»   » ಐ ಪಿ ಎಲ್ ಸೀಸನ್ ಸ್ಪೆಷಲ್ ಜಾಹೀರಾತಿನಲ್ಲಿ ಪ್ರಿಯಾ ವಾರಿಯರ್

ಐ ಪಿ ಎಲ್ ಸೀಸನ್ ಸ್ಪೆಷಲ್ ಜಾಹೀರಾತಿನಲ್ಲಿ ಪ್ರಿಯಾ ವಾರಿಯರ್

Posted By:
Subscribe to Filmibeat Kannada
ಜಾಹಿರಾತಿನಲ್ಲಿ ಪ್ರಿಯ ಪ್ರಕಾಶ್ | Priya prakash's new add | Filmibeat Kannada

ಪ್ರತಿ ಬಾರಿಯಂತೆ ಈ ಬಾರಿಯು ಐ ಪಿ ಎಲ್ ಮ್ಯಾಚ್ ಗಳು ಸಖತ್ ಕಿಕ್ ನೀಡುತ್ತಿದೆ. ಪ್ರತಿ ಪಂದ್ಯ ಕೂಡ ರೋಚಕತೆಯಿಂದ ಕೂಡಿದೆ. ಆದರೆ ಈಗ ಪಂದ್ಯದ ನಡುವೆ ಬರುವ ಒಂದು ಜಾಹೀರಾತು ಎಲ್ಲರ ಗಮನ ಸೆಳೆದಿದೆ. ಅದಕ್ಕೆ ಕಾರಣ ಮಲೆಯಾಳಂ ನಟಿ ಪ್ರಿಯಾ ವಾರಿಯರ್.

ನಟಿ ಪ್ರಿಯಾ ವಾರಿಯರ್ ತನ್ನ ಕಣ್ಣೋಟದ ಮೂಲಕ ದೇಶದಲ್ಲಿಯೇ ದೊಡ್ಡ ಸಂಚಲನ ಉಂಟು ಮಾಡಿದ್ದ ಹುಡುಗಿ. ತನ್ನ ಮೊದಲ ಸಿನಿಮಾ 'ಒರು ಆಡರ್ ಲವ್' ಚಿತ್ರದ ಸಣ್ಣ ವಿಡಿಯೋ ತುಣುಕಿನ ಮೂಲಕ ಒಂದೇ ದಿನದಲ್ಲಿ ಸೂಪರ್ ಸ್ಟಾರ್ ಮಟ್ಟದ ಜನಪ್ರಿಯತೆಯನ್ನು ಈಕೆ ಗಳಿಸಿದ್ದರು. ಪ್ರಿಯಾಗೆ ಸಿಕ್ಕ ದೊಡ್ಡ ಜನಪ್ರಿಯತೆಗೆ ಮಾರು ಹೋಗಿರುವ ಕಂಪನಿಗಳು ತಮ್ಮ ಜಾಹೀರಾತು ಗಳಲ್ಲಿ ನಟಿವಂತೆ ಆಹ್ವಾನ ನೀಡಿತ್ತು.

Actress Priya Varrier acted in chocolate advertisement

ಪ್ರಿಯಾ ವಾರಿಯರ್ ಬಗ್ಗೆ ಕೇಳಿ ಬಂದಿರುವ ಈ 5 ಸುದ್ದಿಗಳು ನಿಜಾನ.?

ಅದೇ ರೀತಿ ಈಗ ಪ್ರಿಯಾ ವಾರಿಯರ್ ಜಾಹೀರಾತು ಲೋಕದಲ್ಲಿ ಮಿಂಚುತ್ತಿದ್ದಾರೆ. ಚಾಕಲೇಟ್ ವೊಂದರ ಜಾಹೀರಾತಿನಲ್ಲಿ ಪ್ರಿಯಾ ನಟಿಸಿದ್ದಾರೆ. ಐ ಪಿ ಎಲ್ ವಿಶೇಷವಾಗಿ ಈ ಜಾಹೀರಾತನ್ನು ಮಾಡಲಾಗಿದೆ.ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಇದು ಮೊದಲ ಜಾಹೀರಾತಾಗಿದ್ದು, 25 ಸೆಕೆಂಡ್‌ನ ಈ ಜಾಹಿರಾತಿನಲ್ಲಿ ಪ್ರಿಯಾ ಪ್ರಕಾಶ್‌ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಕನ್ನಡದ ಯುವ ನಿರ್ದೇಶಕ ಯೋಗಿ ತಮ್ಮ 'ಯೋಗಿ ಲವ್ ಸುಪ್ರಿಯಾ' ಸಿನಿಮಾಗೆ ಪ್ರಿಯಾ ವಾರಿಯರ್ ಅವರನ್ನು ಕರೆ ತರುವ ಪ್ರಯತ್ನ ಮಾಡಿದ್ದರು. ಆದರೆ ಸದ್ಯದ ಪ್ರಿಯಾ ಕನ್ನಡದಲ್ಲಿ ನಟಿಸುವುದು ಅದಿಕೃತವಾಗಿಲ್ಲ.

English summary
Actress Priya Varrier acted in chocolate advertisement. Priya Prakash Varrier, who won over the internet with her wink in Manikya Malaraya Poovi from the film Oru Adaar Love, is back with another viral video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X