Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡ್ರಗ್ಸ್ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂಜನಾ-ರಾಗಿಣಿ
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರಿಗೂ ಷರತ್ತುಬದ್ಧ ಜಾಮೀನು ದೊರೆತಿದ್ದು. ಇಂದು ಇಬ್ಬರೂ ನಟಿಯರು ಷರತ್ತಿನಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ರಾಗಿಣಿ ಹಾಗೂ ಸಂಜನಾ ಅವರುಗಳು ಪ್ರತ್ಯೇಕವಾಗಿ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಟಿರಾಗಿಣಿಯು ತಮ್ಮ ತಂದೆ ಹಾಗೂ ವಕೀಲರ ಜೊತೆಗೆ ಆಗಮಿಸಿದ್ದರು.
ರಾಗಿಣಿಗೆ ಎನ್‌ಡಿಪಿಎಸ್ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿತ್ತು. ಕೆಲವು ಷರತ್ತುಗಳನ್ನು ವಕೀಲರು ಪೂರೈಸಿದ್ದರಾದರೂ, ರಾಗಿಣಿ ಸಹ ಖುದ್ದಾಗಿ ಹಾಜರಾಗಿ ಕೆಲವು ಷರತ್ತು ಪೂರೈಸಬೇಕಿತ್ತು, ಜೊತೆಗೆ ಪ್ರಕರಣದ ವಿಚಾರಣೆಯೂ ಇಂದು ನಡೆಯುವುದಿತ್ತು ಹಾಗಾಗಿ ರಾಗಿಣಿ ನ್ಯಾಯಾಲಯಕ್ಕೆ ಆಗಮಿಸಿದ್ದರು.
ಇನ್ನು ನಟಿ ಸಂಜನಾ ಸಹ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಬಂದಿದ್ದರು. ಇಬ್ಬರೂ ಸಹ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಕೆಲ ಕಾಲ ಇದ್ದರು. ವಿಚಾರಣೆ ನಡೆದ ಬಳಿಕ ಇಬ್ಬರೂ ಹೊರಗೆ ಬಂದು. ಪರಸ್ಪರ ಅಪ್ಪಿಕೊಂಡು ಶುಭಹಾರೈಕೆ ವಿನಿಮಯ ಮಾಡಿಕೊಂಡರು.
ನಟಿ ರಾಗಿಣಿ ಮಾಧ್ಯಮಗಳೊಟ್ಟಿಗೆ ಮಾತನಾಡಿ, 'ಸಾಮಾನ್ಯ ವಿಚಾರಣೆಗೆ ಹಾಜರಾಗಿದ್ದೆ. ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ. ಬೇರೆ ಆರೋಪಿಗಳ ಬಗ್ಗೆ ನಾನು ಈಗ ಮಾತನಾಡುವುದಿಲ್ಲ' ಎಂದರು.