»   » ಪ್ರೇಕ್ಷಕರ ನಂತರ ಪ್ರಶಸ್ತಿ ಕೂಡ ಪ್ರಿಯಾ ವಾರಿಯರ್ ಪಾಲಾಯ್ತು

ಪ್ರೇಕ್ಷಕರ ನಂತರ ಪ್ರಶಸ್ತಿ ಕೂಡ ಪ್ರಿಯಾ ವಾರಿಯರ್ ಪಾಲಾಯ್ತು

Posted By:
Subscribe to Filmibeat Kannada
ಪ್ರಿಯಾ ಕಣ್ಣು ಹೊಡೆದಿದ್ದಕ್ಕೆ ಅವಾರ್ಡ್ ಬಂತಲ್ಲಾ ಗುರೂ | Filmibeat Kannada

ಪ್ರಿಯಾ ಪ್ರಕಾಶ್ ವಾರಿಯರ್ ನೋಡ ನೋಡುತ್ತಲೇ ದೇಶಾದ್ಯಂತ ಫೇಮಸ್ ಆದರು. 'ಒರು ಅಡರ್ ಲವ್' ಸಿನಿಮಾ ಮೂಲಕ ಮಾಲಿವುಡ್ ಚಿತ್ರರಂಗಕ್ಕೆ ಬಂದ ಈಕೆ ಒಂದು ಹಾಡಿನ ಸಣ್ಣ ದೃಶ್ಯದ ಮೂಲಕ ನ್ಯಾಷನಲ್ ಕ್ರಶ್ ಆದರು.

ತನ್ನ ಕಣ್ಣಿನ ನೋಟದಿಂದ ಲಕ್ಷಾಂತರ ಹುಡುಗರ ಹೃದಯ ಕದ್ದ ಈ ಚಂದ್ರ ಚಕೋರಿಗೆ ಈಗ ಪ್ರಶಸ್ತಿ ಕೂಡ ಸಿಕ್ಕಿದೆ. ಪ್ರೇಕ್ಷಕ ಪಾತ್ರವಲ್ಲ ಪ್ರಿಯಾ ಮೋಡಿಗೆ ಈಗ ಪ್ರಶಸ್ತಿ ಕೂಡ ಲಭಿಸಿದೆ. 'ವೈರಲ್ ಪರ್ಸನಾಲಿಟಿ ಆಫ್ ದಿ ಇಯರ್' ಎಂಬ ಪ್ರಶಸ್ತಿಯನ್ನು ಪ್ರಿಯಾ ಈಗ ಪಡೆದಿದ್ದಾರೆ. ಇದು ಅವರ ಮೊದಲ ಪ್ರಶಸ್ತಿ ಎನ್ನುವುದು ವಿಶೇಷವಾಗಿದೆ. ಮೊದಲ ಪ್ರಶಸ್ತಿ ಪಡೆದ ಪ್ರಿಯಾ ತನ್ನ 'ಒರು ಅಡರ್ ಲವ್' ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ. ತನ್ನ ಪ್ರಶಸ್ತಿಯೊಂದಿಗೆ ತೆಗೆದ ಫೋಟೋವನನ್ನು ಇನ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

Actress Priya Varrier bags her first award

19 ವರ್ಷದ ಪ್ರಿಯಾ ವಾರಿಯರ್ ಈಗ ಸ್ಟಾರ್ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ. ಇನ್ಟಾಗ್ರಾಮ್ ನಲ್ಲಿ ಬಾಲಿವುಡ್ ಸ್ಟಾರ್ ಗಳನ್ನು ಮೀರಿದ ಫಾಲೋಹರ್ಸ್ ಗಳನ್ನು ಪ್ರಿಯಾ ಪಡೆದಿದ್ದರು. ಇನ್ನು ಇಂತಹ ನಟಿಯನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಕೂಡ ಮಾಡಲಾಗಿತ್ತು. 'ಯೋಗಿ ಲವ್ಸ್ ಸುಪ್ರಿಯಾ' ಸಿನಿಮಾದಲ್ಲಿ ಪ್ರಿಯಾ ನಟಿಸುತ್ತಾರೆ ಎಂದು ನಿರ್ದೇಶಕರು ಹೇಳಿದ್ದರು. ಆದರೆ ಸದ್ಯಕ್ಕೆ ಅವರು ಕನ್ನಡ ಸಿನಿಮಾ ಮಾಡುವ ಬಗ್ಗೆ ಯಾವುದೇ ಅಧಿಕೃತ ಸಿಕ್ಕಿಲ್ಲ.

English summary
Actress Priya Varrier bags her first awar. She got viral personality of the year award. Priya Prakash Varrier, who won over the internet with her wink in Manikya Malaraya Poovi from the film Oru Adaar Love.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X