For Quick Alerts
  ALLOW NOTIFICATIONS  
  For Daily Alerts

  ಜಯರಾಜ್ ಕುರಿತ ಚಿತ್ರದಲ್ಲಿ ಮುತ್ತಪ್ಪ ರೈ ಇರಲಿದ್ದಾರಾ? ಅಗ್ನಿ ಶ್ರೀಧರ್ ಉತ್ತರ

  |

  ಮಾಜಿ ಭೂಗತ ದೊರೆ ಜಯರಾಜ್ ಕುರಿತ ಚಿತ್ರ ಶುರುವಾಗಿದೆ, ಅಗ್ನಿ ಶ್ರೀಧರ್ ಚಿತ್ರಕತೆಯ ಈ ಚಿತ್ರದಲ್ಲಿ ಜಯರಾಜ್ ಪಾತ್ರದಲ್ಲಿ ಡಾಲಿ ಖ್ಯಾತಿಯ ಧನಂಜಯ್ ನಟಿಸುತ್ತಿದ್ದಾರೆ.

  ಆದರೆ ಈ ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರ ಇರಲಿದೆಯೇ? ಎಂಬುದು ಸಿನಿ ಪ್ರೇಮಿಗಳ ಹಾಗೂ ಬೆಂಗಳೂರಿನ ಭೂಗತ ಜಗತ್ತಿನ ಪರಿಚಯವಿರುವವರ ಕುತೂಹಲಕ್ಕೆ ಕಾರಣವಾಗಿದೆ.

  ದಿನಕ್ಕೆ ಸಾವಿರ ಬಸ್ಕಿ ಹೊಡೀತಿದ್ದಾರೆ ಡಾಲಿ ಧನಂಜಯ್ದಿನಕ್ಕೆ ಸಾವಿರ ಬಸ್ಕಿ ಹೊಡೀತಿದ್ದಾರೆ ಡಾಲಿ ಧನಂಜಯ್

  ಈ ಕುತೂಹಲಕ್ಕೆ ಕಾರಣವೂ ಇದೆ. ಜಯರಾಜ್ ಸಾವಿಗೆ ಕಾರಣವಾದವರು ಸ್ವತಃ ಮುತ್ತಪ್ಪ ರೈ ಹಾಗಾಗಿ ಮುತ್ತಪ್ಪ ರೈ ಪಾತ್ರ ಚಿತ್ರದಲ್ಲಿ ಇರಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.

  ಈ ಕುರಿತು ಸಂದರ್ಶನವೊಂದರಲ್ಲಿ ಅಗ್ನಿ ಶ್ರೀಧರ್ ಅವರು ಉತ್ತರ ಕೊಟ್ಟಿದ್ದಾರೆ. 'ಜಯರಾಜ್ ಕುರಿತು ಮಾಡಲಾಗುತ್ತಿರುವ ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರ ಇರುವುದಿಲ್ಲ' ಎಂದು ಅಗ್ನಿ ಶ್ರೀಧರ್ ಸ್ಪಷ್ಟಪಡಿಸಿದ್ದಾರೆ.

  ಮುತ್ತಪ್ಪ ರೈ ಪಾತ್ರ ಇರಲಿದೆಯಾ? ಅಗ್ನಿ ಶ್ರೀಧರ್ ಸ್ಪಷ್ಟನೆ?

  ಮುತ್ತಪ್ಪ ರೈ ಪಾತ್ರ ಇರಲಿದೆಯಾ? ಅಗ್ನಿ ಶ್ರೀಧರ್ ಸ್ಪಷ್ಟನೆ?

  ''ಇದು ಎಪ್ಪತರ ದಶಕದ ಕತೆ ಹಾಗಾಗಿ ಇಲ್ಲಿ ಜಯರಾಜ್ ಕುರಿತು ಮಾತ್ರವೇ ಫೋಕಸ್ ಮಾಡಲಾಗಿದೆ. ಈ ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರ ಇರುವುದಿಲ್ಲ'' ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.

  ಅಗ್ನಿ ಶ್ರೀಧರ್ ಪಾತ್ರ ಚಿತ್ರದಲ್ಲಿ ಇರಲಿದೆಯಾ?

  ಅಗ್ನಿ ಶ್ರೀಧರ್ ಪಾತ್ರ ಚಿತ್ರದಲ್ಲಿ ಇರಲಿದೆಯಾ?

  ಚಿತ್ರದಲ್ಲಿ ಅಗ್ನಿ ಶ್ರೀಧರ್ ಪಾತ್ರ ಇರಲಿದೆಯಾ? ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರಿಸದ ಅಗ್ನಿ ಶ್ರೀಧರ್, 'ಚಿತ್ರಕತೆ ಇನ್ನೂ ತಯಾರಾಗುತ್ತಿದೆ, ಚಿತ್ರದಲ್ಲಿ ಅಗ್ನಿ ಶ್ರೀಧರ್ ಇರಬಹುದು ಅಥವಾ ಇಲ್ಲದೆಯೂ ಇರಬಹುದು, ಚಿತ್ರಕತೆ ಬೆಳೆದಂತೆಲ್ಲಾ ಯಾವ ಯಾವ ಪಾತ್ರಗಳು ಅದರೊಳಗೆ ಬರುತ್ತವೆಯೆಂದು ನೋಡೋಣ'' ಎಂದು ಹೇಳಿದ್ದಾರೆ.

  ಚಿತ್ರಕತೆ ಅಗ್ನಿ ಶ್ರೀಧರ್, ನಿರ್ದೇಶನ ಶೂನ್ಯ

  ಚಿತ್ರಕತೆ ಅಗ್ನಿ ಶ್ರೀಧರ್, ನಿರ್ದೇಶನ ಶೂನ್ಯ

  ಜಯರಾಜ್ ಕುರಿತ ಚಿತ್ರಕ್ಕೆ ಚಿತ್ರಕತೆಯನ್ನಷ್ಟೆ ಅಗ್ನಿ ಶ್ರೀಧರ್ ರಚಿಸುತ್ತಿದ್ದಾರೆ. ನಿರ್ದೇಶನವನ್ನು ಶೂನ್ಯ ಮಾಡುತ್ತಿದ್ದು, ಜಯರಾಜ್ ಪಾತ್ರವನ್ನು ಡಾಲಿ ಖ್ಯಾತಿಯ ಧನಂಜಯ್ ನಿರ್ವಹಿಸಲಿದ್ದಾರೆ. ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆ ಆಗುವ ಸಾದ್ಯತೆ ಇದೆ.

  ಭೂಗತ ಲೋಕದ ಕತೆಗಳ ಅನಾವರಣ ಮಾಡಿರುವ ಅಗ್ನಿ ಶ್ರೀಧರ್

  ಭೂಗತ ಲೋಕದ ಕತೆಗಳ ಅನಾವರಣ ಮಾಡಿರುವ ಅಗ್ನಿ ಶ್ರೀಧರ್

  ಅಗ್ನಿ ಶ್ರೀಧರ್ ಅವರು ಈ ಹಿಂದೆ ''ಆ ದಿನಗಳು'' ಚಿತ್ರದ ಮೂಲಕ ಕೊತ್ವಾಲನ ದಾದಾಗಿರಿಯ ಪರಿಚಯ ಮಾಡಿಸಿದ್ದರು. 'ಎದೆಗಾರಿಕೆ' ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರ ಸುಳಿದಾಡಿತ್ತು. ಈಗ ಜಯರಾಜ್ ಕುರಿತ ಚಿತ್ರ ಮಾಡುತ್ತಿದ್ದು, ಜಯರಾಜ್ ಜೀವನವನ್ನು ಬೆಳ್ಳಿತೆರೆಯ ಮೇಲೆ ತೆರೆದಿಡಲಿದ್ದಾರೆ.

  English summary
  Agni Shridhar talked about Jayaraj movie. He give answer whether Muthappa Rai's character will be there in the movie or not.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X