»   » ಸ್ವರ್ಗಕ್ಕೆ ಕಿಚ್ಚು ಹಚ್ಚಲು ಯುಎಸ್‌ಗೆ ಸ್ನೇಹಾ ಪ್ರಸನ್ನ

ಸ್ವರ್ಗಕ್ಕೆ ಕಿಚ್ಚು ಹಚ್ಚಲು ಯುಎಸ್‌ಗೆ ಸ್ನೇಹಾ ಪ್ರಸನ್ನ

Posted By:
Subscribe to Filmibeat Kannada

ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿರುವ ತಾರಾ ಜೋಡಿ ಸ್ನೇಹಾ ಹಾಗೂ ಪ್ರಸನ್ನ ಈಗ ಹನಿಮೂನ್ ಮೂಡ್‌ನಲ್ಲಿದ್ದಾರೆ. ಮೇ11ರಂದು ಸ್ನೇಹಾ ಮದುವೆ ಚೆನ್ನೈನ ಶ್ರೀವಾರು ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮುಂದಿನ ಎರಡು ವಾರಗಳಲ್ಲಿ ಇವರಿಬ್ಬರೂ ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ ಎಂದು ಯುಗಳಗೀತೆ ಹಾಡಲಿದ್ದಾರೆ.

ಇವರಿಬ್ಬರು ಮಧುಚಂದ್ರ ಆಚರಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿರುವ ಸ್ಥಳ ಅ ಅ ಅ ಅಮೇರಿಕಾ! ಮೂಲಗಳ ಪ್ರಕಾರ ಇವರಿಬ್ಬರ ನಡುವೆ ಪ್ರೇಮಾಂಕರವಾಗಿದ್ದು ಯುಎಸ್‌ನಲ್ಲಂತೆ. ಅದಕ್ಕೆ ಅಲ್ಲೇ ಇಬ್ಬರೂ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಹೊರಟಿದ್ದಾರೆ. ಸ್ನೇಹಾ ಮದುವೆ ವಿಡಿಯೋ.

ಅದು 'ಅಚ್ಚಮುಂಡು ಅಚ್ಚಮುಂಡು' ಎಂಬ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ. ಅಲ್ಲೇ ಇಬ್ಬರ ನಡುವೆ ಪ್ರೀತಿಯ ಬೀಜ ಮೊಳೆತದ್ದು, ಅದು ಮಾಮರವಾಗಿ ಬೆಳೆದದ್ದು ಹೂವು ಹಣ್ಣು ಬಿಟ್ಟಿದ್ದು ಕೋಗಿಲೆ ಹಾಡಿದ್ದು. ಇದೆಲ್ಲಾ ಹಳೆ ಪುರಾಣವಾಯಿತು. ಇಬ್ಬರೂ ಅಮೆರಿಕಾಗೆ ಹಾರಿ ಅಲ್ಲಿಂದ ಇನ್ನೆಲ್ಲಿಗೋ ಹಾರುವ ಪ್ಲಾನೂ ಹಾಕಿದ್ದಾರೆ. ಸದ್ಯಕ್ಕೆ ಆ ವಿವರಗಳೆಲ್ಲವನ್ನೂ ಇಬ್ಬರೂ ಗುಟ್ಟಾಗಿಟ್ಟಿದ್ದಾರೆ. (ಏಜೆನ್ಸೀಸ್)

English summary
Sneha-Prasanna, who tied the knot on May 11 held at Srivari Kalyana Mandapam on Thursday (May 10), will be flying to the US for their honeymoon. The couple is expected to leave in the coming weeks.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada