For Quick Alerts
  ALLOW NOTIFICATIONS  
  For Daily Alerts

  ಹೊಸ ಸಿನಿಮಾದಲ್ಲಿ ಸತಿ-ಪತಿ ಐಂದ್ರಿತಾ ರೇ, ದಿಗಂತ್ ಅಭಿನಯ

  |

  2009 ರಲ್ಲಿ ತೆರೆಗೆ ಬಂದ 'ಮನಸಾರೆ', 2012 ರಲ್ಲಿ ತೆರೆಗೆ ಬಂದ 'ಪಾರಿಜಾತ' ಚಿತ್ರದಲ್ಲಿ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಒಟ್ಟಾಗಿ ಅಭಿನಯಿಸಿದ್ದರು. ಹಾಗ್ನೋಡಿದ್ರೆ, ಈ ಸಮಯದಲ್ಲೇ ದಿಗಂತ್ ಮತ್ತು ಐಂದ್ರಿತಾ ರೇ ನಡುವೆ ಪ್ರೀತಿ ಮೊಳಕೆಯೊಡೆದಿದ್ದು.

  Diganth and Andy to share screen first time after marriage | Filmibeat kannada

  ಸಿನಿಮಾ ಸೆಟ್ ನಲ್ಲಿ ಪರಿಚಯವಾಗಿ, ಸ್ನೇಹಿತರಾಗಿ, ಪ್ರೇಮಿಗಳಾದ ದಿಗಂತ್ ಮತ್ತು ಐಂದ್ರಿತಾ ರೇ ವರ್ಷದ ಹಿಂದೆ ಮದುವೆಯಾಗಿ ದಂಪತಿಗಳಾಗಿದ್ದಾರೆ. ವೈವಾಹಿಕ ಬದುಕು ಆರಂಭಿಸಿರುವ ದಿಗಂತ್-ಐಂದ್ರಿತಾ ಇದೀಗ ಹೊಸ ಸಿನಿಮಾವೊಂದರಲ್ಲಿ ಒಟ್ಟಾಗಿ ಅಭಿನಯಿಸಲಿದ್ದಾರೆ.

  ಸಿನಿ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ನಟಿ ಐಂದ್ರಿತಾ ರೇ.!ಸಿನಿ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ನಟಿ ಐಂದ್ರಿತಾ ರೇ.!

  ವಿನಾಯಕ ಕೋಡ್ಸರ ನಿರ್ದೇಶನದ ಸಿಲ್ಮ್ ಮಂಜು ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ದಿಗಂತ್ ಮತ್ತು ಐಂದ್ರಿತಾ ರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅಡಿಕೆ ಬೆಳೆಗಾರನಾಗಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ.

  ಹಾಸ್ಯ ಪ್ರಧಾನವಾಗಿರುವ ಈ ಚಿತ್ರ ಬಹುತೇಕ ಮಲೆನಾಡಿನಲ್ಲೇ ಚಿತ್ರೀಕರಣಗೊಳ್ಳಲಿದೆ. ದಿಗಂತ್, ಐಂದ್ರಿತಾ ರೇ ಜೊತೆಗೆ ಕಿರುತೆರೆ ನಟಿ ರಂಜನಿ ರಾಘವನ್ ಕೂಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಸದ್ಯಕ್ಕೆ ಮುಹೂರ್ತ ಪೂಜೆ ಮುಗಿಸಿರುವ ಈ ಚಿತ್ರದ ಚಿತ್ರೀಕರಣ ಇನ್ನೂ ಕೆಲವೇ ದಿನಗಳಲ್ಲಿ ಶುರುವಾಗಲಿದೆ.

  English summary
  Aindritha Ray and Diganth to act together in a new movie directed by Vinayak Kodsara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X