»   » ನಟಿ ನಿಕೇಶಾ ಪಟೇಲ್ ಗೆ ಸಹಿಸಲಸಾಧ್ಯ ನೋವು

ನಟಿ ನಿಕೇಶಾ ಪಟೇಲ್ ಗೆ ಸಹಿಸಲಸಾಧ್ಯ ನೋವು

By: ಉದಯರವಿ
Subscribe to Filmibeat Kannada

ನಟಿ ನಿಕೇಶಾ ಪಟೇಲ್ ಅವರಿಗೆ ಈ ಕುದುರೆಗಳ ಸಹವಾಸ ಸಾಕಪ್ಪಾ ಸಾಕು ಎನ್ನಿಸಿದೆಯಂತೆ. ಕನ್ನಡದ 'ಅಲೋನ್' ಹಾಗೂ ತಮಿಳಿನ ಚಿತ್ರವೊಂದರಲ್ಲಿ ಅವರು ಅಭಿನಯಿಸುತ್ತಿದ್ದು, ಎರಡೂ ಚಿತ್ರಗಳಲ್ಲಿ ಕುದುರೆ ಸವಾರಿ ಮಾಡಿ ಮೈಕೈ ನೋಯಿಸಿಕೊಂಡಿದ್ದಾರೆ.

ಈಗ ಆ ನೋವುಗಳ ಸಿಹಿ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ಏಕಕಾಲಕ್ಕೆ ಅವರು ಕುದುರೆ ಸವಾರಿ ಮಾಡುತ್ತಿರುವುದು ವಿಶೇಷ. ಕುದುರೆ ಸವಾರಿ ಅವರಿಗೆ ಹೊಸತು. ಇದೇ ಮೊದಲ ಬಾರಿಗೆ ಅವರು ಕುದುರೆ ಜೀನ್ ಎಳೆಯುತ್ತಿರುವುದು. [ತುಂಡುಡುಗೆಯಲ್ಲಿ ಹುಟ್ಟುಮಚ್ಚೆ ಪ್ರದರ್ಶಿಸಿದ ನಿಕೇಶಾ]

ನಿಕೇಶಾ ಪಟೇಲ್

ಕುದುರೆ ಸವಾರಿ ಸನ್ನಿವೇಶಗಳಿಂದ ನಿಕೇಶಾ ಹೈರಾಣಾಗಿದ್ದಾರೆ. ಎದ್ದು ಬಿದ್ದು ಕುದುರೆ ಓಡಿಸಿ ಈಗ ಉಸ್ಸಪ್ಪಾ ಎಂದು ಹಾಸಿಗೆ ಉರುಳಿದ್ದಾರೆ. ಹಾರ್ಸ್ ರೈಡಿಂಗ್ ಅಷ್ಟು ಸುಲಭ ಅಲ್ಲ ಎಂಬುದು ಅವರಿಗೆ ಈಗ ಮನವರಿಕೆಯಾಗಿದೆಯಂತೆ.

ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಕುದುರೆಯಿಂದ ಬಿದ್ದು ಮೂಗೇಟುಗಳನ್ನು ಮಾಡಿಕೊಂಡಿರುವ ಅವರ ಮೂಕ ಯಾತನೆ ಯಾರಿಗೆ ಬೇಡ ಎಂಬಂತಿದೆ. ಇತ್ತೀಚೆಗೆ ತೆರೆಕಂಡ 'ನಮಸ್ತೇ ಮೇಡಂ' ಚಿತ್ರ ನಿಕೇಶಾ ಅವರಿಗೆ ಸ್ವಲ್ಪ ಹೆಸರು ತಂದುಕೊಟ್ಟಿದೆ.

ನರಸಿಂಹ, ಡಕೋಟ ಪಿಕ್ಚರ್ ಹಾಗೂ ವರದನಾಯಕ ಚಿತ್ರಗಳಲ್ಲೂ ನಿಕೇಶಾ ಅಭಿನಯಿಸಿದ್ದಾರೆ. "ದಹನ ದಹನ ತನುಮನ.. ಬೇಗ ಹೇಳು ಒಂದು ಉಪಶಮನ..." ಎಂದು 'ನರಸಿಂಹ' ಚಿತ್ರದ ಹಾಟ್ ಅಂಡ್ ವೆಟ್ ಸಾಂಗ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಮೈ ಬಳುಕಿಸಿದ್ದ ನಿಕೇಶಾ ಪಟೇಲ್ ಈಗ ಮೈಕೈ ನೋವಿನಿಂದ ಬಳಲುತ್ತಿದ್ದಾರೆ.

English summary
Kannada actress Nikesha Patel's first tryst with horse riding on the sets of her Kannada film "Aaalone" and Tamil thriller "Karaioram" has left her badly bruised. She tweeted same on twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada