For Quick Alerts
  ALLOW NOTIFICATIONS  
  For Daily Alerts

  'ಕೃಷ್ಣ' ಅಜೇಯ್ ರಾವ್ ಗೆ ಬೇಬಿ ಡಾಲ್ ಅಮೂಲ್ಯ 'ರುಕ್ಕು'

  By Harshitha
  |

  'ಸ್ಯಾಂಡಲ್ ವುಡ್ ಕೃಷ್ಣ' ಅಂತ್ಲೇ ಜನಪ್ರಿಯರಾಗಿರುವ ಕನ್ನಡ ನಟ ಅಜೇಯ್ ರಾವ್. 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣಲೀಲಾ' ಸೇರಿದಂತೆ 'ಕೃಷ್ಣ' ಸೀರೀಸ್ ಸಿನಿಮಾಗಳನ್ನ ನೀಡಿರುವ ಅಜೇಯ್ ರಾವ್ ಇದೀಗ ಮತ್ತೊಮ್ಮೆ ಕೃಷ್ಣನ ರೂಪದಲ್ಲೇ ತೆರೆಗೆ ಬರುವುದಕ್ಕೆ ಸಿದ್ದವಾಗುತ್ತಿದ್ದಾರೆ.

  ಅಜೇಯ್ ರಾವ್ ಒಪ್ಪಿಕೊಂಡಿರುವ ಹೊಸ ಚಿತ್ರದ ಹೆಸರು 'ಕೃಷ್ಣ ರುಕ್ಕು'. ಕೃಷ್ಣನಾಗಿರುವ ಅಜೇಯ್ ಗೆ ರುಕ್ಕು ಅಲಿಯಾಸ್ ರುಕ್ಮಿಣಿ ಆಗಿರುವುದು ಅಮೂಲ್ಯ.

  ಇಂದು ಬಸವೇಶ್ವರ ನಗರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ 'ಕೃಷ್ಣ ರುಕ್ಕು' ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಶ್ರೀ ವೆಂಕಟೇಶ್ವರ ಕೃಪಾ ಎಂಟರ್ ಟೈನರ್ ಅರ್ಪಿಸುವ, ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತಾ ಅವರು ನಿರ್ಮಿಸುತ್ತಿರುವ ಚಿತ್ರ 'ಕೃಷ್ಣ ರುಕ್ಕು'. [ತಮಿಳು-ತೆಲುಗಿನಲ್ಲಿ 'ಕೃಷ್ಣಲೀಲಾ' ರೀಮೇಕ್ ಪಕ್ಕಾ!]

  ಅಪ್ಪಟ ಲವ್ ಸ್ಟೋರಿ ಆಗಿರುವ ಈ ಸಿನಿಮಾಗೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶೋಭರಾಜ್, ಗಿರಿಜಾ ಲೋಕೇಶ್, ಲೇಖಾ ಚಂದ್ರ, ಸಿದ್ಧಾರ್ಥ್ ಮಾದ್ಯಮಿಕ, ವಿಜಯ್ ಚೆಂಡೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. [ಅಜೇಯ್ ರಾವ್ ಜತೆ ರಾಧಿಕಾ ಅಥವಾ ಅಮೂಲ್ಯಾ ಡ್ಯುಯೆಟ್]

  ಶ್ರೀಧರ್.ವಿ.ಸಂಭ್ರಮ್ ಸಂಗೀತ ನಿರ್ದೇಶನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಇಂದು ಮುಹೂರ್ತ ಮುಗಿಸಿರುವ 'ಕೃಷ್ಣ ರುಕ್ಕು' ಚಿತ್ರತಂಡ ಸದ್ಯದಲ್ಲೇ ಶೂಟಿಂಗ್ ಗೆ ಚಾಲನೆ ನೀಡಲಿದೆ.

  English summary
  Kannada Actor Ajay Rao and Amulya starrer 'Krishna-Rukku' was officially launched today in Ganapathi Temple, Basaveshwaranagar, Bengaluru. Anil Kumar is directing this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X