»   » ಹದಿನಾರರ ಪ್ರಾಯಕ್ಕೆ ಐಶ್ವರ್ಯಾ ರೈ ರೀ ಎಂಟ್ರಿ

ಹದಿನಾರರ ಪ್ರಾಯಕ್ಕೆ ಐಶ್ವರ್ಯಾ ರೈ ರೀ ಎಂಟ್ರಿ

By: ಉದಯರವಿ
Subscribe to Filmibeat Kannada

ಇಷ್ಟು ದಿನ ತಾಯ್ತನ ಅನುಭವಿಸಿದ ನಟಿ ಐಶ್ವರ್ಯಾ ರೈ ಈಗ ಹಳೆಯ ಶೇಪ್ ಮತ್ತು ಲುಕ್ ನೊಂದಿಗೆ ಹಿಂತಿರುಗಿದ್ದಾರೆ. ಆರಾಧ್ಯ ಬಚ್ಚನ್ ಹುಟ್ಟಿದ ಬಳಿಕ ಬಣ್ಣದ ಜಗತ್ತಿನಿಂದ ಬಹಳ ದೂರ ಉಳಿದಿದ್ದ ಐಶ್ವರ್ಯಾ ಇದೀಗ ಸೆಕೆಂಡ್ ಇನ್ನಿಂಗ್ಸ್ ಗೆ ರೆಡಿಯಾಗುತ್ತಿದ್ದಾರೆ.

ತಾಯಿಯಾದ ಬಳಿಕ ಅವರ ದೇಹದ ತೂಕದಲ್ಲೂ ಭಾರಿ ವ್ಯತ್ಯಾಸವಾಗಿತ್ತು. ಸೊಂಟದ ಸುತ್ತಳತೆ ಎರಡು ಪಟ್ಟು ಜಾಸ್ತಿಯಾದರೆ, ಮುಖ ಇನ್ನಷ್ಟು ದುಂಡಗೆ ಬದಲಾಗಿತ್ತು. ಇನ್ನು ಹೀರೋಯಿನ್ ಚಾನ್ಸ್ ಅಷ್ಟೇ ಬಿಡಿ ಎಂದು ಕೆಲವರು ಮಾತನಾಡಿಕೊಂಡರು. [ಕಾನ್ ಚಿತ್ರೋತ್ಸವದಲ್ಲಿ ಧುಮ್ಮುಕ್ಕಿದ ಐಶೂ ಸೌಂದರ್ಯ]

ಅವರಿಗೆಲ್ಲರಿಗೂ ಉತ್ತರ ಕೊಡುವಂತೆ ಐಶ್ವರ್ಯಾ ಮತ್ತೆ ಸಿದ್ಧವಾಗಿ ಮರಳಿದ್ದಾರೆ. ತಮ್ಮ ಹಳೆಯ ರೂಪು ಲಾವಣ್ಯದೊಂದಿಗೆ ಪುನಃ ವಾಪಸ್ ಆಗಿದ್ದಾರೆ. ಕಲ್ಯಾಣ್ ಜ್ಯುವೆಲರ್ಸ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅವರು ಇತ್ತೀಚೆಗೆ ಮಳಿಗೆಯೊಂದರ ಉದ್ಘಾಟನೆಗೆ ಬಂದು ಎಲ್ಲರ ಗಮನಸೆಳೆದರು. ಇನ್ನಷ್ಟು ಚಿತ್ರಗಳು ಸ್ಲೈಡ್ ನಲ್ಲಿ ನೋಡಿ.

ಗುಲಾಬಿ ಬಣ್ಣದ ಸೀರೆಯಲ್ಲಿ ಐಶ್ವರ್ಯಾ ರೈ

ಅರುವತ್ತೈದನೇ ಕಲ್ಯಾಣ್ ಜ್ಯುವೆಲ್ಲರ್ಸ್ ಶೋ ರೂಂ ಮುಂಬೈನಲ್ಲಿ ಉದ್ಘಾಟಿಸಿದರು ಐಶ್ವರ್ಯಾ ರೈ. ಚಿನ್ನದ ಕಾಂತಿಯ ನಡುವೆ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು ಮಾಜಿ ವಿಶ್ವಸುಂದರಿ.

ಹದಿನಾರರ ಬಾಲೆಯಂತಾದ ಐಶ್ವರ್ಯಾ

ಈ ಸಂದರ್ಭದಲ್ಲಿ ಮಾತನಾಡಿದ ಐಶ್ವರ್ಯಾ ರೈ, ಕಲ್ಯಾಣ್ ಜ್ಯುವೆಲ್ಲರ್ಸ್ ನಂತಹ ಸಂಸ್ಥೆಗೆ ರಾಯಭಾರಿಯಾಗಿರುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ ಎಂದರು. ಇದೀಗ ಐಶ್ವರ್ಯ ರೈ ವಯಸ್ಸು 42 ಆಗಿದ್ದರೂ ಇನ್ನೂ ಹದಿನಾರರ ಬಾಲೆಯಂತೆ ಕಂಗೊಳಿಸಿದರು.

ಕಲ್ಯಾಣ್ ಜ್ಯುವೆಲ್ಲರ್ಸ್ ರಾಯಭಾರಿ ಐಶೂ

ಮುಂಬೈನಲ್ಲಿ ಆರಂಭವಾದ ಕಲ್ಯಾಣ್ ಜ್ಯುವೆಲ್ಲರ್ಸ್ ಶೋ ರೂಂ ದೇಶದಲ್ಲೇ 65ನೆಯದಾದರೆ, ಮುಂಬೈನಲ್ಲಿ ನಾಲ್ಕನೆಯದು. ಐಶ್ವರ್ಯಾ ರೈ ರಾಯಭಾರಿಯಾದ ಮೇಲೆ ನಮ್ಮ ಉತ್ಪನ್ನಗಳಿಗೆ ಬಹಳ ಬೇಡಿಕೆ ಬಂದಿದೆ ಎನ್ನುತ್ತಾರೆ ಸಿಬ್ಬಂದಿ.

ಸಾಗರದೋಪಾದಿ ಬಂದ ಅಭಿಮಾನಿಗಳು

ಐಶ್ವರ್ಯಾ ರೈ ಅವರು ಉದ್ಘಾಟನೆ ಮಾಡುತ್ತಾರೆ ಎಂದರೆ ಅಭಿಮಾನಿಗಳು ಸುಮ್ಮನಿರಲು ಸಾಧ್ಯವೇ. ಅದೆಲ್ಲಿದ್ದರೋ ಏನೋ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ತಮ್ಮ ನೆಚ್ಚಿನ ತಾರೆಯನ್ನು ಮೊಬೈಲ್ ಗಳಲ್ಲಿ ಸೆರೆಹಿಡಿದುಕೊಂಡರು.

ಶೀಘ್ರದಲ್ಲೇ ಸೆಕೆಂಡ್ ಇನ್ನಿಂಗ್ಸ್ ಶುರು

ಶೀಘ್ರದಲ್ಲೇ ಐಶ್ವರ್ಯಾ ರೈ ಬಾಲಿವುಡ್ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಸಂಜಯ್ ಗುಪ್ತಾ ಅವರ ಜಾಜ್ಬಾ ಚಿತ್ರದ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ ಐಶ್ವರ್ಯಾ.

English summary
Aishwarya Rai Bachchan inaugurated the 65th Kalyan jewellery store and the fourth in Mumbai on Saturday. The actress looked exuberant and beautiful in saree. She was very happy to pose for the crowd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada