For Quick Alerts
  ALLOW NOTIFICATIONS  
  For Daily Alerts

  ನಟಿ ರಕ್ಷಿತಾ ಅಭಿನಯ ಬಿಟ್ಟಿದ್ದು ಪ್ರೇಮ್‌ಗಾಗಿ: ಕಾರಣ ತಿಳಿಸಿದ ನಟಿ!

  |

  ನಟಿ ರಕ್ಷಿತಾ ಸಿನಿಮಾಗಳಿಂದ ಹಲವು ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಒಂದು ಕಾಲದಲ್ಲಿ ನಟಿ ರಕ್ಷಿತಾ ಕನ್ನಡದ ಚಿತ್ರರಂಗದ ಟಾಪ್ ನಟಿಯಾಗಿದ್ದರು. ನಂಬರ್ ಒನ್ ಸ್ಥಾನದಲ್ಲಿ ಇದ್ದ ನಟಿ ರಕ್ಷಿತಾ, ನಟನೆಗೆ ಗುಡ್ ಬೈ ಹೇಳಿದರು. ಹಲವು ವರ್ಷಗಳ ಕಾಲ ರಕ್ಷಿತಾ ಬೆಳ್ಳಿ ಪರದೆ ಇಂದ ದೂರ ಉಳಿದೇ ಬಿಟ್ಟರು.

  ಆದರೆ ರಕ್ಷಿತಾ ತಮಗೆ ಬೇಡಿಕೆ ಇರುವಾಗಲೇ ಮದುವೆ ಆಗಿ, ನಟನಗೆ ಗುಡ್ ಬೈ ಹೇಳಿದರು. ಈಗ ಮತ್ತೆ ರಕ್ಷಿತಾ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡದ 'ಏಕ್ ಲವ್‌ ಯಾ' ಚಿತ್ರದ ಮೂಲಕ ಸದ್ದು ಮಾಡಿ, ಸುದ್ದಿ ಆಗುತ್ತಿದ್ದಾರೆ. ಈ ಚಿತ್ರದ ಮೂಲಕ ರಕ್ಷಿತಾ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

  ಕಿರುತೆರೆಯಿಂದ ಮತ್ತೆ ಹಿರಿತೆರೆಗೆ ಹಾರಿದ ಆಂಕರ್ ಅನುಶ್ರೀ
  ಅಷ್ಟಕ್ಕೂ ರಕ್ಷಿತಾ ನಟನೆ ಬಿಟ್ಟಿದ್ದು ಯಾಕೆ?. ನಟನ ಇಂದ ದೂರ ಉಳಿಯುವುದ ರಕ್ಷಿತಾಗೆ ಸುಲಭದ ವಿಚಾರ ಆಗಿತ್ತಾ? ಎನ್ನುವ ಬಗ್ಗೆ ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ರಕ್ಷಿತಾ ಹೇಳಿಕೊಂಡಿದ್ದಾರೆ.

  ಮದುವೆಗಾಗಿ ನಟನೆ ಬಿಟ್ಟ ನಟಿ ರಕ್ಷಿತಾ!

  ಮದುವೆಗಾಗಿ ನಟನೆ ಬಿಟ್ಟ ನಟಿ ರಕ್ಷಿತಾ!

  ನಟಿ ರಕ್ಷಿತಾ 'ಏಕ್‌ ಲವ್‌ ಯಾ' ಚಿತ್ರದ ಪ್ರಚಾರದ ವೇಳೆ ಸಂದರ್ಶನದಲ್ಲಿ ತಮ್ಮ ಸಿನಿಮಾ ಜರ್ನಿ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ನಟಿ ರಕ್ಷಿತಾ ನಟನೆ ಬಿಟ್ಟಿದ್ದು ಯಾಕೆ ಎಂದು ಹೇಳಿಕೊಂಡಿದ್ದಾರೆ. ಮದುವೆಯ ಬಳಿಕ ಸಿನಿಮಾಗಳಲ್ಲಿ ನಟಿಸಬಾರದು ಎಂದು ರಕ್ಷಿತಾ ನಿರ್ಧಸಿದ್ದರಂತೆ. ಅದೇ ಪ್ರಕಾರ ಅವರು ಮದುವೆ ಬಳಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿಲ್ಲ. ಮನೆ, ಮಕ್ಕಳು ಅಂತ ಕುಟುಂಬ ಮತ್ತು ವೈಯಕ್ತಿಕ ವಿಚಾರಗಳಲ್ಲಿ ರಕ್ಷಿತಾ ಅವರು ನಿರತರಾಗಿದ್ದರು. ಈ ಬಗ್ಗೆ ರಕ್ಷಿತಾ ಹೇಳಿಕೊಂಡಿದ್ದಾರೆ.

  ಬಣ್ಣ ಹಚ್ಚೋದನ್ನು ಬಿಡಲು ಬಲು ಕಷ್ಟ ಆಗಿತ್ತಂತೆ!

  ಬಣ್ಣ ಹಚ್ಚೋದನ್ನು ಬಿಡಲು ಬಲು ಕಷ್ಟ ಆಗಿತ್ತಂತೆ!

  2002ರಲ್ಲಿ 'ಅಪ್ಪು' ಚಿತ್ರದಲ್ಲಿ ಅಭಿನಯಿಸುವ ಮೂಲಕ ನಟಿ ರಕ್ಷಿತಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅಲ್ಲಿಂದ ರಕ್ಷಿತಾ ಅವರು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡದ ಸ್ಟಾರ್‌ ನಟರ ಜೊತೆಗೆ ರಕ್ಷಿತಾ ತೆರೆಹಂಚಿಕೊಂಡಿದ್ದಾರೆ. ಅಲ್ಲದೇ ಬಹುತೇಕ ಯಶಸ್ವಿ ಸಿನಿಮಾಗಳಲ್ಲಿಯೇ ಅವರು ನಟಿಸಿದ್ದಾರೆ. ಹಾಗಾಗಿ ರಕ್ಷಿತಾ ಅವರಿಗೆ ನಟನೆ ಬಿಡುವುದು ತುಂಬಾನೇ ಕಷ್ಟಕರವಾದ ಸಂಗತಿ ಆಗಿತ್ತಂತೆ. ಹಲವು ವರ್ಷಗಳು ಬಣ್ಣ ಹಚ್ಚಿ ಏಕಾಏಕಿ ಅದರಿಂದ ದೂರ ಉಳಿಯಬೇಕು ಎನ್ನುವ ಗಟ್ಟಿ ನಿರ್ಧಾರ ತುಂಬಾನೇ ಕಷ್ಟಕರವಾಗಿತ್ತು ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.

  ಪ್ರೇಮ್ ಕುಟುಂಬದ ಪರಿಚಯವೇ ಇರಲಿಲ್ಲವಂತೆ!

  ಪ್ರೇಮ್ ಕುಟುಂಬದ ಪರಿಚಯವೇ ಇರಲಿಲ್ಲವಂತೆ!

  ಇನ್ನು ಮದುವೆ ಮತ್ತು ಪ್ರೇಮ್ ಬಗ್ಗೆ ಮಾತನಾಡಿರುವ ರಕ್ಷಿತಾ ಒಂದಷ್ಟು ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿದ್ದಾರೆ. ನಿರ್ದೇಶಕ ಪ್ರೇಮ್ ತುಂಬಾ ಅವಸರದಲ್ಲಿ ಮದುವೆ ಆದರಂತೆ. ಮದುವೆ ನಿಶ್ಚಯ ಆದ ಮೇಲೆ ಹೆಚ್ಚು ದಿನ ಇರಲಿಲ್ಲವಂತೆ. ಹಾಗಾಗಿ ರಕ್ಷಿತಾ ಅವರಿಗೆ ನಿಶ್ಚಿತಾರ್ಥದ ದಿನದವರೆಗೂ ಪ್ರೇಮ್ ಮನೆಯವರ ಪರಿಚಯವೇ ಇರಲಿಲ್ಲವಂತೆ. ಅಷ್ಟೇ ಯಾಕೆ ಅವರು ಪ್ರೇಮ್ ಅವರ ತಾಯಿಯನ್ನು ನೋಡಿದ್ದೇ ನಿಶ್ಚಿತಾರ್ಥದ ದಿನವಂತೆ.

  ನಿರ್ಮಾಪಕಿಯಾಗಿ ರಕ್ಷಿತಾ ಕಮ್‌ಬ್ಯಾಕ್!

  ನಿರ್ಮಾಪಕಿಯಾಗಿ ರಕ್ಷಿತಾ ಕಮ್‌ಬ್ಯಾಕ್!

  2007ರ ಬಳಿಕ ನಟನೆಗೆ ಟಾಟಾ ಮಾಡಿದ್ದ ರಕ್ಷಿತಾ ಈಗ 'ಏಕ್ ಲವ್‌ ಯಾ' ಚಿತ್ರದ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಇದರೊಂದಿಗೆ ರಕ್ಷಿತಾ ನಿರ್ಮಾಪಕಿಯ ಪಟ್ಟಕ್ಕೇರಿದ್ದಾರೆ. ಜೊತೆಗೆ ಸ್ಪೆಷಲ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಕ್ಷಿತಾ ಅವರು ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಅಡಿ 'ಏಕ್ ಲವ್ ಯಾ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಇದೇ ಫೆಬ್ರವರಿ 24ಕ್ಕೆ ರಿಲೀಸ್ ಆಗುತ್ತಿದೆ.

  English summary
  Actress Rakshita Reveal Because Of Marriage She Stopped Acting
  Tuesday, February 22, 2022, 9:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X