ನಟಿ ಸಾಕ್ಷಿಯ ದಿಟ್ಟತನಕ್ಕೆ ನೆಟ್ಟಿಗರ ಮೆಚ್ಚುಗೆ
ತೆಲುಗು ನಟಿ ಸಾಕ್ಷಿ ಇತ್ತೀಚಿಗಷ್ಟೆ ತಮಗೆ ಆದ ಅನುಭವನ್ನು ಹೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ, ವಿಡಿಯೋಗಳನ್ನು ನೋಡಿ ಆಕೆಗೆ 1 ಕೋಟಿ ಆಫರ್ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದೀಗ ನಟಿ ಸಾಕ್ಷಿಯ ದಿಟ್ಟತನಕ್ಕೆ ನೆಟ್ಟಿಗರು ಮೆಚ್ಚಿಕೊಂಡಿದ್ದರು.
ಕಳೆದ ವಾರ ನಟಿ ಸಾಕ್ಷಿ ಸ್ವತಃ ತಮಗೆ ಆದ ಅನುಭವದ ಬಗ್ಗೆ ಮಾತನಾಡಿದ್ದರು. '' ನನ್ನ ಫೋಟೋ, ವಿಡಿಯೋಗಳನ್ನು ನೋಡಿ ಕೆಲವರು ಒಂದು ರಾತ್ರಿಗೆ 1 ಕೋಟಿ ಆಫರ್ ನೀಡುತ್ತಿದ್ದಾರೆ. ನನಗೆ ಆ ರೀತಿ ಆಫರ್ ಮಾಡ್ತಿರೋ ವ್ಯಕ್ತಿಗಳು ಮೂರ್ಖರು. ಯಾಕಂದ್ರೆ, ನಾನು ಮಾರಾಟಕ್ಕಿಲ್ಲ ಎಂಬ ವಿಷ್ಯವನ್ನ ನೆನಪಿಡಬೇಕು'' ಎಂದು ಆ ಪಡ್ಡೆ ಹೈಕ್ಳಿಗೆ ತಿರುಗೇಟು ನೀಡಿದ್ದರು.
ಸಾಕ್ಷಿ ಅವರ ಧೈರ್ಯವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಹೀಗಿದ್ದರೂ ಕೂಡ ಸಾಕ್ಷಿ ಆ ದಿನ ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ತಮ್ಮ ನಡೆಗೆ ಬೆಂಬಲ ಸಿಕ್ಕರು ಈ ರೀತಿ ಯಾಕೆ ಮಾಡಿದ್ದರು ಎಂಬುದು ಮಾತ್ರ ಗೊತ್ತಿಲ್ಲ.

ಸಾಕ್ಷಿ ಚೌಧರಿ 2017ರಲ್ಲಿ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸದ್ಯ ಕನ್ನಡದ 'ರುಸ್ತುಮ್' ಚಿತ್ರದ ಒಂದು ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











