»   » ಸ್ಯಾಂಡಲ್ ವುಡ್ 'ಗಿಣಿ' ರಾಗಿಣಿ ಟೆರರಿಸ್ಟ್ ಆಗಿದಾದ್ರೂ ಹೇಗೆ.?

ಸ್ಯಾಂಡಲ್ ವುಡ್ 'ಗಿಣಿ' ರಾಗಿಣಿ ಟೆರರಿಸ್ಟ್ ಆಗಿದಾದ್ರೂ ಹೇಗೆ.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಗಿಣಿ' ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ತುಪ್ಪದ ಬೆಡಗಿ ರಾಗಿಣಿ.

ರಾಗಿಣಿ ಈಗ ನಟಿ ಮಾತ್ರವಷ್ಟೇ ಅಲ್ಲ. 'ಟೆರರಿಸ್ಟ್' ಕೂಡ ಹೌದು. ಇದೇನಪ್ಪಾ ಅಂತ ಆಶ್ಚರ್ಯ ಪಡಬೇಡಿ. ತಮ್ಮ ಮುಂದಿನ ಸಿನಿಮಾದಲ್ಲಿ ರಾಗಿಣಿ ಟೆರರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. 'ದಿ ಟೆರರಿಸ್ಟ್' ಸಿನಿಮಾದ ಫಸ್ಟ್ ಪೋಸ್ಟರ್ ಡಿಸೈನ್ ಮಾಡಿರುವ ಚಿತ್ರತಂಡ ಸಿನಿಮಾದ ಲೀಡ್ ಪಾತ್ರಕ್ಕೆ ರಾಗಿಣಿ ಅವರನ್ನ ಆಯ್ಕೆ ಮಾಡಿಕೊಂಡಿದೆ.

actress ragini becomes terrorist for movie

'ರೋಮಿಯೋ', 'ಮಿಸ್ಟರ್' , 'ರಾಗ' ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ನಿರ್ದೇಶಕ ಪಿ.ಸಿ.ಶೇಖರ್ ಸಿನಿಮಾವನ್ನ ಡೈರೆಕ್ಟ್ ಮಾಡ್ತಿದ್ದಾರೆ. 'ಅಲಂಕಾರ್ ಶಾಂತರಾಮ್' ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು, ಪ್ರದೀಪ್ ವರ್ಮಾರ ಸಂಗೀತ ಸಂಯೋಜನೆ ಸಿನಿಮಾಗಿರಲಿದೆ.

ಶೇಖರ್ ಅವ್ರ ಈ ಹಿಂದಿನ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಸಚ್ಚಿನ್ ಅವ್ರೇ 'ದಿ ಟೆರರಿಸ್ಟ್' ಚಿತ್ರಕ್ಕೆ ಡೈಲಾಗ್ ಬರೆಯಲಿದ್ದಾರೆ.

ಜನಸಾಮಾನ್ಯರಿಗೆ 'ಟೆರರಿಸ್ಟ್' ಗಳ ಬಗ್ಗೆ ಗೊತ್ತಿರದ ಮಾಹಿತಿಯನ್ನ ತೆರೆ ಮೇಲೆ ತರುವ ಪ್ರಯತ್ನ ನಡೆಯುತ್ತಿದ್ದು, ಮುಂದಿನ ತಿಂಗಳಲ್ಲಿ ರಾಗಿಣಿ ಟೆರೆರಿಸ್ಟ್ ಲುಕ್ ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

English summary
Kannada Actress Ragini Dwivedi becomes terrorist for her upcoming movie 'The Terrorist'. ತಮ್ಮ ಮುಂದಿನ ಸಿನಿಮಾದಲ್ಲಿ ಟೆರರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ರಾಗಿಣಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada