For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರುತಿಗೆ ಹೊಸ ಜವಾಬ್ದಾರಿ ಕೊಟ್ಟ ರಾಜ್ಯ ಸರ್ಕಾರ

  |

  ಕನ್ನಡ ಚಲನಚಿತ್ರ ನಟಿ ಶ್ರುತಿ ಅವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಶನಿವಾರ (ಜುಲೈ 17) ಸಿಎಂ ಕಚೇರಿ ಅಧಿಕೃತ ಆದೇಶರ ಹೊರಡಿಸಿ ಶ್ರುತಿ ಬದಲಿಗೆ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಿಸಲಾಗಿತ್ತು.

  ಇದೀಗ, ನಟಿ ಶ್ರುತಿಗೆ ರಾಜ್ಯ ಸರ್ಕಾರ ಹೊಸ ಜವಾಬ್ದಾರಿ ನೀಡಿದೆ. ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ನೂತನ ಅಧ್ಯಕ್ಷರಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

  ಶ್ರುತಿ ಸಿನಿಮಾ ಜೀವನದಲ್ಲಿ ಆ ಒಂದು ಕೊರಗು ಈಗಲೂ ಕಾಡ್ತಿದೆ!ಶ್ರುತಿ ಸಿನಿಮಾ ಜೀವನದಲ್ಲಿ ಆ ಒಂದು ಕೊರಗು ಈಗಲೂ ಕಾಡ್ತಿದೆ!

  ಸೋಮವಾರ (ಜುಲೈ 19) ಈ ಕುರಿತು ಸರ್ಕಾರದ ಮುಖ್ಯ ಕಾಯದರ್ಶಿಗಳು ಈ ಆದೇಶ ಹೊರಡಿಸಿದ್ದಾರೆ. ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಸೋಮವಾರ ಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದರು. ಇದೇ ದಿನ ನೂತನ ಆದೇಶ ಹೊರಬಂದಿರುವುದು ಗಮನಾರ್ಹ.

  ಭಜರಂಗಿ 2 ಸಿನಿಮಾದಲ್ಲಿ ಶ್ರುತಿ

  Recommended Video

  ಓದಿದ್ರೆ ಈ ಮಟ್ಟಕ್ಕೆ ಹೆಸರು ಮಾಡೋಕೆ ಆಗ್ತಾ ಇರ್ಲಿಲ್ಲ ಅನ್ಸುತ್ತೆ | Umesh Kinnal Comedy Khiladigalu Journey

  ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಮುಂದುವರಿಯುತ್ತಿರುವ ಶ್ರುತಿ, ಕೊನೆಯದಾಗಿ ಮಂಸೋರೆ ನಿರ್ದೇಶನ ಆಕ್ಟ್ 1978 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆರೆಗೆ ಬರಬೇಕಿದೆ. ಇದರ ಜೊತೆ ಮತ್ತೆರಡು ಹೊಸ ಪ್ರಾಜೆಕ್ಟ್ ಗೂ ಸಹಿ ಹಾಕಿದ್ದಾರೆ. ಕೊವಿಡ್‌ ಕಾರಣದಿಂದ ಆ ಸಿನಿಮಾಗಳು ಇನ್ನು ಶುರುವಾಗಿಲ್ಲ.

  English summary
  Karnataka Govt Appoints Actress Shruti as Chairman of the Alcohol Restraint Board.
  Monday, July 19, 2021, 16:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X