For Quick Alerts
  ALLOW NOTIFICATIONS  
  For Daily Alerts

  ಪೂಜಾ ಗಾಂಧಿ ನಟನೆಯ ಹೊಸ ಸಿನಿಮಾ ಶುರು

  |

  ಮಳೆ ಹುಡುಗಿ ಪೂಜಾ ಗಾಂಧಿಯನ್ನು ಪ್ರೇಕ್ಷಕರು ಮರೆತೇ ಬಿಟ್ಟಿದ್ದರು. ಆದರೆ, ಈಗ ಮತ್ತೆ ಅವರು ತಮ್ಮ ಇರುವಿಕೆಯನ್ನು ಸಾಬೀತು ಮಾಡಲು ಬರುತ್ತಿದ್ದಾರೆ. ಪೂಜಾ ಗಾಂಧಿ ನಟನೆಯ ಹೊಸ ಸಿನಿಮಾ ಶುರು ಆಗುತ್ತಿದೆ.

  'ಸಂಹಾರಿಣಿ' ಎಂಬ ಹೊಸ ಸಿನಿಮಾದಲ್ಲಿ ಪೂಜಾ ಗಾಂಧಿ ನಾಯಕಿಯಾಗಿದ್ದಾರೆ. ಇದೊಂದು ಮಾಸ್ ಸಿನಿಮಾವಾಗಿದ್ದು, ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿದೆ. ಮೊದಲ ಬಾರಿಗೆ ಪೂಜಾ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

  ''ನಾನು ಯಾರ ಜೊತೆಯೂ ರೂಮ್ ಬುಕ್ ಮಾಡಿಲ್ಲ'' : ಪೂಜಾಗಾಂಧಿ ಸ್ಪಷ್ಟನೆ ''ನಾನು ಯಾರ ಜೊತೆಯೂ ರೂಮ್ ಬುಕ್ ಮಾಡಿಲ್ಲ'' : ಪೂಜಾಗಾಂಧಿ ಸ್ಪಷ್ಟನೆ

  ಈ ಸಿನಿಮಾ ಸಾಹಸ ಪ್ರಧಾನ ಸಿನಿಮಾ ಆಗಿದ್ದು, ನಾಯಕಿ ಪಾತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಈ ಸಿನಿಮಾದಲ್ಲಿ ಫೈಟ್ ಕೂಡ ಮಾಡಿದ್ದಾರಂತೆ ಪೂಜಾಗಾಂಧಿ. ಈ ಸಿನಿಮಾದ ಮೂಲಕ ತನ್ನ ಸಿನಿಮಾ ಜರ್ನಿ ಅಂತ್ಯ ಆಗಿದೆ ಎಂದವರಿಗೆ ಉತ್ತರ ನೀಡುತ್ತಿದ್ದಾರಂತೆ.

  ರಾಹುಲ್ ದೇವ್, ಹ್ಯಾರಿ ಜೋಶ್, ಕಿಶೋರ್, ರವಿ ಕಾಳೆ ಸಿನಿಮಾದ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆ ಜವಾಹರ್ ನಿರ್ದೇಶನ ಮಾಡಿದ್ದಾರೆ.

  2017 ರಲ್ಲಿ ಬಿಡುಗಡೆಯಾದ 'ದಂಡುಪಾಳ್ಯ 2' ನಂತರ ಪೂಜಾಗಾಂಧಿ ಯಾವ ಸಿನಿಮಾದಲ್ಲಿಯೂ ನಟಿಸಿರಲಿಲ್ಲ. ಎರಡು ವರ್ಷದ ನಂತರ ಈಗ 'ಸಂಹಾರಿಣಿ' ರೂಪದಲ್ಲಿ ಪೂಜಾ ಪ್ರವೇಶಿಸಿದ್ದಾರೆ.

  English summary
  Actress Pooja Gandhi playing lead role in 'Samharini' kannada movie.
  Wednesday, May 15, 2019, 15:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X