿರುವ ಟ್ವೀಟ್ ನೋಡಿ ಅನೇಕರು ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡರು. ಓಲಾ ಕ್ಯಾಬ್ ನಲ್ಲಿ ಪಾರ್ವತಿ ನಾಯರ್‌ ಅವರಿಗೆ ಕಿರುಕುಳ ನೀಡಲಾಗಿದೆ ಎಂದು ಕೆಲವು ಕಡೆ ವರದಿ ಆಗಿತ್ತು.

  'ದಂಗಲ್' ಖ್ಯಾತಿಯ ನಟಿ ಜೈರಾ ವಾಸೀಮ್ ಗೆ ಲೈಂಗಿಕ ಕಿರುಕುಳ!

  ಈ ಸುದ್ದಿಯ ಬಗ್ಗೆ ಈಗ ಪಾರ್ವತಿ ನಾಯರ್‌ ಸ್ಪಷ್ಟನೆ ನೀಡಿದ್ದಾರೆ. ''ಕಿರುಕುಳದ ಸುದ್ದಿ ಸುಳ್ಳು. ಓಲಾ ಕ್ಯಾಬ್ ಡೈವರ್ ತುಂಬ ಒರಟಾಗಿ ನಡೆದುಕೊಂಡರು. ಓಲಾ ಜಿಪಿಎಸ್ ನಲ್ಲಿ ತಾಂತ್ರಿಕ ತೊಂದರೆ ಎದುರಾಗಿತ್ತು. ಅದಕ್ಕೆ ಅವರು ತಪ್ಪು ದಾರಿಯಲ್ಲಿ ಹೋದರು. ಅಷ್ಟು ಬಿಟ್ಟರೆ ಅವರಿಂದ ನನಗೆ ಯಾವುದೇ ಕಿರುಕುಳ ಉಂಟಾಗಿರಲಿಲ್ಲ.'' ಎಂದು ಪಾರ್ವತಿ ನಾಯರ್ ಟ್ವೀಟ್ ಮಾಡಿದ್ದಾರೆ.

  ಅಂದಹಾಗೆ, ಪಾರ್ವತಿ ನಾಯರ್ ನಟ ಕಿಶೋರ್ ಅವರ 'ವಾಸ್ಕೋಡಿಗಾಮ' ಸಿನಿಮಾದಲ್ಲಿ ನಟಿಸಿದ್ದಾರೆ. 'ಸ್ಟೋರಿಕಥೆ' ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾರ್ವತಿ ಪ್ರವೇಶ ಮಾಡಿದ್ದರು. ಉಳಿದಂತೆ, ಮಲೆಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ. ಕಮಲ್ ಹಾಸನ್ ನಟನೆ ರಮೇಶ್ ಅರವಿಂದ್ ನಿರ್ದೇಶನದ 'ಉತ್ತಮ ವಿಲನ್' ಸಿನಿಮಾದಲ್ಲಿ ಸಹ ಪಾರ್ವತಿ ಕಾಣಿಸಿಕೊಂಡಿದ್ದರು.

  ಲೈಂಗಿಕ ಕಿರುಕುಳದ ಬಗ್ಗೆ ಖಾರವಾಗಿ ಮಾತನಾಡಿದ ಕಿಂಗ್ ಖಾನ್

  English summary
  Kannada actress Parvathy Nair has taken her twitter account to opens up about what happened in ola cab.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X