»   » ವಿಡಿಯೋ: ಹೆಬ್ಬಾವಿನ ಸಂಗ ಮಾಡಿದ 'ಹೋಮ್ ಮಿನಿಸ್ಟರ್' ವೇದಿಕಾ

ವಿಡಿಯೋ: ಹೆಬ್ಬಾವಿನ ಸಂಗ ಮಾಡಿದ 'ಹೋಮ್ ಮಿನಿಸ್ಟರ್' ವೇದಿಕಾ

Posted By:
Subscribe to Filmibeat Kannada

ಹಾವು ಅಂದರೆ ಅನೇಕರಿಗೆ ಭಯ ಇದೇ ಇರುತ್ತದೆ. ಅದರಲ್ಲಿಯೂ ಹೆಬ್ಬಾವು ಅಂದರೆ ಆ ಭಯ ದುಪ್ಪಟ್ಟಾಗುತ್ತದೆ. ಆದರೆ ಇದೀಗ ಕನ್ನಡದ ನಟಿ ವೇದಿಕಾ ಇದೇ ಹೆಬ್ಬಾವಿನ ಸಂಗ ಮಾಡಿದ್ದಾರೆ.

ವೇದಿಕಾ 'ಶಿವಲಿಂಗ' ಮತ್ತು 'ಗೌಡ್ರು ಹೋಟೆಲ್' ನಂತರ ಈಗ ಕನ್ನಡದಲ್ಲಿ 'ಹೋಮ್ ಮಿನಿಸ್ಟರ್' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚಿಗಷ್ಟೆ ಮಲೇಶಿಯಾದಲ್ಲಿ ನಡೆದಿದೆ. ಶೂಟಿಂಗ್ ವೇಳೆ ವೇದಿಕಾ ಹೆಬ್ಬಾವನ್ನು ಮೈ ಮೇಲೆ ಹಾಕಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು ಧೈರ್ಯವಾಗಿ ಇರಲು ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ.

ಶಿವನ ರೀತಿ ಹಾವನ್ನು ಕೊರಳಿಗೆ ಆಭರಣ ಮಾಡಿಕೊಂಡಿರುವ ವೇದಿಕಾ ಯಾವುದೇ ಭಯ ಇಲ್ಲದೆ ವಿಡಿಯೋಗೆ ಪೋಸ್ ನೀಡಿದ್ದಾರೆ. ವೇದಿಕಾ ಧೈರ್ಯವನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

actress vedhika acting with python

ಅಂದಹಾಗೆ, 'ಹೋಮ್ ಮಿನಿಸ್ಟರ್' ಉಪೇಂದ್ರ ಅಭಿನಯದ ಸಿನಿಮಾವಾಗಿದೆ. ಉಪ್ಪಿ ಜೊತೆಗೆ ಮೊದಲ ಬಾರಿಗೆ ವೇದಿಕಾ ನಟಿಸಿದ್ದಾರೆ. ಗಣೇಶ್, ಶಿವಣ್ಣ ನಂತರ ಉಪೇಂದ್ರ ಜೊತೆಗೆ ವೇದಿಕಾ ತೆರೆ ಹಂಚಿಕೊಂಡಿದ್ದಾರೆ. ಮಲೇಶಿಯಾದಿಂದ ಶೂಟಿಂಗ್ ಮುಗಿಸಿಕೊಂಡು ಉಪೇಂದ್ರ, ವೇದಿಕಾ ಮರಳಿದ್ದಾರೆ.

English summary
Kannada actor Upendra's 'Home Minister' movie actress Vedhika acting with python.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X