For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗೆ ದಕ್ಷಿಣ ಭಾರತದ ಬೆಳ್ಳಕ್ಕಿ ಸಮಂತಾ

  By Rajendra
  |

  ದಕ್ಷಿಣ ಭಾರತದ ಹೊಸ ಬೆಳ್ಳಕ್ಕಿ ಸಮಂತಾ ಈಗ ಬಾಲಿವುಡ್ ಗೆ ಹಾರಿದ್ದಾರೆ. ಇತ್ತೀಚೆಗೆ ದಕ್ಷಿಣದ ಇಬ್ಬರು ಖ್ಯಾತ ನಿರ್ದೇಶಕರು ತಮ್ಮ ಚಿತ್ರದಲ್ಲಿ ಅಭಿನಯಿಸುವಂತೆ ಆಫರ್ ನೀಡಿದರೂ ಸಮಂತಾ ಸಮ್ಮತಿಸಿರಲಿಲ್ಲ. ಮಣಿರತ್ನಂ ಹಾಗೂ ಶಂಕರ್ ಚಿತ್ರಗಳನ್ನು ಒಲ್ಲೆ ಎಂದಿದ್ದರು.

  ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ 'ನುವ್ವು ವಸ್ತಾನಂಟೆ ನೇನು ವದ್ದಂಟಾನ' ಚಿತ್ರ ಹಿಂದಿಗೆ ರೀಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಅಭಿನಯಿಸಲು ಸಮಂತಾ ಮುಂದಾಗಿದ್ದಾರೆ. ತೆಲುಗು ಚಿತ್ರಕ್ಕೆ ಡಾನ್ಸ್ ಮಾಸ್ಟರ್ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದರು. ಹಿಂದಿ ರೀಮೇಕ್ ಚಿತ್ರವನ್ನೂ ಅವರೇ ನಿರ್ದೇಶಿಸಲಿದ್ದಾರೆ.

  ಇತ್ತೀಚೆಗೆ ಪ್ರಭುದೇವ ನಿರ್ದೇಶನದ ಹಿಂದಿ ಚಿತ್ರ 'ರೌಡಿ ರಾಥೋಡ್' ಬಾಕ್ಸಾಫೀಸಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಈ ಚಿತ್ರ ಬಾಕ್ಸಾಫೀಸಲ್ಲಿ ರು.130ಕೋಟಿ ಕಲೆಕ್ಷನ್ ಮಾಡಿತ್ತು. ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ವೃತ್ತಿ ಜೀವನದಲ್ಲೂ ಈ ಚಿತ್ರ ಭರ್ಜರಿ ತಿರುವು ನೀಡಿದೆ.

  'ನುವ್ವು ವಸ್ತಾನಂಟೆ ನೇನು ವದ್ದಂಟಾನ' ಚಿತ್ರದಲ್ಲಿ ತ್ರಿಷಾ ಅಭಿನಯಿಸಿದ್ದರು. ತ್ರಿಷಾಗೆ ಜೋಡಿಯಾಗಿದ್ದರು ಸಿದ್ಧಾರ್ಥ್. ಹಿಂದಿಯ ರೀಮೇಕ್ ಚಿತ್ರಕ್ಕೆ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಾಯಕ ನಟನ ತಲಾಷ್ ನಡೆಯುತ್ತಿದೆ. ಸಮಂತಾ ಅಭಿನಯದ ಮತ್ತೊಂದು ಭಾರಿ ಬಜೆಟ್ ಚಿತ್ರದ 'ಈಗ' ಜುಲೈ 6, 2012ರಂದು ತೆರೆಕಾಣುತ್ತಿದೆ.

  'ಈಗ' ಚಿತ್ರದ ಗಮನಾರ್ಹ ಪಾತ್ರದಲ್ಲಿ ಸುದೀಪ್ ಅಭಿನಯಿಸಿರುವುದು ಗೊತ್ತೇ ಇದೆ. ಈ ಹಿಂದೆ ಮಹೇಶ್ ಬಾಬು ಜೊತೆ 'ದೂಕುಡು' ಚಿತ್ರದಲ್ಲಿ ಸಮಂತಾ ಅಭಿನಯಿಸಿದ್ದರು. ಆ ಚಿತ್ರ ಬಾಕ್ಸಾಫೀಸಲ್ಲಿ ಭಾರಿ ಕಲೆಕ್ಷನ್ ಮಾಡಿತ್ತು. 'ಏ ಮಾಯ ಚೇಸಾವೋ' ಹಾಗೂ 'ಬೃಂದಾವನಂ' ಚಿತ್ರಗಳು ಭಾರಿ ಸದ್ದು ಮಾಡಿದ್ದವು.

  ಈಗ ಈಕೆಯ ಸಂಭಾವನೆ ಒಂದು ಕೋಟಿಗೆ ತಲುಪಿದೆ. ಈ ಹಿಂದೊಮ್ಮೆ ಜಾಹೀರಾತು ಒಂದಕ್ಕೆ ಈಕೆ ಪಡೆದ ಸಂಭಾವನೆ ರು.30 ಲಕ್ಷಗಳು. ಈ ಜಾಹೀರಾತಿಗಾಗಿ ಸಮಂತಾ ನೀಡಿದ ಸಮಯ ಕೇವಲ ಎರಡು ದಿನಗಳು ಎಂಬುದು ವಿಶೇಷ.

  ಸಮಂತಾ ಪೂರ್ಣ ಹೆಸರು ಸಮಂತಾ ರುತ್ ಪ್ರಭು. ಈಕೆಯ ಪೋಷಕರು ತೆಲುಗು ಹಾಗೂ ಮಲಯಾಳಂ ಮೂಲದವರು. ಹುಟ್ಟಿದ್ದು ಕೇರಳದಲ್ಲಾದರೂ ಬೆಳೆದದ್ದು ಚೆನ್ನೈನಲ್ಲಿ. ಟೀನ್ ಏಜ್ ಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟರು. ಚೆನ್ನೈನ ಸ್ಟೆಲ್ಲಾ ಮೇರಿ ಕಾಲೇಜಿನಲ್ಲಿ ಓದಿರುವ ಸಮಂತಾ ಕಾಮರ್ಸ್ ಪದವಿಧರೆ. (ಏಜೆನ್ಸೀಸ್)

  English summary
  South Indian actress Samantha is getting ready to make her Bollywood debut with the remake of Telugu super hit film Nuvvostanante Nenoddantana. According to sources choreographer cum actor cum director Prabhu Deva is planning to remake Nuvvostanante Nenoddantana in Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X