For Quick Alerts
  ALLOW NOTIFICATIONS  
  For Daily Alerts

  ತುಳುನಾಡನ್ನು ನಗಿಸಲು ಬಂದಿದೆ 'ಅಪ್ಪೆ ಟೀಚರ್'

  By Harshitha
  |

  'ಅಪ್ಪೆ ಟೀಚರ್'.... ಸದ್ಯ ಕೋಸ್ಟಲ್ ವುಡ್ ಸಿನಿಮಾ ವಲಯದಲ್ಲಿ ಭರ್ಜರಿ ಪ್ರೊಮೋಷನ್ ಮಾಡುತ್ತಾ ಬಿಡುಗಡೆ ಆಗಿರುವ ಕಾಮಿಡಿ ಚಿತ್ರ.

  'ಅಪ್ಪೆ ಟೀಚರ್'... ಚಿತ್ರೀಕರಣ ಹಂತದಿಂದಲೇ ನಾನಾ ಕಾರಣದಿಂದ ಸೌಂಡ್ ಮಾಡುತ್ತಾ ಬಂದಿದೆ. ಟೈಟಲ್ ನಿಂದಲೇ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. 'ಅಪ್ಪೆ ಟೀಚರ್' ಅಂದ್ರೆ ಕನ್ನಡದಲ್ಲಿ ಅಮ್ಮ ಟೀಚರ್ ಎನ್ನುವ ಅರ್ಥ ಇದೆ.

  ಈಗಾಗಲೇ 14 ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಅನುಭವವುಳ್ಳ ಕಿಶೋರ್ ಮೂಡುಬಿದಿರೆ ಮೊದಲ ಬಾರಿ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು. ಈ ಚಿತ್ರವನ್ನು ನಿರ್ಮಿಸುವ ಕರ್ತವ್ಯವನ್ನು ಹೊತ್ತವರು ರತ್ನಾಕರ್ ಕಾಮತ್.

  ಚಿತ್ರದಲ್ಲಿ ಉದಯ ಲೀಲಾ ರವರ ಛಾಯಗ್ರಹಣ ಇದ್ದು, ಮಂಗಳೂರು ಸುತ್ತ‌ಮುತ್ತ ಚಿತ್ರೀಕರಣ ಗೊಂಡಿದೆ. ಹಾಸ್ಯ ದಿಗ್ಗಜರಾದ ವಾಮಂಜೂರು, ಅರವಿಂದ ಬೋಳರ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಉಮೇಶ್ ಮಿಜಾರ್, ಗೋಪಿನಾಥ್ ಭಟ್, ಉಷಾ ಭಂಡಾರಿ ಅಂತಹ ಕಲಾವಿದರು ಇದ್ದಾರೆ. ಚಿತ್ರಕ್ಕೆ ಯು.ಎ ಸರ್ಟಿಫಿಕೇಟ್ ದೊರಕಿದೆ. 'ಅಪ್ಪೆ ಟೀಚರ್' ಕಾಮಿಡಿ ಚಿತ್ರವಾದರೂ ಕೂಡ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಸಾರುತ್ತಿದೆ.

  English summary
  The most awaited Tulu Movie 'Appe Teacher' is in Theaters. The Movie is directed by Kishore Moodbidri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X