For Quick Alerts
  ALLOW NOTIFICATIONS  
  For Daily Alerts

  ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ!

  By Bharath Kumar
  |

  ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಕುಟುಂಬದಿಂದ ಮತ್ತೊಬ್ಬ ಸದಸ್ಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿದೇಶದಲ್ಲಿ ತರಬೇತಿ ಪಡೆದುಕೊಂಡು ಬಂದಿರುವ ರಕ್ಷಿತಾ ಸಹೋದರ ಈಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.[ನಿಮಗೆ ಗೊತ್ತಿಲ್ಲದ 'ಸುಂಟರಗಾಳಿ' ರಕ್ಷಿತ ರಿಯಲ್ ಕಹಾನಿ]

  ಈ ಹಿಂದೆ ರಕ್ಷಿತಾ ಪ್ರೇಮ್ ಸ್ಯಾಂಡಲ್ ವುಡ್ ರಾಣಿಯಾಗಿ ವರ್ಷಗಳ ಕಾಲ ಮೆರದಿದ್ದರು. ಇನ್ನು ರಕ್ಷಿತಾ ಅವರ ತಾಯಿ ಮಮತಾ ರಾವ್ ಕೂಡ ನಟಿಯಾಗಿದ್ದವರು. ಇದರ ಜೊತೆಗೆ ರಕ್ಷಿತಾ ಅವರ ಪತಿ ಪ್ರೇಮ್ ಕನ್ನಡದ ಸ್ಟಾರ್ ನಿರ್ದೇಶಕರು. ಈಗ ರಕ್ಷಿತಾ ಅವರ ಸಹೋದರ ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ರಕ್ಷಿತಾ ಅವರ ಕುಟುಂಬ ಸಂಪೂರ್ಣ ಸಿನಿ ಕುಟುಂಬವಾಗಿದೆ. ಮುಂದೆ ಓದಿ....

  ಪ್ರೇಮ್ ಬಳಿ ಅಸಿಸ್ಟಂಟ್

  ಪ್ರೇಮ್ ಬಳಿ ಅಸಿಸ್ಟಂಟ್

  ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್ ತಮ್ಮ ಭಾವ ಪ್ರೇಮ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರಂತೆ. ಈ ಮೂಲಕ ಅಧಿಕೃತವಾಗಿ ಸಿನಿಮಾ ಜಗತ್ತಿಗೆ ರಕ್ಷಿತಾ ಸಹೋದರ ಕಾಲಿಟ್ಟಿದ್ದಾರೆ.

  'ವಿಲನ್' ಸೆಟ್ ನಲ್ಲಿ ಅಭಿಷೇಕ್

  'ವಿಲನ್' ಸೆಟ್ ನಲ್ಲಿ ಅಭಿಷೇಕ್

  ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯಿಸುತ್ತಿರುವ 'ದಿ ವಿಲನ್' ಸೆಟ್ ನಲ್ಲಿ ಅಭಿಷೇಕ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಯಾಮೆರಾ, ಆಕ್ಟಿಂಗ್, ಹೀಗೆ ಸಿನಿಮಾ ಮೇಕಿಂಗ್ ಕುರಿತ ವಿಚಾರಗಳನ್ನ ಪ್ರೇಮ್ ಅವರ ಜೊತೆಯಲ್ಲಿದ್ದು ಕಲಿಯುತ್ತಿದ್ದಾರಂತೆ.[ಕುಂದಾನಗರಿಯಲ್ಲಿ ಅಬ್ಬರಿಸುತ್ತಿರುವ ಖತರ್ನಾಕ್ 'ವಿಲನ್']

  ಸುದೀಪ್ ಅವರಿಂದ ಸಲಹೆ

  ಸುದೀಪ್ ಅವರಿಂದ ಸಲಹೆ

  'ವಿಲನ್' ಸೆಟ್ ನಲ್ಲಿ ಭಾಗಿಯಾಗಿರುವ ಅಭಿಷೇಕ್ , ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರಿಂದ ಸಲಹೆಗಳನ್ನ ಪಡೆಯುತ್ತಿದ್ದಾರಂತೆ. ಇವರಿಬ್ಬರ ಆಕ್ಟಿಂಗ್ ನಿಂದ ಅಭಿಷೇಕ್ ಸಾಕಷ್ಟು ವಿಷಯಗಳನ್ನ ಕಲಿತುಕೊಳ್ಳುತ್ತಿದ್ದಾರೆ.

  ವಿದೇಶದಲ್ಲಿ ತರಬೇತಿ ಪಡೆದಿದ್ದಾರೆ

  ವಿದೇಶದಲ್ಲಿ ತರಬೇತಿ ಪಡೆದಿದ್ದಾರೆ

  ಶಿಕ್ಷಣದಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿರುವ ಅಭಿಷೇಕ್, ನ್ಯೂಯಾರ್ಕ್ 'ಫಿಲಂ ಇನ್ಸ್ಟಿಟ್ಯೂಟ್ ನ ಲೀ ಸ್ಟ್ರಾಸ್ಬರ್ಗ್' ಥಿಯೇಟರ್ ನ ನಟನ ಶಾಲೆಯಲ್ಲಿ ವ್ಯಾಸಂಗ ಮಾಡಿ ಬಂದಿದ್ದಾರೆ. ರಣಬೀರ್ ಕಪೂರ್, ಆಲ್ ಪಚಿನೋ ಅಂತಹ ನಟರು ಇಲ್ಲಿ ವ್ಯಾಸಂಗ ಮಾಡಿದ್ದರು.

  ನಟನೆ ಮೇಲೆ ಆಸಕ್ತಿ ಹೆಚ್ಚಿದೆ

  ನಟನೆ ಮೇಲೆ ಆಸಕ್ತಿ ಹೆಚ್ಚಿದೆ

  ಅಂದ್ಹಾಗೆ, ಅಭಿಷೇಕ್ ರಾವ್ ಗೆ ನಟನೆಯಲ್ಲಿ ಹೆಚ್ಚು ಆಸಕ್ತಿಯಿದೆಯಂತೆ. ಹೀಗಾಗಿ, ಅದಕ್ಕೆ ಬೇಕಾಗುವ ತಯಾರಿಯನ್ನ ಮಾಡಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಭಾವನ ಜೊತೆ ಸಮಯ ಕಳೆಯುತ್ತಿದ್ದಾರಂತೆ. ಈ ಮೂಲಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸಲು ಎಲ್ಲ ರೀತಿಯ ಸಿದ್ದತೆಗಳನ್ನ ರಕ್ಷಿತಾ ಅವರ ಸಹೋದರ ಮಾಡಿಕೊಳ್ಳುತ್ತಿದ್ದಾರೆ.

  English summary
  Abhishek Rao Comes from a filmy family - with Mother/Actress Mamatha Rao, Followed by his sister Rakshita and brother-in-law, Prem. Now He will soon Enter tinsel town with a Prem Directorial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X