»   » ಎರಡನೇ ಪತಿಯಿಂದ ಗಂಡುಮಗು ಹಡೆದ ಊರ್ವಶಿ

ಎರಡನೇ ಪತಿಯಿಂದ ಗಂಡುಮಗು ಹಡೆದ ಊರ್ವಶಿ

Posted By: ರವಿಕಿಶೋರ್
Subscribe to Filmibeat Kannada

ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾದ ಪ್ರಕಾಶ್ ರೈ ಅವರ 'ಒಗ್ಗರಣೆ' ಚಿತ್ರದಲ್ಲಿ ಗಮನಾರ್ಹ ಪಾತ್ರ ಪೋಷಿಸಿದ್ದ ನಟಿ ಊರ್ವಶಿ (44) ಗಂಡು ಮಗುವನ್ನು ಹಡೆದಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಹೆರಿಗೆಯಾಗಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಗುವಿನ ತೂಕ ಎಷ್ಟಿದೆ ಎಂಬುದು ಗೊತ್ತಾಗಿಲ್ಲ.

ಚೆನ್ನೈ ಮೂಲದ ಬಿಲ್ಡರ್ ಶಿವಪ್ರಸಾದ್ ಜೊತೆಗೆ ಅವರ ಎರಡನೇ ಮದುವೆಯಾಗಿತ್ತು. ಮೊದಲ ಪತಿ ಮನೋಜ್ ಕೆ ಜಯನ್ ಅವರೊಂದಿಗಿನ ದಾಂಪತ್ಯದ ಫಲವಾಗಿ ಅವರಿಗೆ ಒಬ್ಬ ಪುತ್ರಿ ಇದ್ದಾರೆ. ಇದೀಗ ಶಿವಪ್ರಸಾದ್ ಅವರನ್ನು ಮದುವೆಯಾದ ಬಳಿಕ ಗಂಡು ಮಗು ಹಡೆದಿದ್ದಾರೆ. [ನಟಿ ಊರ್ವಶಿ ಬಾಳಿನಲ್ಲಿ ಮತ್ತೆ ಶ್ರಾವಣ ಬಂತು]

Actress Urvashi Blessed With A Baby Boy

ನವೆಂಬರ್ 2013ರಲ್ಲಿ ಶಿವಪ್ರಸಾದ್ ಅವರನ್ನು ವರಿಸಿದ್ದರು ಊರ್ವಶಿ. ಏಪ್ರಿಲ್ 2014ರಲ್ಲಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಾವೀಗ ಗರ್ಭಿಣಿ ಎಂಬುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದರು. ಊರ್ವಶಿ ಅವರು ತಮ್ಮ ಡಬ್ಬಿಂಗ್ ತಾವೇ ಹೇಳಿಕೊಂಡು ಪಾತ್ರಗಳಿಗೆ ಜೀವ ತುಂಬುವ ವಿಶಿಷ್ಟ ಶೈಲಿಯ ಕಲಾವಿದೆ.

ಕನ್ನಡದ 'ಶ್ರಾವಣ ಬಂತು', 'ರಾಮಾ ಶಾಮಾ ಭಾಮ', 'ನಾನು ನನ್ನ ಹೆಂಡ್ತಿ' ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ತಮಿಳು ಹಾಗೂ ಮಲೆಯಾಳಂನಲ್ಲೂ ಜನಪ್ರಿಯತೆ ಗಳಿಸಿರುವ ಊರ್ವಶಿ ಇದೀಗ ಮತ್ತೆ ತಾಯಿಯಾಗಿದ್ದಾರೆ.

ತಮ್ಮ ಮೊದಲ ಪತಿ ಮನೋಜ್ ಅವರೊಂದಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದು, ಇದೀಗ ಅವರ ಏಕೈಕ ಪುತ್ರಿ ಕುಂಜಟ್ಟಾ ಅವರನ್ನು ಮನೋಜ್ ಸುಪರ್ದಿಗೆ ಒಪ್ಪಿಸಲಾಗಿದೆ. ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿರುವ ಕಮಲ್ ಹಾಸನ್ ಅಭಿನಯದ ತಮಿಳಿನ 'ಉತ್ತಮ ವಿಲನ್' ಚಿತ್ರದಲ್ಲೂ ಊರ್ವಶಿ ಅಭಿನಯಿಸಿದ್ದಾರೆ.

English summary
Actress Urvashi, who got married for a second time to Chennai based builder Sivaprasad, gave birth to a baby boy at a private hospital in Chennai. Urvashi, who was married to actor Manoj K Jayan, have a daughter Kunjatta, from her first marriage.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X