»   » 'ಅಯ್ಯ 2' ಚಿತ್ರದಿಂದ ನಟಿ ವೈಶಾಲಿ ದೀಪಕ್ ಔಟ್

'ಅಯ್ಯ 2' ಚಿತ್ರದಿಂದ ನಟಿ ವೈಶಾಲಿ ದೀಪಕ್ ಔಟ್

Posted By:
Subscribe to Filmibeat Kannada

ಚಿರಂಜೀವಿ ಸರ್ಜಾ ಮುಖ್ಯಭೂಮಿಕೆಯಲ್ಲಿರುವ ಅಯ್ಯ 2 ಚಿತ್ರದಿಂದ ವೈಶಾಲಿ ದೀಪಕ್ ಔಟ್ ಆಗಿದ್ದಾರೆ ಸುದ್ದಿ ಹೊರಬಿದ್ದಿದೆ. ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಜೊತೆಗೆ ಅವರದೇ ಹುಚ್ಚ 2 ಚಿತ್ರದಲ್ಲೂ ವೈಶಾಲಿ ಅಭಿನಯಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಜಯನಗರದಲ್ಲಿ ಅಯ್ಯ 2 ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಸೆರೆಹಿಡಿಯಲಾಗಿತ್ತು. ವೈಶಾಲಿ ದೀಪಕ್ ಸೇರಿದಂತೆ ಹಲವು ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ ಇದೀಗ ಏನಾಯಿತೋ ಏನೋ ವೈಶಾಲಿ ಚಿತ್ರದಿಂದ ಹೊರಬಿದ್ದಿದ್ದಾರೆ.

Ayya 2 movie still

ತಮ್ಮ ಸ್ವಂತ ಇಚ್ಛೆಯಿಂದ ಚಿತ್ರದಿಂದ ಹೊರಬಂದಿದ್ದೇನೆ. ಇದರಲ್ಲಿ ಯಾರ ಕೈವಾಡವಾಗಲಿ, ಒತ್ತಡವಾಗಲಿ ಇಲ್ಲ ಎಂದಿದ್ದಾರೆ ವೈಶಾಲಿ. ಚಿತ್ರದಲ್ಲಿ ಅಭಿನಯಕ್ಕೆ ಪ್ರಾಧಾನ್ಯತೆ ಇಲ್ಲ ಎಂಬುದು ಮಾತುಗಳು ಕೇಳಿಬಂದಿವೆ. ತಾವು ಅಭಿನಯಕ್ಕೆ ಒತ್ತ ನೀಡುವ ಚಿತ್ರದಲ್ಲಿ ಅಭಿನಯಿಸುವುದಾಗಿಯೂ ವೈಶಾಲಿ ಹೇಳಿಕೊಂಡಿದ್ದಾರೆ.

ವೈಶಾಲಿ ಅವರು ಇಂಗ್ಲಿಷ್ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕ್ರೈಸ್ಟ್ ಕಾಲೇಜು ಹುಡುಗಿ. ಚಿತ್ರದ ನಿರ್ದೇಶಕ ಓಂ ಹಾಗೂ ವೈಶಾಲಿ ನಡುವೆ ಹೊಂದಾಣಿಕೆ ಕೊರತೆಯಿಂದ ಹೀಗಾಗಿದೆ ಎನ್ನುತ್ತವೆ ಮೂಲಗಳು.

ಅದೇನೇ ಇರಲಿ ವೈಶಾಲಿ ಜಾಗಕ್ಕೆ ಓಂ ಮತ್ತೊಬ್ಬ ಬೆಡಗಿಯನ್ನು ಆಯ್ಕೆ ಮಾಡಿದ್ದಾರೆ. ಆಕೆಯ ಹೆಸರು ಐಶ್ವರ್ಯಾ ದೇವನ್. ಹಾಸ್ಯನಟ ಶರಣ್ ಅವರ ಶ್ರೀಮತಿ ಜಯಲಲಿತಾ ಚಿತ್ರದಲ್ಲಿ ಇವರು ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ಓಂ ಚಿತ್ರದಿಂದ ನಾಯಕಿಯರು ಹೊರಬೀಳುವುದು ಹೊಸತಲ್ಲ ಬಿಡಿ ಎಂದು ಗಾಂಧಿನಗರ ಮುಗುಮ್ಮಾಗಿದೆ.

English summary
Om Prakash Rao's 'Ayya 2' movie actress Vaishali Deepak walk out of the movie. Now Vaishali replaced by Aishwarya Devan. Actor Chiranjeevi Sarja is playing lead role in this movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada