»   » ಮುಂದಿನ ತಿಂಗಳು ಬಿಡುಗಡೆ ಆಗಲಿದೆ ಅಜೇಯ್ ರಾವ್ ನಟನೆಯ 'ಧೈರ್ಯಂ'

ಮುಂದಿನ ತಿಂಗಳು ಬಿಡುಗಡೆ ಆಗಲಿದೆ ಅಜೇಯ್ ರಾವ್ ನಟನೆಯ 'ಧೈರ್ಯಂ'

Posted By:
Subscribe to Filmibeat Kannada

'ಕೃಷ್ಣ' ಅಜೇಯ್ ರಾವ್ ಅಭಿನಯದ 'ಧೈರ್ಯಂ' ಚಿತ್ರ ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಶಿವತೇಜಸ್ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಅಜೇಯ್ ರಾವ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ಮೈಂಡ್ ಗೇಮ್ ಮೂಲಕ ಪ್ರೇಕ್ಷಕರಿಗೆ ಬದುಕಿನ ಕಷ್ಟಗಳನ್ನು ಹೇಗೆ ಎದುರಿಸಬೇಕೆಂದು ಧೈರ್ಯ ತುಂಬುವ ಪಾತ್ರಕ್ಕೆ ಅಜೇಯ್ ರಾವ್ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರವಿಶಂಕರ್, ಟಿವಿ ನಿರೂಪಕಿ ಆಗಿ ಅಧಿತಿ ಪ್ರಭುದೇವ್ ಅಭಿನಯಿಸಿದ್ದಾರೆ.

Ajay Rao starrer 'Dhairyam' to release in July

ರೋಚಕವಾಗಿ ಮೂಡಿಬಂದಿರುವ 'ಧೈರ್ಯಂ' ಟ್ರೈಲರ್ ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಥ್ರಿಲ್ ನೀಡುವ ಅಜೇಯ್ ರಾವ್ ಅಭಿನಯದ 'ಧೈರ್ಯಂ' ಟ್ರೈಲರ್, ನೀವೂ ನೋಡಿ..

ವೃತ್ತಿಯಲ್ಲಿ ವೈದ್ಯರಾದ ಡಾ.ರಾಜು 'ಧೈರ್ಯಂ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಏಮಿಲ್ ಸಂಗೀತ ಈ ಚಿತ್ರಕ್ಕಿದೆ.

ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿರುವ 'ಧೈರ್ಯಂ', ಸೆನ್ಸಾರ್ ಅಂಗಳದಿಂದ ಪಾಸ್ ಆಗುತ್ತಿದ್ದಂತೆಯೇ ನಿಮ್ಮ ಮುಂದೆ ಬರಲಿದೆ.

English summary
Ajay Rao starrer Kannada Movie 'Dhairyam' to release in July 2017

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada