»   » ನಿಮಗೆ ಗೊತ್ತಿಲ್ಲದ 'ಸುಂಟರಗಾಳಿ' ರಕ್ಷಿತ ರಿಯಲ್ ಕಹಾನಿ

ನಿಮಗೆ ಗೊತ್ತಿಲ್ಲದ 'ಸುಂಟರಗಾಳಿ' ರಕ್ಷಿತ ರಿಯಲ್ ಕಹಾನಿ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ಅಪ್ಪು' ಚಿತ್ರದಿಂದ ಬಣ್ಣದ ಲೋಕದಲ್ಲಿ ಮಿನುಗಲಾರಂಭಿಸಿದ ನಟಿ ರಕ್ಷಿತ. ಸ್ಯಾಂಡಲ್ ವುಡ್, ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಒಂದ್ಕಾಲದಲ್ಲಿ 'ಸುಂಟರಗಾಳಿ' ಎಬ್ಬಿಸಿದಾಕೆ ನಟಿ ರಕ್ಷಿತ.

ನಟಿಯಾಗಿ, ನಿರ್ಮಾಪಕಿಯಾಗಿ ಮತ್ತು ರಾಜಕೀಯದಲ್ಲೂ ಸಕ್ರಿಯರಾಗಿರುವ ನಟಿ ರಕ್ಷಿತ ಇಂದು ಸುಖದ ಸುಪ್ಪತ್ತಿಗೆಯಲ್ಲಿ ಇರಬಹುದು. ಆದ್ರೆ, ಇದರ ಹಿಂದೆ ರಕ್ಷಿತ ಮತ್ತು ಆಕೆಯ ತಾಯಿ ಮಮತಾ ರಾವ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. [ರಮೇಶ್ ಮುಂದೆ 'ಜೋಗಿ' ಪ್ರೇಮ್ ಬಿಚ್ಚಿಟ್ಟ ಕಣ್ಣೀರ ಕಥೆ]

ಇದುವರೆಗೂ ಬೋಲ್ಡ್ ಅಂಡ್ ಬ್ಯೂಟಿಫುಲ್ ರಕ್ಷಿತರನ್ನ ನೋಡಿರುವ ಕನ್ನಡಿಗರಿಗೆ ರಕ್ಷಿತ ರಿಯಲ್ ಕಹಾನಿ ದರ್ಶನವಾಗಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ.

ಜೀ ಕನ್ನಡದಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ರಕ್ಷಿತ ಮನದಾಳವನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

ನಟಿ ರಕ್ಷಿತ ಬಗ್ಗೆ....

ಕನ್ನಡ ಚಿತ್ರರಂಗದ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಹಾಗೂ ನಟಿ ಮಮತಾ ರಾವ್ ಪುತ್ರಿ.
ನಿಜ ನಾಮ - ಶ್ವೇತ (ತ್ರಿಪುರ ಸುಂದರಿ)
ಪತಿ - ಪ್ರೇಮ್
ಮಗ - ಸೂರ್ಯ

ಅಗ್ನಿ ಶ್ರೀಧರ್ ಇಟ್ಟ ಹೆಸರು

''ಬಹುಶಃ ನನ್ನನ್ನ ಮೊದಲು ಎತ್ಕೊಂಡಿದ್ದು ಅಗ್ನಿ ಶ್ರೀಧರ್. ಅವರೇ ಹೇಳಿದ್ದು ನನಗೆ ಶ್ವೇತಾ ಅಂತ ಹೆಸರು ಇಡ್ಬೇಕು ಅಂತ. ಅದಕ್ಕೆ ನಾನು ಹೀಗೆ ಇರುವುದು. ಅಗ್ನಿ ತರಹ!'' - ರಕ್ಷಿತ

ಅಪ್ಪ-ಅಮ್ಮ ಜೊತೆ ಇರೋಕೆ ಆಗ್ಲಿಲ್ಲ

''ನನ್ನ ಅಪ್ಪ ಅಮ್ಮ ಆಗಲೇ ದೂರ ಆಗಿದ್ದರು. ವಿಚ್ಛೇದನ ಪಡೆದಿದ್ದರು. ನನಗೆ ಇಬ್ಬರೊಂದಿಗೆ ಇರಲು ಸಮಯ ಸಿಗ್ಲಿಲ್ಲ'' - ರಕ್ಷಿತ

ಅಮ್ಮನ ಬಗ್ಗೆ ಹೆಮ್ಮೆ ಅನಿಸೋದು ಯಾಕೆ?

''ನನ್ನ ತಾಯಿ ಬಗ್ಗೆ ನನಗೆ ಹೆಮ್ಮೆ ಅನಿಸೋದು ಏನು ಅಂದ್ರೆ, ವಿಚ್ಛೇದನ ಪಡೆದಿದ್ದರೂ, ತಂದೆ ಬಗ್ಗೆ ಯಾವತ್ತೂ ಕೆಟ್ಟದ್ದು ಮಾತನಾಡಲಿಲ್ಲ. ನನ್ನ ಮೊದಲ ಗುರು ಚಿತ್ರರಂಗದಲ್ಲಿ ಅಂದ್ರೆ ಅದು ನನ್ನ ತಾಯಿ'' - ರಕ್ಷಿತ

ದುಡ್ಡು ಇರ್ಲಿಲ್ಲ!

''ಅಪ್ಪನ ಮನೆಯಿಂದ ಹೊರಬಂದ ಮೇಲೆ ಅಮ್ಮನ ಹತ್ತಿರ ದುಡ್ಡು ಇರ್ಲಿಲ್ಲ. ನಾನು ಇನ್ನೂ ಪುಟಾಣಿ ಹುಡುಗಿ. ಅವಾಗ ಅಮ್ಮನಿಗೆ ತುಂಬಾ ಕಷ್ಟ ಆಗಿತ್ತು. ಕೈಯಲ್ಲಿ ಇದ್ದದ್ದು ಎರಡೇ ಬಳೆ. ಅದನ್ನ ಮಾರಿ ನನಗಾಗಿ ಹಾಲು ತಗೊಂಡು ಬಂದು ಅಮ್ಮ ಸಾಕಿದ್ರು'' - ರಕ್ಷಿತ

ಸಿಮೆಂಟ್-ಸೋಪ್ ತಿನ್ತಿದ್ರಂತೆ!

''ಚಿಕ್ಕವಯಸ್ಸಲ್ಲಿ ನಾನು ತುಂಬಾ ಸಿಮೆಂಟ್ ಮತ್ತು ಸೋಪ್ ತಿನ್ತಿದ್ದೆ. ನನಗೆ ಗೊತ್ತಿಲ್ಲ ಯಾಕೆ ಅಂತ'' - ರಕ್ಷಿತ

ತಿರುಪತಿ ಬೆಟ್ಟದ ಕಥೆ

''ಎಲ್ಲಾ ಒಳ್ಳೆಯದ್ದು ಆದ್ರೆ ನನ್ನ ಮಗಳ ಕೂದಲು ಕೊಡ್ತೀನಿ ಅಂತ ನಮ್ಮಮ್ಮ ತಿರುಪತಿ ಬೆಟ್ಟದಲ್ಲಿ ಬೇಡಿಕೊಂಡು ಬಂದಿದ್ರು. ಅದು 7ನೇ ಕ್ಲಾಸ್ ನಲ್ಲಿ. ನಾನು ಗುಂಡು ಹೊಡಿಸಿಕೊಂಡು ಸ್ಕೂಲ್ ಗೆ ಹೋಗಿದ್ದೆ. ಜನ ಏನಂತ ಅಂದುಕೊಳ್ಳಲ್ಲ. ಅದು ಬಾಲ್ಡ್ ವಿನ್ ಗರ್ಲ್ಸ್ ಹೈ ಸ್ಕೂಲ್'' - ರಕ್ಷಿತ

ಓದು ಕಷ್ಟ ಕಷ್ಟ

''ಕಾಲೇಜ್ ಗೆ ಹೋದ್ಮೇಲೆ ಓದು ಸ್ವಲ್ಪ ಕಷ್ಟ ಆಯ್ತು. ನನಗೆ ಓದೋಕೆ ಇಷ್ಟ ಇರ್ಲಿಲ್ಲ. ಅವಾಗ ಎಸ್ಕೇಪ್ ರೂಟ್ ಹುಡುಕ್ತಾ ಇದ್ದೆ. ಆಗ ನಾನು ಡ್ಯಾನ್ಸ್ ಕ್ಲಾಸ್ ಗೆ ಹೋಗ್ತಾ ಇದ್ದೆ. ಅಲ್ಲಿ ನನಗೆ ಅಪ್ಪು ಸಿಕ್ಕಿದ್ರು. ಅವರು ಸಿನಿಮಾಗೆ ಹೀರೋಯಿನ್ ಹುಡುಕ್ತಾ ಇದ್ರು. ಆಗ ಎಲ್ಲಾ ಕೂಡಿ ಬಂದು ಹೀರೋಯಿನ್ ಆದೆ'' - ರಕ್ಷಿತ

ಪೂರಿ ಜಗನ್ನಾಥ್ ಬಗ್ಗೆ...

''ನಾನು ಮೊದಲು ಅವರ ಆಫೀಸ್ ಗೆ ಹೋಗಿದ್ದೆ. ಅಲ್ಲಿ ಪೂರಿ ಜಗನ್ನಾಥ್ ಕೂತ್ಕೊಂಡಿದ್ರು. ವಜ್ರೇಶ್ವರಿ ಕಂಬೈನ್ಸ್ ಗೆ ಮೊದಲ ಬಾರಿ ನಾನು ಹೋಗಿದ್ದು. ಆಗ ಪೂರಿ ಜಗನ್ನಾಥ್, ನಿನ್ನ ಹೈಯ್ಟ್ ಎಷ್ಟು, ವೇಯ್ಟ್ ಎಷ್ಟು ಅಂತೆಲ್ಲಾ ಕೇಳಿದ್ರು. ನಂತರ ನನ್ನ ಸೆಲೆಕ್ಟ್ ಮಾಡಿದರು. ಪೂರಿ ಜಗನ್ನಾಥ್ ರಿಂದಲೇ ನನ್ನ ಕೆರಿಯರ್ ಚೆನ್ನಾಗಿ ಆಯ್ತು. ನನ್ನ ಗಾಡ್ ಫಾದರ್ ಅವರೇ ಅಂತ ಹೇಳಬಹುದು'' - ರಕ್ಷಿತ

'ರಕ್ಷಿತ' ಆಗಿದ್ದು ಹೇಗೆ?

''ಪಾರ್ವತಮ್ಮ ಫೋನ್ ಮಾಡಿ 'ರ' ಇಂದ ಹೆಸರು ಕೂಡಿ ಬರ್ತಿದೆ ಅಂತ ಹೇಳಿದ್ರು. ರಮ, ರಚಿತಾ...ಆ ತರ. ನಾನು ಅಮ್ಮನಿಗೆ ಹೇಳಿದ್ದೆ. ಪ್ಲೀಸ್ ಇಂತಹ ಹೆಸರುಗಳು ಬೇಡ ಅಂತ. ಆಮೇಲೆ ತುಂಬಾ ಹೆಸರುಗಳು ಹುಡುಕಿದ್ವಿ. ಆಗ ರಕ್ಷಿತ ಅಂತ ಯಾರೂ ಇರ್ಲಿಲ್ಲ. ಅದಕ್ಕೆ ಅದನ್ನೇ ಫೈನಲ್ ಮಾಡಿದ್ರು'' - ರಕ್ಷಿತ

ದರ್ಶನ್ ಮದುವೆ ಆಗ್ಬೇಕಿತ್ತು!

''ಅಪ್ಪನ ಹತ್ತಿರ ದರ್ಶನ್ ಮತ್ತು ದಿನಕರ್ ಅಸಿಸ್ಟೆಂಟ್ ಆಗಿದ್ರು. ಅವರಿಗೆ ನನ್ನನ್ನ ದರ್ಶನ್ ಗೆ ಕೊಟ್ಟು ಮದುವೆ ಮಾಡ್ಬೇಕು ಅಂತ ಇಷ್ಟ ಇತ್ತು. ಆಗ ನಾನು ದರ್ಶನ್ ನ ನೋಡೇ ಇರ್ಲಿಲ್ಲ. ನಾನು ಹೀರೋಯಿನ್ ಆಗೋದಕ್ಕಿಂತ ಮದುವೆ ಆಗಿ ಸೆಟ್ಲ್ ಆಗ್ಬೇಕು ಅನ್ನೋದು ಅಪ್ಪನ ಆಸೆ ಆಗಿತ್ತು'' - ರಕ್ಷಿತ

ತುಂಬಾ ಖುಷಿ ಆದ ಕ್ಷಣ

''ಅಪ್ಪು' ರಿಲೀಸ್ ಆದಾಗ ಬುರ್ಕಾ ಹಾಕೊಂಡು ಥಿಯೇಟರ್ ಗೆ ಹೋಗಿ ಮೊದಲ ಬಾರಿ ನನ್ನನ್ನ ನಾನು ನೋಡಿಕೊಂಡಿದ್ದು. ಆ ಕ್ಷಣ ನನಗೆ ತುಂಬಾ ಖುಷಿ ಆಗಿದ್ದು'' - ರಕ್ಷಿತ

ದರ್ಶನ್ ಜೊತೆ ಗಲಾಟೆ ಜಾಸ್ತಿ

''ನಾನು ಬೇರೆ ಯಾವ ಕೋ ಸ್ಟಾರ್ ಜೊತೆಗೂ ಅಷ್ಟು ಗಲಾಟೆ ಮಾಡಿಕೊಂಡಿಲ್ಲ. ದರ್ಶನ್ ಹೇಳ್ತಿದ್ರು, ''ನೀನು ನನ್ನ ಗುರುಗಳ ಮಗಳು ಅಂತ ಬಿಡ್ತಾಯಿದ್ದೀನಿ ಅಷ್ಟೆ ಅಂತ''. ಇವತ್ತು ಎಂತಹ ಕೋ ಇನ್ಸಿಡೆನ್ಸ್ ಅಂದ್ರೆ ನನ್ನ ಮಗ, ಅವರ ಮಗ ಒಂದೇ ಸ್ಕೂಲ್, ಒಂದೇ ಕ್ಲಾಸ್. ಇವತ್ತು ಮಗನ ಸ್ಕೂಲ್ ಗೆ ಹೋದಾಗ, ಅವರು ಸಿಗ್ತಾರೆ'' - ರಕ್ಷಿತ

ರಮ್ಯಾಗೆ ಬೈದಿದ್ದೆ!

''ನನಗೆ ಸುಮ್ನೆ ಇರುವುದಕ್ಕೆ ಬರಲ್ಲ. ನಾನು ಒಂದಿನ ರಮ್ಯಾಗೆ ಫೋನ್ ಮಾಡಿ ಬೈದಿರುವುದು ಉಂಟು. ಹೀರೋಯಿನ್ಸ್ ಫ್ರೆಂಡ್ಸ್ ಆಗೋದು ತುಂಬಾ ಕಷ್ಟ. ನಂತರ ಇಬ್ಬರು ಒಂದು ಸಿನಿಮಾ ಮಾಡಿದ್ವಿ'' - ರಕ್ಷಿತ

ಡಾಕ್ಟರ್ ಗೆ ಕಪಾಳಕ್ಕೆ ಬಾರಿಸಿದ್ದೆ!

''ಅಪ್ಪನಿಗೆ ಹುಷಾರಿರ್ಲಿಲ್ಲ. ಡಾಕ್ಟರ್ ಹೇಳಿದ್ರು ಅವರು ಬದುಕ್ಕಲ್ಲ ಅಂತ. ನಾನು ಅವರ ಕಪಾಳಕ್ಕೆ ಬಾರಿಸಿ ಕೇಳಿದ್ದೆ ನೀವು ಇರೋದು ಏನಕ್ಕೆ ಅಂತ. ಅವರು ತುಂಬಾ ನರಳುತ್ತಿದ್ದರು. ಅವರು ನರಳುವುದು ನೋಡೋಕೆ ಆಗ್ತಿರ್ಲಿಲ್ಲ. ಶಾಂತವಾಗಿ ಹೋಗ್ಲಿ ಅಂತ ಬೇಡಿಕೊಂಡಿದ್ದೆ'' - ರಕ್ಷಿತ

ಪ್ರೇಮ್ ಭೇಟಿಯಾಗಿದ್ದು ಹೇಗೆ?

''ಹೀರೋಯಿನ್ಸ್ ಎಲ್ಲಾ ಬಾಂಬೆಯವರು ಬೇಕು. ಆದ್ರೆ 'ಜೋಗಿ' ಸಿನಿಮಾದ ಸ್ಪೆಷಲ್ ಪ್ರೋಗ್ರಾಂನಲ್ಲಿ ಡ್ಯಾನ್ಸ್ ಮಾಡುವುದಕ್ಕೆ ಮಾತ್ರ ಕನ್ನಡ ನಟಿಯರು ಬೇಕಾಗಿತ್ತು. ನನಗೆ ಸಿಟ್ಟು ಬಂದು, ಪ್ರೇಮ್ ನಂಬರ್ ತಗೊಂಡು ಫೋನ್ ಮಾಡಿ ಬೈದೆ. ಅಲ್ಲೇ ಇಬ್ಬರಿಗೂ ಕನೆಕ್ಷನ್ ಶುರುವಾಗಿದ್ದು'' - ರಕ್ಷಿತ

ನನಗಾಗಿ ಸ್ಪೆಷಲ್ ಶೋ

''ಜೋಗಿ' ಸಿನಿಮಾ ಟಿಕೆಟ್ ಕಳುಹಿಸಿದರು ಮನೆಗೆ. ನಾನು ಟಿಕೆಟ್ ಹರಿದು ಬಿಸಾಕಿದ್ದೆ. ನಂತರ ಅವರು ನನಗೆ ಅಂತ ಸ್ಪೆಷಲ್ ಶೋ ಮಾಡಿದ್ರು. ನಾನು ಸಿನಿಮಾ ನೋಡಿದ್ಮೇಲೆ ಮಾತನಾಡೋಕೆ ಶುರುಮಾಡಿದ್ದು. ಮಾತುಕತೆ ಆಮೇಲೆ ಜಾಸ್ತಿ ಆಯ್ತು'' - ರಕ್ಷಿತ

ಮದುವೆ ಆಗಿದ್ದು....

''ಒಂದಿನ ಮನೆಗೆ ಬಂದು ಅಮ್ಮನ ಜೊತೆ ಮಾತನಾಡಿದರು. ಮದುವೆ ಆಗ್ಬೇಕು ಅಂತ. ಅಮ್ಮ ಒಪ್ಪಿಕೊಂಡು ಬಿಟ್ಟರು. ಮದುವೆ ಮನೆಯಲ್ಲಿ ಅಮ್ಮ ಪ್ರೇಮ್ ಹತ್ರ ಬಂದು ಹೇಳಿದ್ದಾರೆ, ಬೇಡ...ಕಾರ್ ಇದೆ. ಓಡಿ ಹೋಗು. ಇವಳ ಹತ್ರ ಕಷ್ಟ ಅಂತ. ಆಮೇಲೆ ಬೆಳಗ್ಗೆ ಗಂಡು ಇಲ್ಲ. ದಿ ಕ್ಲಬ್ ನಲ್ಲಿ ಪ್ರೇಮ್ ಮಲಗಿದ್ದರು. ಕೊನೆಗೆ ಬಂದು ಮದುವೆ ಆದರು'' - ಪ್ರೇಮ್

ಥ್ಯಾಂಕ್ಸ್...

''ನಾನು ತುಂಬಾ ಜೋವಿಯಲ್. ನಾನು ಎಷ್ಟು ನಗ್ತೀನಿ, ಅದರ ಹಿಂದೆ ತುಂಬಾ ನೋವಿನ ಕಥೆ ಇದೆ. ಇದನ್ನೆಲ್ಲಾ ನಾನು ಇಲ್ಲಿಯವರೆಗೂ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಜೀ ಕನ್ನಡ ವಾಹಿನಿಗೆ ತುಂಬಾ ಥ್ಯಾಂಕ್ಸ್'' - ರಕ್ಷಿತ.

English summary
Kannada Actress Rakshita's life story was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada