Just In
- 4 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 5 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 5 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 7 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಮಾಜದಲ್ಲಿ ನನಗೆ ಕೆಟ್ಟ ಹೆಸರು ತರಲು ಸಂಚು: ಶ್ರುತಿ
ಆಗ ನಾನು ಕೇಳಿದ್ದಕ್ಕೆ ಹೌದು, ತಪ್ಪಾಯ್ತು ಎಂದು ಒಪ್ಪಿಕೊಂಡು ಕಣ್ಣೀರು ಹಾಕಿದಳು. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಳು. ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಬೇಡಿಕೊಂಡ್ಲು. ಇಷ್ಟು ದ್ರೋಹ ಮಾಡಿದ ಮೇಲೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಅನ್ನಿಸಿತು.
ಅವಳನ್ನು ನಾನು ಐದಾರು ವರ್ಷದಿಂದ ಮಗಳ ತರಹ ನೋಡಿಕೊಂಡಿದ್ದೆ. ಅವಳ ಮಗಳನ್ನೂ ಸಾಕಿಕೊಂಡು ಇಷ್ಟೆಲ್ಲಾ ಮಾಡಿದ್ದಕ್ಕೆ ನನಗೆ ಮಾಡಿದ ಉಪಕಾರ ಇದೇನಾ. ಇನ್ನು ಕೆಲಸಕ್ಕೆ ಬರೋದು ಬೇಡಮ್ಮಾ ಎಂದು ಹೇಳಿ ಕಳುಹಿಸಿದ್ದೆ. ಮಾರನೆ ದಿನ ಅವರ ಅಮ್ಮನನ್ನು ಕರೆದುಕೊಂಡು ಮತ್ತೆ ಬಂದ್ಲು. ನೀವು ಕೈಬಿಟ್ಟು ಬಿಟ್ರೆ ನಮಗೆ ಗತಿ ಯಾರು ಎಂದು ಕೇಳಿಕೊಂಡರು. [ಕನ್ನಡದ ಸಸ್ಪೆನ್ಸ್ ಥ್ರಿಲ್ಲರ್ 'ಹೋಮ್ ಸ್ಟೇ' ಹೈಲೈಟ್ಸ್]
ನನ್ನ ಗಂಡ ಇಲ್ಲದೆ ಇದ್ರೂ ಪರವಾಗಿಲ್ಲ. ನೀವಿದ್ದೀರಾ ನನ್ನ ಜೀವನವನ್ನು ನಾನು ಹೇಗೋ ಕಾಪಾಡಿಕೊಳ್ಳುತ್ತೀನಿ, ನೀವು ನನ್ನ ಕೈ ಬಿಡಬೇಡಿ ಎಂದು ಅತ್ತುಕೊಂಡ್ಲು. ಈ ಒಂದೆರಡು ತಿಂಗಳು ಬಿಟ್ಟುಬಿಡಮ್ಮಾ. ನನಗೂ ನೀನು ಮಾಡಿರುವ ದ್ರೋಹ ಕಾಡ್ತಾ ಇದೆ. ಅದೆಲ್ಲಾ ತಣ್ಣಗಾಗಲಿ, ನೋವು ಕಡಿಮೆ ಆಗಲಿ. ಆಮೇಲೆ ನೋಡೋಣ ಎಂದು ಹೇಳಿದೆ.
ನಿನ್ನೆ ರಾತ್ರಿ ಕೂಡ ಅವಳಿಗೆ ಫೋನ್ ಮಾಡಿದ್ದೆ. ಅವರ ಗಂಡನ ಜೊತೆಗೂ ಮಾತನಾಡಿದೆ. ಆಗಿದ್ದು ಆಯ್ತು ನನ್ನ ಹೆಂಡ್ತೀನ ಕ್ಷಮಿಸಿ ಬಿಡಿ ಎಂದು ಅವರ ಗಂಡ ಕೂಡ ಬೇಡಿಕೊಂಡ. ಆಯ್ತು 24ನೇ ತಾರೀಖು ನಮ್ಮ ಮನೆಯಲ್ಲಿ ಒಂದು ಕಾರ್ಯಕ್ರಮ ಇದೆ. ಆಗ ಮಗಳನ್ನು ಕರೆದುಕೊಂಡು ಬನ್ನಿ ಎಂದೂ ಹೇಳಿದೆ. ಇದರಲ್ಲಿ ನಾನು ಹಲ್ಲೆ ಮಾಡಿರುವಂತಹದ್ದೇನಿದೆ.
ನನಗೆ ದ್ರೋಹ ಮಾಡಿರುವುದು, ಕಿರುಕುಳ ನೀಡಿರುವುದು ಅವಳು. ಅವಳ ವಿರುದ್ಧ ನಾನೇನಾದರೂ ಕಂಪ್ಲೇಂಟ್ ಆಗಲೇ ಕೊಟ್ಟಿದ್ದರೆ, ಅಯ್ಯೋ ಇವರ ಜೀವನ ಹಾಳಾಗುತ್ತದೆ. ಬಡವರು ಇವರು. ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುವವರು. ಅವರ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಇವಳ ಜೀವನ ಹಾಳಾಗುತ್ತದೆ ಎಂಬ ಕಾರಣಕ್ಕೆ ನಾನು ಹಾಗೆ ಮಾಡಲಿಲ್ಲ.
ಈಗ ಅನ್ನಿಸುತ್ತಿದೆ ಬಹುಶಃ ನಾನು ಆಗ ಕಂಪ್ಲೇಂಟ್ ಕೊಡದೆ ತಪ್ಪು ಮಾಡಿದೆ ಎಂದು. ಇವರನ್ನು ಬಳಸಿಕೊಂಡು ತಮಗಾಗದವರು ಪಿತೂರಿ ಮಾಡುತ್ತಿದ್ದಾರೆ. ಇಂತಹವರನ್ನು ಬಳಸಿಕೊಂಡು ನನ್ನನ್ನು ರಾಜಕೀಯವಾಗಿ, ಸಮಾಜದಲ್ಲಿ ನನಗೆ ಕೆಟ್ಟ ಹೆಸರನ್ನು ತರಬೇಕು ಎಂಬ ಉದ್ದೇಶದಿಂದಲೇ ಈ ರೀತಿ ಮಾಡಿರುವುದು.