»   » 'ಟಗರು' ನಂತರ ಸೂರಿ ಮಾಡೋ ಮುಂದಿನ ಸಿನಿಮಾ ಯಾವುದು?

'ಟಗರು' ನಂತರ ಸೂರಿ ಮಾಡೋ ಮುಂದಿನ ಸಿನಿಮಾ ಯಾವುದು?

Posted By:
Subscribe to Filmibeat Kannada
'ಟಗರು' ನಂತರ ಸೂರಿ ಮಾಡೋ ಮುಂದಿನ ಸಿನಿಮಾ ಯಾವುದು? | Filmibeat kannada

ನಿರ್ದೇಶಕ ಸೂರಿ ಮತ್ತೊಂದು ಯಶಸ್ಸು ಗಳಿಸಿದ್ದಾರೆ. ಸೂರಿ ಸಾರಥ್ಯದಲ್ಲಿ ಬಂದ ಪೊಗರು ತುಂಬಿದ 'ಟಗರು' ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಈ ವರ್ಷದ ಹಿಟ್ ಸಿನಿಮಾಗಳ ಪೈಕಿ 'ಟಗರು' ಸಿನಿಮಾ ಪ್ರಮುಖವಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಮತ್ತೆ ಶಿವರಾಜ್ ಕುಮಾರ್ ಸಿನಿಮಾ ಕಮಾಲ್ ಮಾಡಿದೆ.

ಒಂದು ಸಿನಿಮಾ ಗೆದ್ದ ನಂತರ ಆ ಚಿತ್ರದ ಹೀರೋ, ಹೀರೋಯಿನ್, ನಿರ್ದೇಶಕರು ಮಾಡುವ ಮುಂದಿನ ಸಿನಿಮಾದ ಮೇಲೆ ಎಲ್ಲರ ಕಣ್ಣು ಇರುತ್ತದೆ. ಅದೇ ರೀತಿ ಈಗ ನಿರ್ದೇಶಕ ಸೂರಿ ಮಾಡುವ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಸೂರಿ ಖಾತೆಯಲ್ಲಿ ಮೂರ್ನಾಲ್ಕು ಸಿನಿಮಾಗಳಿದ್ದು, ಅವುಗಳಲ್ಲಿ ಯಾವುದು ಮೊದಲು ಬರುತ್ತದೆ ಎಂಬ ಕುತೂಹಲ ಜೋರಾಗಿದೆ.

ಕರುನಾಡಿನಲ್ಲಿ ಮಾತ್ರವಲ್ಲ ವಿದೇಶದಲ್ಲಿ ಅಬ್ಬರಿಸಿದೆ ಶಿವಣ್ಣನ ಸಿನಿಮಾಗಳು

ಸದ್ಯ ಸೂರಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಜನರೇ ಸೂರಿ ಮುಂದೆ ಯಾವ ಸಿನಿಮಾ ಮಾಡಬೇಕು ಎಂದು ಇದೀಗ ಹೇಳಿದ್ದಾರೆ. ಮುಂದೆ ಓದಿ...

'ಫಿಲ್ಮಿ ಬೀಟ್ ಕನ್ನಡ' ಪೋಲ್

ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ನಿರ್ದೇಶಕ ಸೂರಿ ಮುಂದೆ ಯಾವ ಸಿನಿಮಾವನ್ನು ನಿರ್ದೇಶನ ಮಾಡಬೇಕು ಎಂದು ಒಂದು ಪೋಲ್ ಏರ್ಪಡಿಸಿತ್ತು. ಅದರಲ್ಲಿ 'ಕಾಗೆ ಬಂಗಾರ', 'ಡಾಲಿ', 'ಟಗರು 2', 'ಪುನೀತ್ ಸಿನಿಮಾ' ಎಂದು ನಾಲ್ಕು ಆಯ್ಕೆಗಳನ್ನು ನೀಡಿತ್ತು. ಈ ಪೋಲ್ ನಲ್ಲಿ ಸಾಕಷ್ಟು ಓದುಗರು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

'ಕಾಗೆ ಬಂಗಾರ'

'ಕೆಂಡಸಂಪಿಗೆ' ಸಿನಿಮಾ ಮಾಡಿದ್ದ ನಿರ್ದೇಶಕ ಸೂರಿ ಮೊದಲು 'ಕೆಂಡಸಂಪಿಗೆ' ಪಾರ್ಟ್ 2 ಗಿಣಿಮರಿ ಕಥೆ ಹೇಳಿದ್ದರು. ಅದರ ಬಳಿಕ 'ಕೆಂಡಸಂಪಿಗೆ' ಪಾರ್ಟ್ 1 ಕಾಗೆಬಂಗಾರ ಚಿತ್ರವನ್ನು ಶುರು ಮಾಡಬೇಕಿತ್ತು. ಆದರೆ 'ದೊಡ್ಮೆನೆ ಹುಡ್ಗ' ಮತ್ತು 'ಟಗರು' ಚಿತ್ರದಲ್ಲಿ ಸೂರಿ ಬಿಜಿ ಆದರು. ಸದ್ಯದ ಬಂದಿರುವ ಪೋಲ್ ಪಲಿತಾಂಶದ ಪ್ರಕಾರ ಸೂರಿ ಈಗ ಕಾಗೆಬಂಗಾರ ಸಿನಿಮಾವನ್ನು ಶುರು ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 48% ಜನರು ಸೂರಿ ಕಾಗೆಬಂಗಾರ ಸಿನಿಮಾ ಮಾಡಬೇಕು ಎಂದು ಹೇಳಿದ್ದಾರೆ.

ಡಾಲಿ, ಟಗರು 2, ಪುನೀತ್ ಸಿನಿಮಾ

ಕಾಗೆಬಂಗಾರ ಚಿತ್ರವನ್ನು ಹೊರತು ಪಡಿಸಿ 'ಡಾಲಿ' ಸಿನಿಮಾವನ್ನು 14%, 'ಟಗರು 2' ಚಿತ್ರವನ್ನು 16% ಹಾಗೂ ಸೂರಿ ಮತ್ತು ಪುನೀತ್ ಕಾಂಬಿನೇಶನ್ ಸಿನಿಮಾವನ್ನು 20% ಜನರು ನೋಡಲು ಬಯಸಿದ್ದಾರೆ. ಕಾಗೆಬಂಗಾರ ನಂತರದ ಸ್ಥಾನದಲ್ಲಿ ಅತಿ ಹೆಚ್ಚು ಜನರು ಪುನೀತ್ ಜೊತೆಗೆ ಮತ್ತೆ ಸೂರಿ ಸಿನಿಮಾ ಮಾಡಬೇಕು ಎಂದು ಹೇಳಿದ್ದಾರೆ. ಈ ಹಿಂದೆ 'ಜಾಕಿ', 'ಅಣ್ಣಾಬಾಂಡ್' ಮತ್ತು 'ದೊಡ್ಮನೆ ಹುಡ್ಗ' ಚಿತ್ರವನ್ನು ಸೂರಿ ಪುನೀತ್ ಗಾಗಿ ಮಾಡಿದ್ದರು.

ಸೂರಿ ಸಿನಿಮಾಗಳು

'ಫಿಲ್ಮಿ ಬೀಟ್ ಕನ್ನಡ' ಓದುಗರು ನಿರ್ದೇಶಕ ಸೂರಿ ಮುಂದೆ 'ಕಾಗೆ ಬಂಗಾರ' ಸಿನಿಮಾ ಮಾಡಬೇಕು ಎಂದು ಹೇಳಿದ್ದಾರೆ. ಆದರೆ 'ಟಗರು 2', 'ಡಾಲಿ', 'ಬ್ಲಾಕ್ ಮ್ಯಾಜಿಕ್' ಸೇರಿದಂತೆ ಕೆಲವು ಸಿನಿಮಾಗಳು ಸೂರಿ ಕೈನಲ್ಲಿ ಇದ್ದು, ಇವುಗಳಲ್ಲಿ ಸೂರಿ ಮೊದಲು ಯಾವ ಸಿನಿಮಾ ಶುರು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

'ಡಾಲಿ'ಯ ಪ್ರೀತಿಯ ತಮ್ಮ ಕಾಕ್ರೋಚ್ ರಿಯಲ್ ಕಥೆ ಕೇಳಿ

English summary
After 'Tagaru' which is director Duniya Duri's next movie?. here is the answer from our website readers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X