»   » ನಟಿ ಐಂದ್ರಿತಾ ರೇ 'ಕಡ್ಡಿಪುಡಿ' ಹಸಿಬಿಸಿ ದೃಶ್ಯಗಳು

ನಟಿ ಐಂದ್ರಿತಾ ರೇ 'ಕಡ್ಡಿಪುಡಿ' ಹಸಿಬಿಸಿ ದೃಶ್ಯಗಳು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಕಡ್ಡಿಪುಡಿ' ಚಿತ್ರ ಈ ಶುಕ್ರವಾರ (ಜೂ.7) ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಒಂದು ಕಡೆ ಅನುಭವಿ ನಟ ಶಿವಣ್ಣ, ಇನ್ನೊಂದು ಕಡೆ ಪ್ರತಿಭಾನ್ವಿತ ತಾರೆ ರಾಧಿಕಾಪಂಡಿತ್. ಜೊತೆಗೆ ಇದ್ದೇ ಇದೆ ಐಂದ್ರಿತಾ ರೇ ಅವರ ಐಟಂ ಮೆರವಣಿಗೆ.

ಶಿವಣ್ಣ ಹಾಗೂ ರಾಧಿಕಾ ಇವರಿಬ್ಬರ ಕಾಂಬಿನೇಷನ್ ಚಿತ್ರ ಹೇಗಿರುತ್ತದೆ ಎಂಬ ಕುತೂಹಲ ಒಂದುಕಡೆ. ಈ ಬಾರಿ ದುನಿಯಾ ಸೂರಿ ಏನು ಕಥೆ ಹೇಳಲು ಹೊರಟಿದ್ದಾರೆ ಎಂಬ ಬೆರಗು ಮತ್ತೊಂದೆಡೆ. ಈ ಎಲ್ಲಾ ಕುತೂಹಲಗಳಿಗೆ ತೆರೆಬೀಳಬೇಕು ಅಂದ್ರೆ ಜೂ.7ರತನಕ ಕಾಯಲೇಬೇಕು.

'ಕಡ್ಡಿಪುಡಿ' ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ರಾಧಿಕಾಪಂಡಿತ್, ಐಂದ್ರಿತಾ ರೇ, ರಂಗಾಯಣರಘು, ಅವಿನಾಶ್, ಶರತ್ ಲೋಹಿತಾಶ್ವಾ, ಸ್ವಯಂವರ ಚಂದ್ರು, ರೇಣುಕಾಪ್ರಸಾದ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಕೃಷ್ಣರ ಛಾಯಾಗ್ರಹಣವಿರುವ 'ಕಡ್ಡಿಪುಡಿ'ಗೆ ದೀಪು.ಎಸ್.ಕುಮಾರ್ ಅವರ ಸಂಕಲನವಿದೆ. ರವಿವರ್ಮ ಸಾಹಸ ನಿರ್ದೇಶನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಶಶಿಧರ ಅಡಪರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸಾಫ್ಟ್ ಅಂಡ್ ಸಿಲ್ಕಿ ಬೆನ್ನಿನ ಚಿತ್ರೀಕರಣ

ಚಿತ್ರದಲ್ಲಿ ನಟಿ ಐಂದ್ರಿತಾ ರೇ ಅವರು ಬೆನ್ನು ತೋರಿರುವ ಟ್ರೇಲರ್ ಈಗಾಲೆ ಭಾರಿ ಸದ್ದು ಮಾಡಿದೆ. ಆದರೆ ಐಂದ್ರಿತಾ ರೇ ಅವರ ಸಾಫ್ಟ್ ಅಂಡ್ ಸಿಲ್ಕಿ ಬೆನ್ನಿನ ಫೋಟೋಗಳು ಮಾತ್ರ ಲಭ್ಯವಿಲ್ಲ. ಯಾಕೆಂದರೆ ಮುಂದೆ ಓದಿ.

ಸದ್ಯಕ್ಕೆ ಬೆನ್ನಿ ಭಾಗದ ಫೋಟೋ ಲಭ್ಯವಿಲ್ಲ

ಬೆನ್ನಿನ ಭಾಗದ ಚಿತ್ರೀಕರಣ ನಡೆಯುವಾಗ ಅಲ್ಲಿ ಕೇವಲ ನಿರ್ದೇಶಕರು, ಛಾಯಾಗ್ರಾಹಕ ಹಾಗೂ ಇಬ್ಬರು ಸಹಾಯಕರು ಮಾತ್ರ ಇದ್ದರಂತೆ. ಸ್ಟಿಲ್ ಫೋಟೋಗ್ರಾಫರ್ ಇರಲಿಲ್ಲ. ಹಾಗಾಗಿ ಬೆನ್ನಿನ ಫೋಟೋ ತೆಗೆಯಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ ಸೂರಿ.

ಕುತೂಹಲ, ಭಯದಲ್ಲಿ ಐಂದ್ರಿತಾ ರೇ

ಈ ಬೋಲ್ಡ್ ಸೀನ್ ಬಗ್ಗೆ ಐಂದ್ರಿತಾ ರೇ ಸಹ ತುಟಿಬಿಚ್ಚಿದ್ದು, ಚಿತ್ರದಲ್ಲಿ ತಮ್ಮ ಪಾತ್ರವನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲ, ಭಯ ಎರಡೂ ಒಟ್ಟಿಗೆ ಆಗುತ್ತಿವೆ ಎಂದಿದ್ದಾರೆ. ಆದರೆ ಯೂಟ್ಯೂಬ್ ನಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗೆ ಅವರು ಖುಷಿಯಾಗಿದ್ದಾರಂತೆ.

ಸೆನ್ಸಾರ್ ನಲ್ಲಿ ಎ ಸರ್ಟಿಫಿಕೇಟ್

ಒನ್ಸ್ ಎಗೈನ್ ಈ ಚಿತ್ರದಲ್ಲಿ ಶಿವಣ್ಣ ಲಾಂಗು ಹಿಡಿದಿದ್ದಾರೆ. ರೌಡಿಯಿಸಂ ಚಿತ್ರವಾದರೂ ಸ್ವಲ್ಪ ಭಿನ್ನವಾಗಿರುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ದುನಿಯಾ ಸೂರಿ ಅವರ ನಿರ್ದೇಶನದ ಬಗ್ಗೆ ಕುತೂಹಲವೂ ಇದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ.

ಕಡ್ಡಿಪುಡಿ ಕಿಕ್ ಇರುತ್ತದೆ ಎನ್ನುವ ಸೂರಿ

ಚಿತ್ರದಲ್ಲಿ ಶಿವಣ್ಣ ಹೆಸರು ಆನಂದ್ ಅಲಿಯಾಸ್ ಕಡ್ಡಿಪುಡಿ. ಉಮಾ ಪಾತ್ರದಲ್ಲಿ ರಾಧಿಕಾ ಪಂಡಿತ್ ಕಾಣಿಸಲಿದ್ದಾರೆ. ಕಡ್ಡಿಪುಡಿ ಹೆಸರಿಗೆ ತಕ್ಕಂತೆ ತಂಬಾಕಿನ ಕಿಚ್ ಚಿತ್ರದಲ್ಲೂ ಇರುತ್ತದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ಶಿವಣ್ಣ ಪಾತ್ರಕ್ಕೆ ನೆಗಟೀವ್ ಶೇಡ್ ಇದ್ದರೂ ಸ್ವಾರಸ್ಯಕರವಾಗಿದೆಯಂತೆ.

ಲಾಂಗು ಮಚ್ಚುಗಳ ಅಬ್ಬರ ಜೊತೆಗೆ ಪ್ರೀತಿಯ ಎಳೆ

ಚಿತ್ರದಲ್ಲಿ ಲಾಂಗು ಮಚ್ಚುಗಳ ಅಬ್ಬರವಿದ್ದರೂ ಪ್ರೀತಿಯ ಸಣ್ಣ ಎಳೆಯೂ ಬಿಚ್ಚಿಕೊಳ್ಳುತ್ತದೆ. ಗೆಳೆತನ, ಪ್ರೀತಿ ಪ್ರೇಮ ಪ್ರಣಯ, ದ್ವೇಷ, ಮದುವೆ ಅಂಶಗಳೂ ಚಿತ್ರದಲ್ಲಿವೆ. ಇಷ್ಟೆಲ್ಲಾ ವಿಶೇಷಗಳ 'ಕಡ್ಡಿಪುಡಿ' ಚಿತ್ರದ ಕತೆಯನ್ನು ಯುವ ಮತ್ತು ಮಧ್ಯ ವಯಸ್ಕರನ್ನು ಗಮನದಲ್ಲಿಟ್ಟುಕೊಂಡು ಹೆಣೆಯಲಾಗಿದೆ ಎನ್ನುತ್ತಾರೆ ಸೂರಿ.

English summary
Actress Aindrita Ray bold scenes in Kaddipudi, the movie slated for release on 7th June. It's an action movie directed by Duniya Soori. It stars Shivrajkumar and Radhika Pandit in the lead.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada