For Quick Alerts
  ALLOW NOTIFICATIONS  
  For Daily Alerts

  'ಅಪೂರ್ವ' ಚಿತ್ರದ ಬಗ್ಗೆ ರಹಸ್ಯ ಬಿಚ್ಚಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್.!

  By Harshitha
  |

  ಸಿನಿಮಾ ಅಂದ್ರೆ ಉಸಿರು ಎನ್ನುವ ಕನಸುಗಾರ ರವಿಚಂದ್ರನ್ ರವರ ಹೊಸ ಕನಸು 'ಅಪೂರ್ವ' ಈ ವಾರ ತೆರೆಗೆ ಬರುತ್ತಿದೆ.

  ಪ್ರತಿ ಸಿನಿಮಾದಲ್ಲಿ ಏನಾದರೊಂದು ವಿಭಿನ್ನ ಪ್ರಯೋಗ ಮಾಡುವ ರವಿಮಾಮ 'ಅಪೂರ್ವ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಇದುವರೆಗೂ ಯಾರೂ ಮಾಡದ ಸಾಹಸಕ್ಕೆ ಕೈಹಾಕಿದ್ದಾರೆ ಅನ್ನೋದು ರಹಸ್ಯವಾಗಿ ಉಳಿದಿಲ್ಲ.

  'ಅಪೂರ್ವ' ಚಿತ್ರದ ಮುಕ್ಕಾಲು ಭಾಗ ಒಂದು ಲಿಫ್ಟ್ ನಲ್ಲೇ ನಡೆಯುವ ಕಥೆ. ಲಿಫ್ಟ್ ನಲ್ಲಿ ಲಾಕ್ ಆಗುವ 61 ರ ಮುದುಕ ಹಾಗು 19 ರ ಯುವತಿ ಮಧ್ಯೆ ನಡೆಯುವ ಅಪರೂಪದ ಕಥೆ 'ಅಪೂರ್ವ'. [ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]

  ಮೂರು ವರ್ಷಗಳ ಹಿಂದೆ ಸೆಟ್ಟೇರಿದ್ದ 'ಅಪೂರ್ವ' ಚಿತ್ರದ ಬಗ್ಗೆ ನಿಮಗೆ ಗೊತ್ತಿರುವ ಮಾಹಿತಿ ಇಷ್ಟೇ. ಈ ಶುಕ್ರವಾರ 'ಅಪೂರ್ವ' ತೆರೆಗೆ ಬರುತ್ತಿರುವ ಬೆನ್ನಲ್ಲೇ, ಚಿತ್ರದ ಬಗ್ಗೆ ಒಂದು ರಹಸ್ಯ ಬಿಚ್ಚಿಟ್ಟಿದ್ದಾರೆ 'ಶೋಮ್ಯಾನ್' ರವಿಚಂದ್ರನ್. ಅದೇನು ಅಂತಹ ರಹಸ್ಯ? ಎಂಬುದನ್ನು ತಿಳಿಯಲು ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....

  ಲಿಫ್ಟ್ ನಲ್ಲಿ ಲಾಕ್ ಆಗುವುದು ಯಾಕೆ?

  ಲಿಫ್ಟ್ ನಲ್ಲಿ ಲಾಕ್ ಆಗುವುದು ಯಾಕೆ?

  ಮೊಬೈಲ್, ಇಂಟರ್ನೆಟ್ ಸೇರಿದಂತೆ ಎಲ್ಲವೂ ಅಂಗೈನಲ್ಲಿಯೇ ಇರುವ ಇಂದಿನ ಯುಗದಲ್ಲಿ, ಲಿಫ್ಟ್ ನಲ್ಲಿ ಅಪ್ಪಿ-ತಪ್ಪಿ ಲಾಕ್ ಆದರೆ, ಅದನ್ನ ಹೊರಗಿರುವ ಮಂದಿಗೆ ತಲುಪಿಸಿ, ಹೊರಗೆ ಬರಲು ಹೆಚ್ಚು ಸಮಯ ಬೇಕಾಗಲ್ಲ. ಹೀಗಿರುವಾಗ, 'ಅಪೂರ್ವ' ಚಿತ್ರ ವಾಸ್ತವಕ್ಕೆ ಹೇಗೆ ಹತ್ತಿರವಿರಬಹುದು ಎಂಬ ಪ್ರಶ್ನೆ ನಿಮಗೆ ಕಾಡಬಹುದು. ಆ ಪ್ರಶ್ನೆಗೆ ರವಿಚಂದ್ರನ್ ಉತ್ತರ ಕೊಟ್ಟಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

  'ಅಪೂರ್ವ' ಚಿತ್ರದಲ್ಲಿ ಭಯೋತ್ಪಾದಕರು?

  'ಅಪೂರ್ವ' ಚಿತ್ರದಲ್ಲಿ ಭಯೋತ್ಪಾದಕರು?

  ಒಂದು ಲಿಫ್ಟ್ ನಲ್ಲಿ 3 ಗಂಟೆ ಲಾಕ್ ಆಗುವ ಸನ್ನಿವೇಶ ನಿರ್ಮಾಣವಾಗಲು 'ಅಪೂರ್ವ' ಚಿತ್ರದಲ್ಲಿ 'ಭಯೋತ್ಪಾದಕರು' ಕಾರಣ.! ಹಾಗಂತ ಖುದ್ದು ರವಿಚಂದ್ರನ್ ಹೇಳಿದ್ದಾರೆ. [ಕ್ರೇಜಿಸ್ಟಾರ್ ಗೆ 'ಲಹರಿ' ಸಂಸ್ಥೆ ಕೊಟ್ಟಿದ್ದು ಬ್ಲ್ಯಾಂಕ್ ಚೆಕ್!]

  ಎಲ್ಲವೂ ವಾಯ್ಸ್ ನಲ್ಲೇ.!

  ಎಲ್ಲವೂ ವಾಯ್ಸ್ ನಲ್ಲೇ.!

  'ಅಪೂರ್ವ' ಚಿತ್ರದಲ್ಲಿ 'ಭಯೋತ್ಪಾದಕ'ರಾಗಿ ಯಾರೆಲ್ಲಾ ಅಭಿನಯಿಸಿದ್ದಾರೆ ಅಂತ ಕೇಳ್ಬೇಡಿ. ಯಾಕಂದ್ರೆ, ಈಗಾಗಲೇ ಹೇಳಿದಂತೆ 'ಅಪೂರ್ವ' ಒಂದು ಲಿಫ್ಟ್ ನಲ್ಲಿ ನಡೆಯುವ ಕಥೆ. ಲಿಫ್ಟ್ ನಲ್ಲಿ ಸಿಲುಕಿರುವ 61 ರ ಮುದುಕ ಹಾಗು 19 ರ ಯುವತಿಗೆ ಭಯೋತ್ಪಾದಕರ ಮುಖ ಪರಿಚಯ ಇಲ್ಲ. ಅವರಿಗೆ ಕೇಳುವುದು ಟೆರರಿಸ್ಟ್ ವಾಯ್ಸ್ ಮಾತ್ರ. ಹೀಗಾಗಿ, ಸಿನಿಮಾದಲ್ಲಿ ಧ್ವನಿ ಮೂಲಕವೇ 'ಭಯ' ಸೃಷ್ಟಿಸುವ ವಿಭಿನ್ನ ಪ್ರಯತ್ನ ಮಾಡಿದ್ದಾರೆ ರವಿಚಂದ್ರನ್.

  ರವಿಶಂಕರ್ ಆರ್ಭಟ.!

  ರವಿಶಂಕರ್ ಆರ್ಭಟ.!

  ಭಯೋತ್ಪಾದಕರ ಧ್ವನಿ ಎಂದ ಕೂಡಲೆ, ಎಲ್ಲರ ಗುಂಡಿಗೆ ನಡುಗುವ ಧ್ವನಿ ಇರಬೇಕಲ್ವಾ? ಅದಕ್ಕೆ ಅಂತಲೇ ನಟ ರವಿಶಂಕರ್ 'ಅಪೂರ್ವ' ಚಿತ್ರಕ್ಕಾಗಿ ಕಂಠದಾನ ಮಾಡಿದ್ದಾರೆ.

  ಕಿಚ್ಚ ಸುದೀಪ್ ಕೂಡ ವಾಯ್ಸ್ ನೀಡಿದ್ದಾರೆ!

  ಕಿಚ್ಚ ಸುದೀಪ್ ಕೂಡ ವಾಯ್ಸ್ ನೀಡಿದ್ದಾರೆ!

  ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, 'ಅಪೂರ್ವ' ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಧ್ವನಿ ನೀಡಿದ್ದಾರೆ.

  'XXX' ಅಂದ್ರೆ ಏನು?

  'XXX' ಅಂದ್ರೆ ಏನು?

  ಈಗ ರಿಲೀಸ್ ಆಗಿರುವ 'ಅಪೂರ್ವ' ಚಿತ್ರದ ಪೋಸ್ಟರ್ಸ್ ನಲ್ಲಿ 'XXX' ಅಂತ ಬರೆಯಲಾಗಿದೆ. ಏನಿದು 'XXX' ಅಂತ ಕೇಳಿದ್ರೆ, ನಟ ರವಿಚಂದ್ರನ್ ರವರಿಂದ ಬರುವ ಉತ್ತರ 'ಅದೇ ಸಸ್ಪೆನ್ಸ್. ಸಿನಿಮಾ ನೋಡಿದ್ರೆ ಅರ್ಥವಾಗುತ್ತೆ' ಅಂತ.

  ನಿರ್ದೇಶನ ಮಾಡಿಲ್ಲ ರವಿಚಂದ್ರನ್.?

  ನಿರ್ದೇಶನ ಮಾಡಿಲ್ಲ ರವಿಚಂದ್ರನ್.?

  ಅದೇ ಪೋಸ್ಟರ್ಸ್ ನ ನೀವು ಗಮನವಿಟ್ಟು ನೋಡಿದ್ರೆ, 'A FILM 'D'SIGNED BY' ವಿ.ರವಿಚಂದ್ರನ್ ಅಂತ ಇದೆ ಹೊರತು, ಯಾವುದರಲ್ಲೂ ಇದು 'ಕನಸುಗಾರನ ಮತ್ತೊಂದು ಕನಸು' ಅಥವಾ 'ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ಸಂಗೀತ-ನಿರ್ದೇಶನ : ವಿ.ರವಿಚಂದ್ರನ್' ಅಂತ ಇಲ್ಲ. ['ಅಪೂರ್ವ' ಚಿತ್ರದ ನಿರ್ದೇಶಕ ವಿ.ರವಿಚಂದ್ರನ್ ಅಲ್ಲ!]

  ಯಾಕೆ ನಿರ್ದೇಶನದ ಹೊಣೆ ಹೊತ್ತಿಲ್ಲ?

  ಯಾಕೆ ನಿರ್ದೇಶನದ ಹೊಣೆ ಹೊತ್ತಿಲ್ಲ?

  'ಅಪೂರ್ವ' ಸಿನಿಮಾದಲ್ಲಿ ಇರುವುದು ನಾಯಕ ಹಾಗೂ ನಾಯಕಿ ಇಬ್ಬರೇ. ಒಂದೇ ಲಿಫ್ಟ್ ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಹೀಗಾಗಿ, 'ಅಪೂರ್ವ' ಚಿತ್ರಕ್ಕೆ ಸಹ ನಿರ್ದೇಶಕರ ಅವಶ್ಯಕತೆ ಇರ್ಲಿಲ್ಲ. ತಾಂತ್ರಿಕ ವರ್ಗದಲ್ಲಿ ಇದ್ದವರು ಬೆರಳೆಣಿಕೆಯ ಮಂದಿ ಮಾತ್ರ. ಟೆಕ್ನಿಕಲ್ ಹಾಗೂ ಚಿತ್ರದ ಡಿಸೈನಿಂಗ್ ನಲ್ಲಿ ರವಿಚಂದ್ರನ್ ರವರ ಕೈಚಳಕ ಹೆಚ್ಚಾಗಿದ್ದರಿಂದ ಅದಕ್ಕೆ ಮಾತ್ರ ಕ್ರೆಡಿಟ್ ತೆಗೆದುಕೊಂಡಿದ್ದಾರೆ. ಹೀಗಾಗಿ 'ನಿರ್ದೇಶಕ' ಅಂತ ಹಾಕಿಕೊಂಡಿಲ್ಲ.

  ಈ ಬಾರಿ ಗ್ರ್ಯಾಂಡ್ ಹುಟ್ಟುಹಬ್ಬ.!

  ಈ ಬಾರಿ ಗ್ರ್ಯಾಂಡ್ ಹುಟ್ಟುಹಬ್ಬ.!

  'ಮಂಜಿನ ಹನಿ' ಚಿತ್ರ ತಡವಾದ ಕಾರಣದಿಂದಾಗಿ ಕಳೆದ ಕೆಲ ವರ್ಷಗಳಿಂದ ನಟ ರವಿಚಂದ್ರನ್ ಬರ್ತಡೆ ಸೆಲೆಬ್ರೇಟ್ ಮಾಡುವ ಮೂಡ್ ನಲ್ಲಿ ಇರ್ಲಿಲ್ಲ. ಆದ್ರೆ, ಈ ಬಾರಿ ರವಿಚಂದ್ರನ್ ಹುಟ್ಟುಹಬ್ಬದ (ಮೇ 30) ಪ್ರಯುಕ್ತ ಈ ಶುಕ್ರವಾರ (ಮೇ 27) 'ಅಪೂರ್ವ' ಸಿನಿಮಾ ಬಿಡುಗಡೆ ಆಗುತ್ತಿದೆ. ಹೀಗಾಗಿ, ಈ ವರ್ಷ 'ಹರ್ಷದ ಹುಟ್ಟುಹಬ್ಬ' ಎನ್ನುತ್ತಾರೆ ರವಿಚಂದ್ರನ್.

  ಮಿಸ್ ಮಾಡದೆ ನೋಡ್ತೀರಾ 'ಅಪೂರ್ವ'?

  ಮಿಸ್ ಮಾಡದೆ ನೋಡ್ತೀರಾ 'ಅಪೂರ್ವ'?

  ಈ ವಾರ ತೆರೆಗೆ ಬರುತ್ತಿರುವ ಬಹುನಿರೀಕ್ಷಿತ 'ಅಪೂರ್ವ' ಚಿತ್ರವನ್ನ ನೀವೆಲ್ಲಾ ನೋಡ್ತೀರಾ? ನಿಮ್ಮ ಅಭಿಪ್ರಾಯವನ್ನು ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

  English summary
  Kannada Actor Crazy Star V.Ravichandran starrer 'Apoorva' is all set to release on May 27th. Before you decide whether to watch the film, read this article to know about 'Apoorva'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X