»   » ಕುಂದಾನಗರಿಯಲ್ಲಿ ಅಬ್ಬರಿಸುತ್ತಿರುವ ಖತರ್ನಾಕ್ 'ವಿಲನ್'

ಕುಂದಾನಗರಿಯಲ್ಲಿ ಅಬ್ಬರಿಸುತ್ತಿರುವ ಖತರ್ನಾಕ್ 'ವಿಲನ್'

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಈಗಾಗಲೇ ಭರ್ಜರಿ ಚಿತ್ರೀಕರಣ ಮಾಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಎರಡನೇ ಹಂತದ ಶೂಟಿಂಗ್ ಮಾಡುತ್ತಿದ್ದು, ನಿನ್ನೆಯಷ್ಟೇ ಅಭಿನಯ ಚಕ್ರವರ್ತಿ ಸುದೀಪ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಸದ್ಯ, ಕುಂದಾನಗರಿ ಬೆಳಗಾವಿಯಲ್ಲಿ 'ದಿ ವಿಲನ್' ಟೀಮ್ ಬೀಡು ಬಿಟ್ಟಿದ್ದು, ಸುದೀಪ್ ಅವರ ದೃಶ್ಯಗಳನ್ನ ಚಿತ್ರೀಕರಿಸುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ 'ವಿಲನ್' ಶೂಟಿಂಗ್ ನಡೆಸಿದ್ದು, ಸುದೀಪ್ ಅವರ ಫೈಟಿಂಗ್ ಹಾಗೂ ಚೇಸಿಂಗ್ ದೃಶ್ಯಗಳನ್ನ ಚಿತ್ರೀಕರಿಸಿಲಾಯಿತು.[ಶೂಟಿಂಗ್ ಗೆ 'ವಿಲನ್' ಎಂಟ್ರಿ: ಇಷ್ಟವಿಲ್ಲದಿದ್ರು ಸೆಲ್ಫಿ ಪೋಸ್ಟ್ ಮಾಡಿದ ಸುದೀಪ್]

Kannada Movie The Villain Shooting in Belagavi

ಅಂದ್ಹಾಗೆ, ರಾಮತೀರ್ಥ ಗ್ರಾಮದಲ್ಲಿ ಶೂಟಿಂಗ್ ನಡೆಸುತ್ತಿರುವ ಎರಡನೆಯ ಚಿತ್ರ 'ದಿ ವಿಲನ್'. ಈ ಮೊದಲು ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ 'ಚಿತ್ರವನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು.['ದಿ ವಿಲನ್' ಹೀರೋಯಿನ್ ಬಗ್ಗೆ ಬ್ರೇಕ್ ಆಗಿರುವ ಬ್ಲಾಸ್ಟಿಂಗ್ ನ್ಯೂಸ್ ಇದು.!]

Kannada Movie The Villain Shooting in Belagavi

ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಾಗಿ ಅಭಿನಯಿಸುತ್ತಿರುವ ಈ ಚಿತ್ರವನ್ನ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಆಮಿ ಜಾಕ್ಸನ್ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ನಟಿ ಶ್ರುತಿ ಹರಿಹರನ್, ಹಾಗೂ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಕೂಡ ಇರಲಿದ್ದಾರೆ

English summary
After Participating in London Corporate cricket Tournament, Now Sudeep Joins to The Villain Shooting At North Karnataka For 10 Days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada