For Quick Alerts
  ALLOW NOTIFICATIONS  
  For Daily Alerts

  'ಮುಂಗಾರು ಮಳೆ 2' ನಲ್ಲಿ ಗಣಿ ಜೊತೆ ಐಂದ್ರಿತಾ ಡ್ಯುಯೆಟ್

  By Suneetha
  |

  2006 ರಲ್ಲಿ ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ತೆರೆ ಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರು ಮಳೆ' ಚಿತ್ರ 'ಮಳೆ' ಪ್ರೀಯರಿಗೆ ಭಾರಿ ಮನರಂಜನೆ ನೀಡಿದ್ದಂತೂ ಸತ್ಯ.

  ಇದೀಗ ನಿರ್ದೇಶಕ ಶಶಾಂಕ್ ಆಕ್ಷನ್-ಕಟ್ ಹೇಳುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಂಗಳೂರು ಬೆಡಗಿ 'ಮಿಸ್ ಮಂಗಳೂರು' ನೇಹಾ ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಮುಂಗಾರು ಮಳೆ 2' ಚಿತ್ರ ಭರ್ಜರಿಯಾಗಿ ಶೂಟಿಂಗ್ ಮಾಡುತ್ತಿದೆ.[ಒಂಟೆ ಸವಾರಿ ಮಾಡಿ ಗಾಯ ಮಾಡಿಕೊಂಡ 'ಮಳೆ 2' ಹುಡುಗಿ]

  ಇನ್ನು ಈ ಚಿತ್ರದಿಂದ ಹೊರ ಬಿದ್ದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ 'ಮನಸಾರೆ' ಖ್ಯಾತಿಯ ನಟಿ ಐಂದ್ರಿತಾ ರೇ ಅವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ವಹಿಸುತ್ತಿದ್ದಾರೆ.

  ನಟಿ ನೇಹಾ ಶೆಟ್ಟಿ ಅವರಂತೆ ಐಂದ್ರಿತಾ ಅವರಿಗೂ 'ಮುಂಗಾರು ಮಳೆ 2' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಿದೆ ಎಂದು ನಿರ್ದೇಶಕ ಶಶಾಂಕ್ ಅವರು ತಿಳಿಸಿದ್ದಾರೆ.

  'ಭಜರಂಗಿ' ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರ ಜೊತೆ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದ ನಟಿ ಐಂದ್ರಿತಾ ಅವರು 'ಶಾರ್ಪ್ ಶೂಟರ್' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿದ್ದರು.

  ಇದೀಗ ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ಮುಂಗಾರು ಮಳೆ 2' ಸಿನಿಮಾದಲ್ಲಿ ನಟಿ ಐಂದ್ರಿತಾ ಅವರು ಮಿಂಚುವ ಮೂಲಕ ಮತ್ತೆ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

  English summary
  The gorgeous actress Aindrita Ray is all set for romancing Ganesh in the sequel of Mungaru Male 2. The movie is directed by Shashank.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X