For Quick Alerts
  ALLOW NOTIFICATIONS  
  For Daily Alerts

  ತ್ರಿಷಾ ಕೃಷ್ಣನ್ ಚದುರಿದ ಕನಸು, ಮುರಿದ ಮದುವೆ

  By Rajendra
  |

  ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ತಾರೆ ತ್ರಿಷಾ ಕೃಷ್ಣನ್ ಮದುವೆ ಚದುರಿದ ಚಿತ್ರಗಳಂತಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಸುಮ್ಮನಿದ್ದ ತ್ರಿಷಾ ಇದೀಗ ಮೌನ ಮುರಿದಿದ್ದಾರೆ.

  "ಹೊರಗಡೆ ಕೇಳಿಬರುತ್ತಿರುವ ಊಹಾಪೋಹಗಳು ಚಿತ್ರವಿಚಿತ್ರವಾಗಿದ್ದಾವೆ. ದಯವಿಟ್ಟು ಅವುಗಳಿಗೆಲ್ಲಾ ಫುಲ್ ಸ್ಟಾಪ್ ಇಡಿ. ನಾನೀಗ ಏಕಾಂಗಿಯಾಗಿ, ಸಂತೋಷವಾಗಿದ್ದೇನೆ" ಎಂದು ಗುರುವಾರ (ಮೇ.7) ರಾತ್ರಿ ಟ್ವೀಟಿಸಿದ್ದಾರೆ.

  ತಾಯಿ ಮಾತು ಅದೇ, ಮದುವೆ ಮುಗಿದ ಅಧ್ಯಾಯ

  ತಾಯಿ ಮಾತು ಅದೇ, ಮದುವೆ ಮುಗಿದ ಅಧ್ಯಾಯ

  ಈ ಮೂಲಕ ತನ್ನ ಬ್ರೇಕ್ ಅಪ್ ವಿಷಯವನ್ನು ಅಂಗೀಕರಿಸಿದಂತಾಗಿದೆ. ಇನ್ನೊಂದು ಕಡೆ ಅವರ ತಾಯಿ ಸಹ ತಮ್ಮ ಮಗಳ ಮದುವೆ ಮುರಿದು ಬಿದ್ದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಜನವರಿಯಲ್ಲಿ ನಡೆದ ನಿಶ್ಚಿತಾರ್ಥ

  ಜನವರಿಯಲ್ಲಿ ನಡೆದ ನಿಶ್ಚಿತಾರ್ಥ

  ತ್ರಿಷಾ ಕೃಷ್ಣನ್ ಅವರ ನಿಶ್ಚಿತಾರ್ಥ ತಮಿಳು ನಿರ್ಮಾಪಕ, ಉದ್ಯಮಿ ವರುಣ್ ಮಣಿಯನ್ ಜೊತೆಗೆ ಜನವರಿಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಆಪ್ತರು, ನೆಂಟರು ಆಗಮಿಸಿ ಶುಭಕೋರಿದ್ದರು.

  ಇಬ್ಬರ ನಡುವೆ ಮನಸ್ತಾಪ, ಕೋಪತಾಪಗಳು

  ಇಬ್ಬರ ನಡುವೆ ಮನಸ್ತಾಪ, ಕೋಪತಾಪಗಳು

  ನಿಶ್ಚಿತಾರ್ಥದ ಬಳಿಕ ತ್ರಿಷಾ ಹಾಗೂ ವರುಣ್ ವಿಹಾರಯಾತ್ರೆಯನ್ನೂ ಕೈಗೊಂಡಿದ್ದರು. ಆ ಬಳಿಕ ಏನಾಯಿತೋ ಏನೋ ಇಬ್ಬರ ನಡುವೆ ಮನಸ್ತಾಪ, ಕೋಪತಾಪಗಳು ಬಂದು ಕಡೆಗೆ ದೂರಸರಿದಿದ್ದಾರೆ.

  ಯಾಕೆ ಇಬ್ಬರ ನಡುವೆ ಏನಾಯಿತು?

  ಯಾಕೆ ಇಬ್ಬರ ನಡುವೆ ಏನಾಯಿತು?

  ಹೌದು ತ್ರಿಷಾ ಕೃಷ್ಣನ್ ಮದುವೆ ನಿಂತುಹೋಗಿದೆ ಎಂದು ಅವರ ತಾಯಿ ಉಮಾ ಕೃಷ್ಣನ್ ಮಾಧ್ಯಮಗಳಿಗೆ ತಿಳಿಸಿದ್ದರು. ತ್ರಿಷಾ ಸಿನಿಮಾಗಳಲ್ಲಿ ಮುಂದುವರಿಯುವುದು ವರುಣ್ ಕುಟುಂಬಿಕರಿಗೆ ಇಷ್ಟವಿರಲಿಲ್ಲವಂತೆ.

  ಹಿರಿಯರು ಬೇಡ ಅಂದ್ರು ಅದಕ್ಕಂತೆ

  ಹಿರಿಯರು ಬೇಡ ಅಂದ್ರು ಅದಕ್ಕಂತೆ

  ಈ ಭಿನ್ನಾಭಿಪ್ರಾಯಗಳ ಕಾರಣಕ್ಕೇ ಇಬ್ಬರ ಮದುವೆ ನಿಶ್ಚಿತಾರ್ಥಕ್ಕೇ ಮುಗಿದುಹೋಗಿದೆ. ಆದರೆ ಈ ವಿಷಯನ್ನು ತ್ರಿಷಾ ತಳ್ಳಿಹಾಕಿದ್ದು, ಹಿರಿಯರ ನಿರ್ಧಾರದ ಮೇರೆಗೆ ನಾವು ಮದುವೆಯಾಗುತ್ತಿಲ್ಲ ಅಷ್ಟೇ ಎಂದಿದ್ದಾರೆ.

  ಈಗ ಮತ್ತೆ ಬಣ್ಣದ ಜಗತ್ತಿನಲ್ಲಿ ಬಿಜಿ

  ಈಗ ಮತ್ತೆ ಬಣ್ಣದ ಜಗತ್ತಿನಲ್ಲಿ ಬಿಜಿ

  ಹಿರಿಯ ಮಾತಿಗೆ ಗೌರವ ಕೊಟ್ಟು ಈ ಮದುವೆ ಬೇಡ ಎಂದುಕೊಂಡೆವು. ಹಾಗಾಗಿ ತಾವು ವರುಣ್ ಮಣಿಯನ್ ರನ್ನು ವರಿಸುತ್ತಿಲ್ಲ ಎಂದು ತ್ರಿಷಾ ಸ್ಪಷ್ಟಪಡಿಸಿದ್ದು, ಸದ್ಯಕ್ಕೆ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

  English summary
  Now Trisha Krishnan finally opened on the break up and made following tweet.‘’Amused by d hazaar speculations doin d rounds.Let it rest people.Happy,single n thankful’’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X