»   » ಚೊಚ್ಚಲ ಮಗು ನಿರೀಕ್ಷೆಯಲ್ಲಿ ನಟಿ ಸಮೀರಾ ರೆಡ್ಡಿ

ಚೊಚ್ಚಲ ಮಗು ನಿರೀಕ್ಷೆಯಲ್ಲಿ ನಟಿ ಸಮೀರಾ ರೆಡ್ಡಿ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಜೊತೆ ವರದನಾಯಕ ಚಿತ್ರದಲ್ಲಿ ಮಿಂಚಿದ್ದ ತಾರೆ ಸಮೀರಾ ರೆಡ್ಡಿ ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಉದ್ಯಮಿ ಅಕ್ಷಯ್ ವರ್ಧೆ ಅವರನ್ನು ಜನವರಿ, 2014ರಲ್ಲಿ ಕೈಹಿಡಿದಿದ್ದರು ಸಮೀರಾ. ಇದೀಗ ಅವರು ಚೊಚ್ಚಲ ಗರ್ಭಿಣಿ.

ಈ ಸುದ್ದಿಯನ್ನು ಸ್ವತಃ ಸಮೀರಾ ಹೇಳಿಲ್ಲವಾದರೂ ಅವರ ಆತ್ಮೀಯರು ಸಮೀರಾ ಗರ್ಭಿಣಿ ಎಂಬ ಸಿಹಿ ಸಮಾಚಾರವನ್ನು ಕೊಟ್ಟಿದ್ದಾರೆ. ಯಾರಿಗೇ ಆಗಲಿ ಚೊಚ್ಚಲ ಹೆರಿಗೆ ಎಂದರೆ ಒಂಚೂರು ಭಯ, ಸಿಕ್ಕಾಪಟ್ಟೆ ಸಂಭ್ರಮ ಇದ್ದೇ ಇರುತ್ತದೆ. [ನಟಿ ಸಮೀರಾ ರೆಡ್ಡಿ ಮದುವೆ ಫೋಟೋಗಳು]

Actress Sameera Reddy

ಸಮೀರಾ ಹಾಗೂ ವರ್ಧೆ ದಂಪತಿಗಳೂ ಅಷ್ಟೇ ತಮ್ಮ ಮಗುವಿನ ಬಗ್ಗೆ ನಾನಾ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಎರಡೂವರೆ ವರ್ಷಗಳಷ್ಟು ಸುದೀರ್ಘ ಡೇಟಿಂಗ್ ಮಾಡಿದ್ದ ಈ ಜೋಡಿ ಕಡೆಗೆ ಬಾಳದೋಣಿಯಲ್ಲಿ ಹಾಯಾಗಿ ಸಾಗುತ್ತಿದ್ದಾರೆ.

ಸಿನಿಮಾಗಳ ಜೊತೆಗೆ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲೂ ಮಿಂಚಿದ್ದ ಬೆಡಗಿ ಸಮೀರಾ ರೆಡ್ಡಿ. ಇವರ ಮದುವೆಗೆ ಯಾರು ಬರದಿದ್ದರೂ ವಿಜಯ್ ಮಲ್ಯ ಸಾಹೇಬರು ಮಾತ್ರ ಬಂದು ಹರಸಿ ಹೋಗಿದ್ದರು.

ಕನ್ನಡದ ಒಂದೇ ಒಂದು ಚಿತ್ರ ಬಿಟ್ಟರೆ ಹೆಚ್ಚಾಗಿ ಈ ಬೆಡಗಿ ಮಿಂಚಿದ್ದು ತೆಲುಗು, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ. ಏನೇ ಇರಲಿ ತಾಯಿಯಾಗುತ್ತಿರುವ ಸಮೀರಾಗೆ ಆರೋಗ್ಯವಂತ ಮಗು ಹುಟ್ಟಲಿ ಎಂದು ಹಾರೈಸೋಣ. (ಏಜೆನ್ಸೀಸ್)

English summary
Kannada actress Sameera Reddy, who got married early this year to businessman Akshai Varde, is said to be expecting her first child.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada