Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿನಿಮಾದಲ್ಲಷ್ಟೆ ನಟಿ, ನಾನೂ ಮನುಷ್ಯಳೆ: ಸಿಂಧು ಲೋಕನಾಥ್
ಸುಶಾಂತ್ ಸಿಂಗ್ ರಜಪೂತ್ ಸಾವು ಹಿನ್ನೆಲೆಯಲ್ಲಿಯೆ ಹಲವು, ನಟ-ನಟಿಯರು ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಹಲವರು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Recommended Video
ಕನ್ನಡದ ನಟಿ ಸಿಂಧು ಲೋಕನಾಥ್ ಸಹ ಇನ್‌ಸ್ಟಾಗ್ರಾಂ ನಲ್ಲಿ ತಮ್ಮ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದು, ನಾನು 'ಸಿನಿಮಾದಲ್ಲಷ್ಟೆ ನಟಿ, ನಾನೂ ಸಹ ಮನುಷ್ಯಳೇ' ಎಂದು ಹೇಳಿದ್ದಾರೆ.
ಸಿಂಧು ಲೋಕನಾಥ್ ಇದ್ದಕ್ಕಿದ್ದಂತೆ ಹೀಗೆ ಏಕೆ ಮಾತನಾಡಿದರು ಎಂಬ ಅನುಮಾನ ಅವರ ಪೋಸ್ಟ್ ನೋಡಿದವರಿಗೆ ಬರುತ್ತಿದೆ. ಯಾರನ್ನು ಉದ್ದೇಶಿಸಿ ಸಿಂಧು ಹೀಗೊಂದು ಪೋಸ್ಟ್ ಹಾಕಿದ್ದಾರೆ ಎಂಬುದು ಸ್ಪಷ್ಟವಿಲ್ಲ.

ತೆರೆಯ ಮೇಲಷ್ಟೆ ನಾನು ನಟಿ: ಸಿಂಧು
'ನಾನು ತೆರೆಯ ಮೇಲಷ್ಟೆ ನಟಿ, ನಾನು ಮಾಡುವುದೆಲ್ಲವೂ ನಟನೆ ಅಲ್ಲ, ನಾನೂ ಸಹ ಎಲ್ಲರಂತೆ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಸುಳ್ಳು ಭಾವುಕತೆ ಪ್ರದರ್ಶಿಸಲಾಗದು' ಎಂದಿದ್ದಾರೆ ಸಿಂಧು.

'ನಾನೂ ಎಲ್ಲವನ್ನೂ ಅನುಭವಿಸುತ್ತೇನೆ'
ನನಗೂ ಭಯವಾಗುತ್ತದೆ, ನಾನೂ ಕಷ್ಟಪಡುತ್ತೇನೆ, ನಾನೂ ನಗುತ್ತೇನೆ, ಅಳುತ್ತೇನೆ, ನನಗೆ ನೋವಾಗುತ್ತದೆ, ಆಗಾಗ್ಗೆ ಸಂತೋಷವೂ ಆಗುತ್ತದೆ, ಇವೆಲ್ಲವನ್ನೂ ನಿಮ್ಮಂತೆಯೇ ನನಗೂ ಆಗುತ್ತದೆ, ಇವೆಲ್ಲವನ್ನೂ ನಾನೂ ಅನುಭವಿಸುತ್ತೇನೆ ಎಂದಿದ್ದಾರೆ ಸಿಂಧು ಲೋಕನಾಥ್.

'ನಾನೂ ಸಹ ನಿಮ್ಮಂತೆ ಮನುಷ್ಯಳು'
ಸಿನಿಮಾ ನಟಿ ಆಗಿರುವುದರಿಂದ ನಾನು ಸಾಮಾನ್ಯಳಲ್ಲವೆಂದು ನಿಮಗೆ ಅನ್ನಿಸಬಹುದು, ಆದರೆ ಆಳದಲ್ಲಿ ನಾನು ಸಾಮಾನ್ಯಳು, ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಂತೆ ನಾನೂ ಸಹ ಒಬ್ಬ ಸಾಮಾನ್ಯ ಮನುಷ್ಯಳು ಎಂದಿದ್ದಾರೆ ಸಿಂಧು ಲೋಕನಾಥ್.

2017 ರಲ್ಲಿ ಸಿಂಧು ಮದುವೆ
2017 ರಲ್ಲಿ ಸಿಂಧು ಲೋಕನಾಥ್ ಮಂಗಳೂರು ಮೂಲದ ಶ್ರೇಯಸ್ ಕೋಡಿಯಾಲ್ ಎಂಬುವರನ್ನು ಮದುವೆಯಾದರು. ಆದರೆ ಕಳೆದ ವರ್ಷ ಇವರಿಬ್ಬರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತು ಎನ್ನಲಾಗುತ್ತಿದ್ದು, ಸಿಂಧು ಗಂಡನಿಂದ ಪ್ರತ್ಯೇಕವಾಗಿ, ಒಂಟಿಯಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.