For Quick Alerts
  ALLOW NOTIFICATIONS  
  For Daily Alerts

  ಜೈಲಿನಲ್ಲೇ ವಿಜಯದಶಮಿ ಹಬ್ಬ ಆಚರಿಸಿದ ಸಂಜನಾ ಗಲ್ರಾನಿ ಮತ್ತು ರಾಗಿಣಿ

  |

  ನಾಡಿನಾದ್ಯಂತ ದಸರಾ ಹಬ್ಬದವನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಚಿತ್ರರಂಗ ಸಹ ಹಬ್ಬದ ಸಂಭ್ರಮದಲ್ಲಿದೆ. ಆದರೆ ಸ್ಯಾಂಡಲ್ ವುಡ್ ನ ಇಬ್ಬರು ನಟಿಯರು ಮಾತ್ರ ಜೈಲಿನಲ್ಲೇ ಕಾಲಕಳೆಯುವಂತಾಗಿದೆ. ಹೌದು, ಡ್ರಗ್ಸ್ ಜಾಲದ ಸಂಬಂಧ ಹರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಗಲ್ರಾನಿ ಇಬ್ಬರು ಜೈಲಿನಲ್ಲೇ ಈ ಬಾರಿ ದಸರಾ ಹಬ್ಬ ಆಚರಣೆ ಮಾಡಿದ್ದಾರೆ.

  ಸುಮಾರು ತಿಂಗಳಿಗೂ ಹೆಚ್ಚು ಸಮಯದಿಂದ ಜೈಲುವಾಸ ಅನುಭವಿಸುತ್ತಿರುವ ನಟಿ ಸಂಜನಾ ಮತ್ತು ರಾಗಿಣಿ ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ವಿಜಯದಶಮಿ ಹಬ್ಬದ ಸಮಯದಲ್ಲಾದರೂ ಜಾಮೀನು ಪಡೆದು ಮನೆಯಲ್ಲಿ ಹಬ್ಬ ಆಚರಣೆ ಮಾಡಬಹುದು ಎಂದುಕೊಂಡಿದ್ದ ನಟಿಯರ ಕನಸು ನನಸಾಗಿಲ್ಲ. ಹಾಗಾಗಿ ಜೈಲಿನಲ್ಲೇ ಹಬ್ಬ ಆಚರಣೆ ಮಾಡಬೇಕಾಗಿದೆ.

  ಸಂಜನಾ-ರಾಗಿಣಿ ಗೆ ಜಾಮೀನು ನೀಡುವಂತೆ ಬೆದರಿಕೆ ಪತ್ರ ಬರೆದವನ ಬಂಧನಸಂಜನಾ-ರಾಗಿಣಿ ಗೆ ಜಾಮೀನು ನೀಡುವಂತೆ ಬೆದರಿಕೆ ಪತ್ರ ಬರೆದವನ ಬಂಧನ

  ಮೂಲಗಳ ಪ್ರಕಾರ ನಟಿಯರಿಬ್ಬರು ಜೈಲಿನಲ್ಲೇ ಇರುವ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಿ ಹಬ್ಬ ಮಾಡಿದ್ದಾರಂತೆ. ಜೊತೆಗೆ ಆಯುಧ ಪೂಜೆಯಲ್ಲೂ ಪಾಲ್ಗೊಂಡಿದ್ದಾರೆ. ಹಬ್ಬದ ದಿನ ನೀಡುವ ವಿಶೇಷ ಒಬ್ಬಟ್ಟಿನ ಊಟವನ್ನು ಸವಿದಿದ್ದಾರೆ. ಪ್ರತೀವರ್ಷ ಮನೆಯಲ್ಲಿ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡುತ್ತಿದ್ದ ನಟಿಯರು ಈ ವರ್ಷ ಜೈಲಿನಲ್ಲಿ ಇರುವಂತೆ ಆಗಿದೆ.

  Recommended Video

  ಹೇ ಉದ್ಧವ್ ಠಾಕ್ರೆ ಎಂದು ಏಕವಚನದಲ್ಲಿ ಗಾಳಿ ಬಿಡಿಸಿದ ಕಂಗನಾ | Filmibeat Kannada

  ನಟಿ ರಾಗಿಣಿಯನ್ನು ಸೆಪ್ಟಂಬರ್ 4ರಂದು ಬಂಧಿಸಲಾಗಿದೆ. ಸೆಪ್ಟಂಬರ್ 8ರಂದು ನಟಿ ಸಂಜನಾ ಅವರನ್ನು ಬಂಧಿಸಲಾಗಿದೆ. ಇಬ್ಬರೂ ನಟಿಯರ ಜಾಮೀನು ಅರ್ಜಿ ಮುಂದಕ್ಕೆ ಹೋಗುತ್ತಲೆ ಇದೆ. ಕೊನೆಯಪಕ್ಷ ದೀಪಾವಳಿ ಹಬ್ಬಕ್ಕಾದರೂ ಜಾಮೀನು ಸಿಗಬಹುದಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ದೀಪಾಳಿಯನ್ನಾದರೂ ಕುಟುಂಬದ ಅದ್ದೂರಿಯಾಗಿ ಆಚರಿಸುತ್ತಾರಾ ಎಂದು ಕಾದುನೋಡಬೇಕು.

  English summary
  Sandalwood Actress sanjjanaa Galrani and ragini Dwivedi celebrate dasara in Jail.
  Tuesday, October 27, 2020, 14:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X