For Quick Alerts
  ALLOW NOTIFICATIONS  
  For Daily Alerts

  ಅತಿವೇಗದ ಚಾಲನೆ ಪೂಜಾಗಾಂಧಿ ಬಂಧನ, ಬಿಡುಗಡೆ

  By ಉದಯರವಿ
  |

  ಇತ್ತೀಚೆಗೆ ನಟಿ ಪೂಜಾಗಾಂಧಿ ಅವರು ಅಪಘಾತ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಸುದ್ದಿಯನ್ನು ಓದಿರುತ್ತೀರಿ. ಈ ಸಂಬಂಧ ಜಯನಗರ ಸಂಚಾರ ಪೊಲೀಸರು ಅವರನ್ನು ಬಂಧಿಸಿ ಬಳಿಕ ಜಾಮೀನು ಮೇರೆಗೆ ಬಿಡುಗಡೆಗೊಳಿಸಿದ್ದಾರೆ.

  ಅವರ ವಿರುದ್ಧ ಹಲವಾರು ಕೇಸ್ ಗಳನ್ನು ದಾಖಲಿಸಿಕೊಂಡು ಬಂಧಿಸಲಾಗಿತ್ತು. ಅವುಗಳಲ್ಲಿ ನಿರ್ಲಕ್ಷ್ಯತನ ಮತ್ತು ಅತಿವೇಗದ ಚಾಲನೆ (ಐಪಿಸಿ ಸೆಕ್ಷನ್ 279), ಅಪಘಾತದಲ್ಲಿ ಗಾಯಗೊಳಿಸುವುದು (ಐಪಿಸಿ ಸೆಕ್ಷನ್ 337), ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿರುವುದು (ಐಪಿಸಿ 334 ಬಿ) ಹಾಗೂ ಮೋಟರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. [ಜಯನಗರದಲ್ಲಿ ಪೂಜಾಗಾಂಧಿ ಕಾರಿಗೆ ಸ್ಕೂಟರ್ ಡಿಕ್ಕಿ]

  ಗುರುವಾರ (ಫೆ.12) ಪೂಜಾಗಾಂಧಿ ಅವರು ಪ್ರಯಾಣಿಸುತ್ತಿದ್ದ ಕಾರು ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದ ಘಟನೆ ಜಯನಗರದ ಯಡಿಯೂರು ಕೆರೆ ಸಮೀಪ ನಡೆದಿತ್ತು. ಈ ಘಟನೆಯಲ್ಲಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ವರ್ಷಾ ಸಹಾನಿ (55) ಎಂಬುವವರು ಗಾಯಗೊಂಡಿದ್ದರು.

  ಘಟನೆಯಲ್ಲಿ ತಲೆಗೆ ಪೆಟ್ಟಾಗಿ ತೀವ್ರ ರಕ್ತ ಸ್ರಾವ ಉಂಟಾಗಿದ್ದರಿಂದ ವರ್ಷಾ ಒಂದೆರಡು ನಿಮಿಷದಲ್ಲೇ ನಿತ್ರಾಣ­ರಾದರು. ಕೂಡಲೇ ಸ್ಥಳೀ­ಯರ ನೆರವು ಪಡೆದ ಪೂಜಾಗಾಂಧಿ, ಕಾರಿನಲ್ಲಿ ಜಯನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಘಟನೆ ವೇಳೆ ಪೂಜಾಗಾಂಧಿ ಅವರೇ ಕಾರು ಚಲಾಯಿಸುತ್ತಿದ್ದರು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

  ಈ ಘಟನೆಗೆ ಸಂಬಂಧಿಸಿದಂತೆ ವರ್ಷಾ ಅವರ ಅಣ್ಣ ದೀಪಕ್ ಅವರು ಪೂಜಾಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾಗಾಂಧಿ ಅವರನ್ನು ಬಂಧಿಸಿ ಬಳಿಕ ಠಾಣಾ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ.

  English summary
  Jayanagar traffic police on Friday arrested and releasedo on bail actor Pooja Gandhi on charges of reckless driving and ramming her car into a two-wheeler rider. On Thursday, Pooja, along with two others, was heading towards Banashankari when the accident took place at Yediyur near Jayanagar 7th Block.
  Saturday, February 14, 2015, 13:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X