»   » ಮಂಡ್ಯದಲ್ಲಿ ಹೊಸ ಮನೆಗೆ ನಟಿ ರಮ್ಯಾ ಗೃಹಪ್ರವೇಶ

ಮಂಡ್ಯದಲ್ಲಿ ಹೊಸ ಮನೆಗೆ ನಟಿ ರಮ್ಯಾ ಗೃಹಪ್ರವೇಶ

Posted By:
Subscribe to Filmibeat Kannada

ಕಡೆಗೂ ಗೋಲ್ಡನ್ ಗರ್ಲ್ ರಮ್ಯಾ ಅವರು ತಮ್ಮ ಕನಸಿನ ಮನೆಗೆ ಗೃಹಪ್ರವೇಶ ಮಾಡಿದ್ದಾರೆ. ಮಂಡ್ಯದಲ್ಲಿ ಹೊಸ ಮನೆಗೆ ಶುಕ್ರವಾರ (ನ.16) ಗೃಹಪ್ರವೇಶ ಮಾಡಿದರು. ಮಂಡ್ಯದ ಕೆ.ಆರ್.ರಸ್ತೆಯಲ್ಲಿರುವ 9, 200ಚದರ ಅಡಿ ವಿಸ್ತೀರ್ಣದ ವಿಶಾಲ ಮನೆಗೆ ಅವರ ಪ್ರವೇಶವಾಗಿದೆ.

ಈ ಮೂಲಕ ರಮ್ಯಾ ಅವರು ಮಂಡ್ಯದಲ್ಲಿ ನೆಲೆಸಿ ಅಲ್ಲಿನ ಜನರಿಗೆ ಇನ್ನಷ್ಟು ಹತ್ತಿರವಾಗಬೇಕೆಂಬ ಕನಸು ನೆರವೇರಿದೆ. ಈ ಭವ್ಯವಾದ ಭಂಗಲೆ ಮಾಜಿ ಶಾಸಕ ಸಾದತ್ ಆಲಿಖಾನ್ ಅವರಿಗೆ ಸೇರಿದ್ದು ಸುಮಾರು ಐವತ್ತು ವರ್ಷಗಳಷ್ಟು ಹಿಂದೆ ನಿರ್ಮಾಣವಾಗಿದೆ. ಆದರೂ ಭಂಗಲೆ ಮಾತ್ರ ಗಟ್ಟಿಮುಟ್ಟಾಗಿದ್ದು ಸಕಲ ವ್ಯವಸ್ಥೆಗಳೂ ಇವೆ.


ಉತ್ತರ ದಿಕ್ಕಿಗೆ ಇರುವ ಮುಖ್ಯದ್ವಾರ, ನೆಲಮಹಡಿಯಲ್ಲಿ ನಾಲ್ಕು ಬೆಡ್ ರೂಮ್, ವಿಶಾಲವಾದ ಹಜಾರ ಇದೆ. ಇನ್ನು ಎರಡನೇ ಮಹಡಿಯಲ್ಲಿ 3 ಬೆಡ್ ರೂಮ್ ಗಳಿವೆ. ಪಾರ್ಕಿಂಗ್ ವ್ಯವಸ್ಥೆಗೂ ಸಾಕಷ್ಟು ವಿಶಾಲವಾದ ಸ್ಥಳಾವಕಾಶವನ್ನು ಒಳಗೊಂಡಿದೆ. ಶುಕ್ರವಾರ ಸರಳವಾದ ಕಾರ್ಯಕ್ರಮದ ಮೂಲಕ ಮನೆಗೆ ಪೂಜೆ ಮಾಡಿ ಗೃಹಪ್ರವೇಶ ಮಾಡಲಾಯಿತು.

ಏಳು ವರ್ಷಗಳಿಂದ ಈ ಭಂಗಲೆ ಖಾಲಿಯಾಗಿ ಉಳಿದಿತ್ತು. ಪಕ್ಕಾ ವಾಸ್ತು ಪ್ರಕಾರ ಕಟ್ಟಿರುವ ಈ ಭಂಗಲೆಯ ಆವರಣದಲ್ಲಿ ಸಾಕಷ್ಟು ಗಿಡಮರಗಳಿದ್ದು ಆಹ್ಲಾದಕರ ವಾತಾವರಣವನ್ನೂ ನಿರ್ಮಿಸಿವೆ. ಅಂದಹಾಗೆ ಈ ಭಂಗಲೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೋ ಅಥವಾ ಭೋಗ್ಯಕ್ಕೆ ಹಾಕಿಕೊಂಡಿದ್ದಾರಾ ಎಂಬ ಬಗ್ಗೆ ಮಾಹಿತಿ ಇಲ್ಲ.

ಆರು ತಿಂಗಳ ಮಟ್ಟಿಗೆ ಇಂತಿಷ್ಟು ಎಂದು ಹಣ ಪಾವತಿಸಿದ್ದಾರೆ ಎನ್ನಲಾಗಿದೆ. ಮುಂದಿನ ಲೋಕಸಭೆ ಚುನಾವಣೆಗೂ ರಮ್ಯಾ ಸ್ಪರ್ಧಿಸುತ್ತಿದ್ದು ಮಂಡ್ಯಗೆ ಭೇಟಿ ನೀಡಿದಾಗಲೆಲ್ಲಾ ಈ ಮನೆಗೆ ಭೇಟಿ ನೀಡಲಿದ್ದಾರೆ. ಮಂಡ್ಯದಲ್ಲಿ ಅವರ ಅಧಿಕೃತ ನಿವಾಸ ಇದು. (ಏಜೆನ್ಸೀಸ್)

English summary
The youngest MP in the current Parliament, Kannada actress Ramya moves new house in Manya on 15th November. She performes housewarming ceremony along with family members. The 9, 200 square feet house belongs to former legislator Saadat Ali Khan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada