»   » ನಟಿ ರಮ್ಯಾ ಬಾರ್ನಾ ರಹಸ್ಯ ಮದುವೆಯ ಅಸಲಿ ಕಥೆ

ನಟಿ ರಮ್ಯಾ ಬಾರ್ನಾ ರಹಸ್ಯ ಮದುವೆಯ ಅಸಲಿ ಕಥೆ

Posted By:
Subscribe to Filmibeat Kannada

ಕನ್ನಡ, ತೆಲುಗು, ತಮಿಳು ಹಾಗೂ ತುಳು ಭಾಷೆಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನಟಿ ರಮ್ಯಾ ಬಾರ್ನಾ ಸದ್ದಿಲ್ಲದೇ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ನಿನ್ನೆ (ಜುಲೈ 14) ಬಹಿರಂಗವಾಯಿತು. ಸ್ವತಃ ಈ ವಿಷ್ಯವನ್ನ ನಟಿ ರಮ್ಯಾ ಬಾರ್ನಾ ಅವರೇ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

ಆದ್ರೆ, ರಮ್ಯಾ ಬಾರ್ನಾ ಅವರು ಅಷ್ಟು ರಹಸ್ಯವಾಗಿ ಮದುವೆ ಆಗಿದ್ದೇಕೆ? ಮದುವೆ ಆಗಿದ್ದರೂ ಹೊರ ಜಗತ್ತಿನ ಮುಂದೆ ಮುಚ್ಚಿಟ್ಟಿದ್ದು ಯಾಕೆ ಎಂಬ ಅನುಮಾನ, ಕುತೂಹಲ ಎಲ್ಲರನ್ನ ಕಾಡಿತ್ತು.

ಈ ಕುತೂಹಲಗಳಿಗೆ, ಗೊಂದಲಗಳಿಗೆ ಸ್ವತಃ ರಮ್ಯಾ ಬಾರ್ನಾ ಅವರೇ ತೆರೆ ಎಳೆದಿದ್ದಾರೆ. ತಾವು ಯಾವಾಗ ಮದುವೆ ಆಗಿದ್ದು, ಯಾರ ಜೊತೆ ಮದುವೆ ಆಗಿದ್ದು, ಮತ್ತು ಯಾಕೆ ಸೀಕ್ರೆಟ್ ಆಗಿಟ್ಟಿದ್ದರು ಎಂಬುದನ್ನ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಕಾರಣವೇನು ಮತ್ತು ರಮ್ಯಾ ಬಾರ್ನಾ ಮದುವೆ ಆಗಿರುವ ಹುಡುಗ ಯಾರು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಮೇ 29 ರಿಜಿಸ್ಟರ್ ಮದುವೆ

ಫಹಾದ್ ಅಲಿ ಖಾನ್ ಎಂಬ ಯುವಕನ ಜೊತೆ ನಟಿ ರಮ್ಯಾ ಬಾರ್ನಾ ಮೇ 29 ರಂದು ಮದುವೆ ಆಗಿದ್ದಾರೆ. ಶಿವಾಜಿನಗರದ ರಿಜಿಸ್ಟರ್ ಕಛೇರಿಯಲ್ಲಿ ಇಬ್ಬರು ರಿಜಿಸ್ಟರ್ ಮದುವೆ ಆಗಿದ್ದಾರೆ.

ಫವಾದ್ ಅಲಿ ಖಾನ್ ಯಾರು?

29 ವರ್ಷದ ಫಹಾದ್ ಅಲಿ ಖಾನ್ ಶಿವಾಜಿನಗರದ ನಿವಾಸಿ. ಜೆಡಿಎಸ್ ಶಾಸಕ ಜಮೀರ್ ಅಹ್ಮಮದ್ ಖಾನ್ ಅವರ ಸಂಬಂಧಿ. ಸ್ವಂತ ಬಿಸ್ ನೆಸ್ ಮಾಡುತ್ತಿರುವ ಫಹಾದ್ ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ.

ರಮ್ಯಾ-ಫಹಾದ್ ಪರಿಚಯ ಆಗಿದ್ದೆಲ್ಲಿ?

2012ರಲ್ಲಿ 'ಏನಿದು ಮನಸ್ಸಲ್ಲಿ' ಎಂಬ ಸಿನಿಮಾ ಸೆಟ್ಟೇರಿತ್ತು. ಈ ಚಿತ್ರಕ್ಕೆ ರಮ್ಯಾ ಬಾರ್ನಾ ಮತ್ತು ವಿಜಯ ರಾಘವೇಂದ್ರ ನಾಯಕ-ನಾಯಕಿ ಆಗಿದ್ದರು. ಮಾಸ್ಟರ್ ಕೀಶನ್ ತಂದೆ ಶ್ರೀಕಾಂತ್ ನಿರ್ದೇಶಕರಾಗಿದ್ದರು. ಆದ್ರೆ, ಕಾರಣಾಂತರಗಳಿಂದ ಈ ಸಿನಿಮಾ ನಿಂತು ಹೋಯ್ತು. ನಂತರ ಈ ಚಿತ್ರಕ್ಕೆ ನಿಯಾಜ್ ನಿರ್ದೇಶನ ಜವಾಬ್ದಾರಿ ವಹಿಸಿಕೊಂಡು, ನಟ ವಿಜಯ ರಾಘವೇಂದ್ರ ಜಾಗಕ್ಕೆ ಫಹಾದ್ ಅಲಿ ಖಾನ್ ಅವರನ್ನ ಕರೆತಂದರು. ಅಲ್ಲಿಂದಲೇ ರಮ್ಯಾ ಮತ್ತು ಫಹಾದ್ ಪರಿಚಯ ಶುರುವಾಗಿದ್ದು. ಅಲ್ಲಿಂದ ಶುರುವಾದ ಇವರಿಬ್ಬರ ಸ್ನೇಹ ಪ್ರೀತಿಯಾಯಿತು, ಆ ಪ್ರೀತಿ ಮುಂದೆ ಮದುವೆಗೂ ಕಾರಣವಾಯಿತು.

ಆರತಕ್ಷತೆಗೆ ಸಿದ್ದತೆ

ರಹಸ್ಯವಾಗಿ ಮದುವೆ ಆಗಿದ್ದ ರಮ್ಯಾ ಬಾರ್ನಾ ಮತ್ತು ಫಹಾದ್ ಅಲಿ ಖಾನ್ ಅವರು, ಚಿತ್ರರಂಗದ ಗಣ್ಯರಿಗಾಗಿ ಆರತಕ್ಷತೆ ಮಾಡಿಕೊಳ್ಳುವ ಸಿದ್ದತೆ ಮಾಡಿಕೊಂಡಿದ್ದಾರಂತೆ. ರಹಸ್ಯವಾಗಿ ಮದುವೆ ಆದ ಜೋಡಿ, ಈಗ ಆರತಕ್ಷತೆ ಮೂಲಕ ತಮ್ಮ ಮದುವೆಯ ವಿಷ್ಯವನ್ನ ಎಲ್ಲರಿಗೂ ತಿಳಿಸುವ ಉದ್ದೇಶ ಹೊಂದಿದ್ದರಂತೆ.

ರಹಸ್ಯ ಮದುವೆಗೆ ಕಾರಣವೇನು?

ಅಸಲಿಗೆ ರಮ್ಯಾ ಬಾರ್ನಾ ಹಾಗೂ ಫಹಾದ್ ಅಲಿ ಖಾನ್ ಅವರದ್ದು ಪ್ರೇಮ ವಿವಾಹ. ಆದ್ರೆ, ರಹಸ್ಯ ಮದುವೆಗೆ ಕಾರಣ ಕೇಳಿದಾಗ, ''ಅಮ್ಮನಿಗೆ ಹುಷಾರಿರಲಿಲ್ಲ. ಆ ಸಮಯದಲ್ಲೇ ವಿವಾಹ ನೋಂದಾಣಿ ಆಯಿತು. ಅಮ್ಮನ ಆರೋಗ್ಯ ಸುಧಾರಿಸಿದ ನಂತರ ಆರತಕ್ಷತೆ ಮಾಡಿಕೊಳ್ಳುವ ಆಲೋಚನೆ ಇತ್ತು. ಅದಕ್ಕೂ ಮುಂಚೆ ಸುದ್ದಿ ಹಬ್ಬಿದೆ'' ಎಂದು ಮಾಧ್ಯಮಗಳಿಗೆ ರಮ್ಯಾ ಬಾರ್ನಾ ತಿಳಿಸಿದ್ದಾರೆ.

ರಮ್ಯಾ ಬಾರ್ನಾ ಅವರ ಚಿತ್ರಗಳು

'ಹನಿಹನಿ' ಚಿತ್ರದ ಮೂಲಕ ಪರಿಚಯವಾದ ರಮ್ಯಾ ಬಾರ್ನಾ, 'ನೀನ್ಯಾರೇ', 'ಪಂಚರಂಗಿ', 'ಹುಡುಗ್ರು', 'ಲೈಫು ಇಷ್ಟೇನೆ', 'ಪರಮಾತ್ಮ', 'ಬುಲ್ ಬುಲ್', ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ವಿಜಯ ರಾಘವೇಂದ್ರ ಅಭಿನಯದ 'ಟಾಸ್' ಚಿತ್ರದಲ್ಲಿ ರಮ್ಯಾ ಬಾರ್ನಾ ನಾಯಕಿಯಾಗಿದ್ದಾರೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ.

English summary
Actress Ramya Barna Disclosed Everything to a TV Channel Regarding her Marriage on Friday (July 14, 2017) evening. While speaking to media on phone, she confirmed that she married Fahad, (a relative of JDS MLA Zameer Ahmed) on May 29, 2017.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more