For Quick Alerts
  ALLOW NOTIFICATIONS  
  For Daily Alerts

  ಪರಪ್ಪನ ಅಗ್ರಹಾರ ಜೈಲಿಗೆ ರಾಗಿಣಿ ಶಿಫ್ಟ್‌: ಹೊರಗಿನ ಊಟಕ್ಕೆ ಇಲ್ಲ ಅವಕಾಶ

  |

  ಮಾದಕ ದ್ರವ್ಯ ಜಾಲದೊಂದಿಗೆ ನಂಟು ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಗೆ ಇಂದಿನಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  ರಾಗಿಣಿ ದ್ವಿವೇದಿ ಹಾಗೂ ಇನ್ನೂ ನಾಲ್ಕು ಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಎಲ್ಲರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ.

  14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಾಗಿಣಿ

  ಪರಪ್ಪನ ಅಗ್ರಹಾರದ ಕ್ವಾರಂಟೈನ್ ಕೇಂದ್ರದಲ್ಲಿ ಆರೋಪಿಗಳು ಇರಲಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರನ್ನು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

  ಹೊರಗಿನಿಂದ ಊಟ ತರಿಸಿಕೊಳ್ಳಲು ಇದ್ದ ಅವಕಾಶಕ್ಕೆ ಕಾರಾಗೃಹ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಹಾಗಾಗಿ ನಟಿ ರಾಗಿಣಿ, ಜೈಲಿನಲ್ಲಿ ಮಾಡುವ ಅಡುಗೆಯನ್ನೇ ತಿನ್ನಬೇಕಾಗಿದೆ. ಕೊರೊನಾ ಪರಿಸ್ಥಿತಿ ಕಾರಣ ಹೊರಗಿನ ಊಟಕ್ಕೆ ಅವಕಾಶ ನೀಡಲಾಗಿಲ್ಲ.

  ರಾಗಿಣಿ ಜೊತೆಗೆ ಇತರೆ ಆರೋಪಿಗಳಾದ ಲೂಮ್ ಪೆಪ್ಪರ್ ಅಲಿಯಾಸ್ ಸೈಮನ್, ಪ್ರಶಾಂತ ರಾಂಕಾ, ರಾಹುಲ್, ನಿಯಜ್ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

  ಡ್ರಗ್ಸ್‌ ಪ್ರಕರಣ ಆರೋಪಿ ರಾಹುಲ್ ಅನ್ನು 'ಒಳ್ಳೆ ಹುಡುಗ' ಎಂದ ನಿರ್ಮಾಪಕ ಕೆ.ಮಂಜು

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada

  ಇದೇ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಸಂಜನಾ ಗಲ್ರಾನಿ ಇನ್ನೂ ಮೂರು ದಿನಗಳ ಕಾಲ ಸಿಸಿಬಿ ವಶದಲ್ಲಿಯೇ ಮುಂದುವರೆಯಲಿದ್ದಾರೆ. ರಾಗಿಣಿ ಆಪ್ತ ರವಿಶಂಕರ್, ಪ್ರಕರಣದ ಮುಖ್ಯ ಆರೋಪಿ ವೀರೇನ್ ಖನ್ನಾ ಸಹ ಸಿಸಿಬಿ ವಶದಲ್ಲಿಯೇ ಮುಂದುವರೆಯಲಿದ್ದಾರೆ.

  English summary
  Actress Ragini Dwivedi and four others shifted to Parappana Agrahara jail for 14 days judicial custody.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X