»   » ಎಸ್ ನಾರಾಯಣ್ ಫಿಲಂ ಇನ್ಸ್ ಟಿಟ್ಯೂಟ್ ಪ್ರಿನ್ಸಿಪಾಲ್

ಎಸ್ ನಾರಾಯಣ್ ಫಿಲಂ ಇನ್ಸ್ ಟಿಟ್ಯೂಟ್ ಪ್ರಿನ್ಸಿಪಾಲ್

Posted By:
Subscribe to Filmibeat Kannada
Adarsha film institute
ಕನ್ನಡ ಚಿತ್ರರಂಗ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ಕಲಾ ಸಾಮ್ರಾಟ್ ಬಿರುದಾಂಕಿತ ಎಸ್ ನಾರಾಯಣ್ ಅವರ ಹೆಗಲಿಗೆ ಹೊಸ ಜವಾಬ್ದಾರಿ ಏರಿದೆ. ಈಗವರು ಆದರ್ಶ ಫಿಲಂ ಮತ್ತು ಟಿವಿ ಇನ್ಸ್ ಟಿಟ್ಯೂಟ್ ಪ್ರಾಂಶುಪಾಲರು.

ಕಳೆದ 20 ವರ್ಷಗಳಿಂದ ಪ್ರಾಂಶುಪಾಲರಾಗಿ ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದರು ನಿರ್ಮಾಪಕ ನಿರ್ದೇಶಕ ದೊರೆ ಭಗವಾನ್.
ಈಗವರು ನಿವೃತ್ತರಾಗಿದ್ದು, ನೂತನ ಪ್ರಾಂಶುಪಾಲರಾಗಿ ಎಸ್ ನಾರಾಯಣ್ ಅವರು ಪದಗ್ರಹಣ ಮಾಡುತ್ತಿದ್ದಾರೆ.

ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ಸರ್ಕಾರದಿಂದ ಅಂಗೀಕೃತವಾದ ಹಾಗೂ ಅನುದಾನಿತ ಸಂಸ್ಥೆ. ಶೀಘ್ರದಲ್ಲೇ ನಾರಾಯಣ್ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇಂದಿನ ಯುವ ಪೀಳಿಗೆಗೆ ಅತ್ಯುತ್ತಮ ಚಿತ್ರಗಳನ್ನು ನೀಡಿದ ಅನುಭವಿ ನಿರ್ದೇಶಕರು.

ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ನಿಂದ ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭಾವಂತ ಕಲಾವಿದರು ಹೊರಬಂದಿದ್ದಾರೆ. ಅವರಲ್ಲಿ ಮುಖ್ಯವಾಗಿ ಜಗ್ಗೇಶ್, ಡಿ.ರಾಜೇಂದ್ರ ಬಾಬು, ಗಣೇಶ್, ಪ್ರಿಯಾ ಹಾಸನ್ ಇಲ್ಲಿ ತರಬೇತಿ ಪಡೆದಂತವರು.

ಇತ್ತ ಪ್ರಿನ್ಸಿಪಾಲ್ ಜವಾಬ್ದಾರಿ ಹೊತ್ತಿರುವ ನಾರಾಯಣ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇಬ್ಬರೂ ಮತ್ತೊಂದು ಪ್ರಯೋಗಕ್ಕೆ ಸಿದ್ಧವಾಗುತ್ತಿದ್ದಾರೆ. ಅಂದಹಾಗೆ ನಾರಾಯಣ್ ಜೊತೆಗಿನ ಉಪೇಂದ್ರ ಚಿತ್ರಕ್ಕೆ 'ಬೃಹಸ್ಪತಿ' ಎಂದು ಹೆಸರಿಡಲಾಗಿದೆ. (ಒನ್ಇಂಡಿಯಾ ಕನ್ನಡ)

English summary
Kannada films actor-director-producer S Narayan has been appointed as the new principal of Adarsha Film Institute in Bangalore. Veteran director-actor Bhagawan of Dorai Bhagawan working as the principal for the lost 20 years. Now is stepped down as principal due to age factor.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada