For Quick Alerts
  ALLOW NOTIFICATIONS  
  For Daily Alerts

  ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿದ 'ವಜ್ರಕಾಯ' ನಟಿ ಶುಭ್ರ ಅಯ್ಯಪ್ಪ: ಮೈಸೂರಿನಲ್ಲಿ ರಿಸೆಪ್ಶನ್

  |

  ಕೊಡಗಿನ ಕುವರಿ, ಮಾಡೆಲ್ ಶುಭ್ರ ಅಯ್ಯಪ್ಪ ಕಳೆದ ವರ್ಷ ತಾವು ಮದುವೆಯಾಗುವ ಹುಡುಗನ ಫೋಟೋ ಹಂಚಿಕೊಂಡಿದ್ದರು. ಇದೀಗ ಈ ಜೋಡಿ ಆತ್ಮೀಯರು, ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದೆ. ವಿಶಾಲ್ ಶಿವಪ್ಪ ಉದ್ಯಮಿಯಾಗಿದ್ದು, ಶುಭ್ರ ಅವರಂತೆಯೇ ಅಡ್ವೆಂಚರ್ ಹವ್ಯಾಸ ಉಳ್ಳವರಾಗಿದ್ದಾರೆ.

  ನಟಿ ಶುಭ್ರ ಅಯ್ಯಪ್ಪ 2014ರಲ್ಲಿ ತೆರೆಕಂಡ ತೆಲುಗು ಪ್ರತಿನಿಧಿ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತಮಿಳಿನ ಸಗಪ್ತಥಂ ಚಿತ್ರದಲ್ಲಿ ನಟಿಸಿದ್ದರು. 2015ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಜೊತೆ ವಜ್ರಕಾಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರದಲ್ಲಿ ರಾಮನ ಅವತಾರ, ತಿಮ್ಮಯ್ಯ & ತಿಮ್ಮಯ್ಯ ನಟಿಸಿದರು. ಇದೀಗ ಜನವರಿ 18ರಂದು ತಮ್ಮ ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ ಜೊತೆ ಶುಭ್ರ ಅಯ್ಯಪ್ಪ ಸಪ್ತಪದಿ ತುಳಿದಿದ್ದಾರೆ. ಕೂರ್ಗ್ ನಲ್ಲಿರುವ ವಿಶಾಲ್ ಶಿವಪ್ಪ ಕುಟುಂಬಕ್ಕೆ ಸೇರಿದ 150 ವರ್ಷಗಳ ಪುರಾತನ ಮನೆಯಲ್ಲಿ ವಿವಾಹ ಸಮಾರಂಭ ಜರುಗಿದೆ.

  6 ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ

  6 ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ

  ಶುಭ್ರ ಅಯ್ಯಪ್ಪ ಮತ್ತು ವಿಶಾಲ್ ಶಿವಪ್ಪ ಅವರದ್ದು ಲವ್ ಕಮ್ ಅರೆಂಜ್ಡ್ ಮ್ಯಾರೇಜ್. ಸ್ನೇಹಿತರೊಬ್ಬರ ಮುಖಾಂತರ ಪರಸ್ಪರ ಪರಿಚಯವಾದ ಇವರಿಬ್ಬರು ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಶಾಲ್ ಶಿವಪ್ಪ ಮೊದಲು ಶುಭ್ರಾಗೆ ಪ್ರಪೋಸ್ ಮಾಡಿದ್ದರಂತೆ. ಇದಾದ ಕೆಲ ದಿನಗಳ ಬಳಿಕ ಒಪ್ಪಿಗೆ ಸೂಚಿಸಿದ್ದರಂತೆ.

  ಮದುವೆ ಬಳಿಕ ಸ್ಪೆಷಲ್ ಪೋಸ್ಟ್

  ಮದುವೆ ಬಳಿಕ ಸ್ಪೆಷಲ್ ಪೋಸ್ಟ್

  ವಿವಾಹದ ನಂತರ ನಟಿ ಶುಭ್ರ ಅಯ್ಯಪ್ಪ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಪೋಸ್ಟ್ ಒಂದನ್ನು ಹಾಕಿದ್ದಾರೆ. 'ದೊಡ್ಡಮನೆ'ಯಲ್ಲಿ ನಾನು ಮತ್ತು ವಿಶಾಲ್ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾದವು. ಇದು ವಿಶಾಲ್ ಪೂರ್ವಜರಿಗೆ ಸೇರಿದ 150 ವರ್ಷಗಳ ಪುರಾತನ ಮನೆ. ಈ ಮಾಂತ್ರಿಕ ಜಾಗದಲ್ಲಿ ನಮ್ಮ ಹತ್ತಿರದವರೊಂದಿಗೆ ಈ ಶುಭ ಸಂದರ್ಭದ ಪ್ರೀತಿಯನ್ನು ನಾವು ಅನುಭವಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

  ಮೈಸೂರಿನಲ್ಲಿ ಅದ್ದೂರಿ ಆರತಕ್ಷತೆ

  ಮೈಸೂರಿನಲ್ಲಿ ಅದ್ದೂರಿ ಆರತಕ್ಷತೆ

  ಕೂರ್ಗ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿರುವ ಶುಭ್ರ ಅಯ್ಯಪ್ಪ ಮತ್ತು ವಿಶಾಲ್ ಜೋಡಿ ಜನವರಿ 20 ಮತ್ತು 21ರಂದು ಮೈಸೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದೆ. ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಆಗಮಿಸುವ ನಿರೀಕ್ಷೆಯಿದೆ.

  ತಾರೆಯರಿಂದ ಶುಭ ಹಾರೈಕೆ

  ತಾರೆಯರಿಂದ ಶುಭ ಹಾರೈಕೆ

  ಶುಭ್ರ ಅಯ್ಯಪ್ಪ ಮತ್ತು ವಿಶಾಲ್ ದಂಪತಿಗೆ ನಟಿ ಶ್ವೇತಾ ಚೆಂಗಪ್ಪ, ನೇಹಾ ಶೆಟ್ಟಿ, ಪ್ರಣೀತಾ ಶುಭಾಷ್, ರಾಗಿಣಿ ಪ್ರಜ್ವಲ್, ನಿರ್ದೇಶಕ ಸಿಂಪಲ್ ಸುನಿ, ಶ್ರುತಿ ಪ್ರಕಾಶ್, ಸಂಯುಕ್ತ ಹೆಗ್ಡೆ, ಕಾವ್ಯ ಶೆಟ್ಟಿ, ನಿರ್ದೇಶಕ ಕೆ.ಎಂ.ಚೈತ್ಯ ಸೇರಿದಂತೆ ಹಲವಾರು ಹಾರೈಸಿದ್ದಾರೆ.

  English summary
  sandalwood actress shubra aiyappa married to vishal shivappa, Know More.
  Thursday, January 19, 2023, 19:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X