Just In
Don't Miss!
- News
ಚಿನ್ನದ ಬೆಲೆ ಏರಿಳಿತ: ಜನವರಿ 25ರ ಬೆಲೆ ಹೀಗಿದೆ
- Automobiles
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಹೀರೋ ಮೋಟೊಕಾರ್ಪ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Sports
"ಸಿಡ್ನಿಯಲ್ಲಿ ನಾನು 30 ನಿಮಿಷ ಹೆಚ್ಚು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು"
- Lifestyle
ನಿಮ್ಮ ದೇಹದ ಮೇಲಿನ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಅಮರ್' ಚಿತ್ರದ ತಾನ್ಯ ಪಾತ್ರಕ್ಕೆ ಸ್ಫೂರ್ತಿಯಾಗಿದ್ದು ಕನ್ನಡದ ಈ ನಟಿಯಂತೆ!
'ಅಮರ್' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅದ್ದೂರಿಯಾಗಿ ಲಾಂಚ್ ಆಗಿದ್ದಾರೆ. ಚಿತ್ರ ಕೆಲವರಿಗೆ ಇಷ್ಟ ಆಗಿದೆ. ಇನ್ನು ಕೆಲವರಿಗೆ ಸಿನಿಮಾ ಸರಿ ಎನ್ನಿಸಿಲ್ಲ. ಅದೇನೇ ಇದ್ದರೂ ಸಿನಿಮಾದ ಒಂದು ಪ್ರಮುಖ ವಿಷಯ ಇದೀಗ ಹೊರ ಬಂದಿದೆ.
ಸಿನಿಮಾದಲ್ಲಿ ನಟಿ ತಾನ್ಯ ಹೋಪ್ ಪಾತ್ರ ಹೇಗೆ ಸೃಷ್ಟಿಯಾಗಿದೆ ಎನ್ನುವ ವಿಷಯವನ್ನು ನಿರ್ದೇಶಕ ನಾಗಶೇಖರ್ ಹಂಚಿಕೊಂಡಿದ್ದಾರೆ. ಕನ್ನಡದ ಒಬ್ಬ ಹೆಸರಾಂತ ನಟಿಯ ಜೀವನದಿಂದ ಸ್ಫೂರ್ತಿ ಪಡೆದು ಈ ಪಾತ್ರವನ್ನು ಮಾಡಲಾಗಿದೆಯಂತೆ.
Amar Review : ಲವ್ ಸ್ಟೋರಿ ತರ ಅಲ್ಲ.. ಲವ್ ಸ್ಟೋರಿನೇ..
ಸಿನಿಮಾದ ಬಿಡುಗಡೆಗೆ ಮೊದಲೇ ದಕ್ಷಿಣ ಭಾರತದ ನಟಿಯೊಬ್ಬರ ಜೀವನದಿಂದ ತಾನ್ಯ ಪಾತ್ರ ಸ್ಫೂರ್ತಿ ಪಡೆದಿದೆ ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದರು. ಈಗ ಆ ನಟಿ ಯಾರು ಎನ್ನುವದು ತಿಳಿದಿದೆ. ಮುಂದೆ ಓದಿ...

ನಟಿ ಮಹಾಲಕ್ಷ್ಮಿ ಜೀವನ
'ಅಮರ್' ಚಿತ್ರದ ತಾನ್ಯ ಪಾತ್ರ ನಟಿ ಮಹಾಲಕ್ಷ್ಮಿ ಅವರ ಜೀವನದಿಂದ ಸ್ಫೂರ್ತಿ ಪಡೆದು ಮಾಡಲಾಗಿದೆಯಂತೆ. ಮಹಾಲಕ್ಷ್ಮಿ ದಕ್ಷಿಣ ಭಾರತದ ಪ್ರಮುಖ ತಾರೆಯಾಗಿದ್ದು, ಕನ್ನಡ, ತಮಿಳು, ತೆಲುಗು, ಮಲೆಯಾಳಂ ನಲ್ಲಿ ನಟಿಸಿದ್ದಾರೆ. ಕನ್ನಡದ 'ಜಯಸಿಂಹ', 'ಹೆಂಡ್ತಿಗೆ ಹೇಳ್ಬೇಡಿ', 'ಪೂಜಾ ಫಲ', 'ತಾಯಿ ಕೊಟ್ಟ ತಾಳಿ' ಚಿತ್ರಗಳ ನಾಯಕಿಯಾಗಿದ್ದಾರೆ.

ತಾನ್ಯ ಹೋಪ್ ಪಾತ್ರ ಏನು?
ನಟಿ ತಾನ್ಯ ಹೋಪ್ ಪಾತ್ರದ ಹೆಸರು ಬಾಬಿ. ಪ್ರೀತಿಸಿದ ಹುಡುಗ ಮೋಸ ಮಾಡಿದ ಎಂದು ತಿಳಿದಾಗ ಆಕೆ ತನ್ನ ಜೀವನವನ್ನು ಬೇರೆ ಕಡೆ ಗಮನ ನೀಡುತ್ತಾಳೆ. ಹಾಗಾಗಿ ಕ್ರೈಸ್ತ ಸನ್ಯಾಸಿನಿ ಆಗಿ ಬದಲಾಗಿ ಜೀವನದಲ್ಲಿ ಹಿಂದೆ ನಡೆದ ಎಲ್ಲ ಘಟನೆಗಳನ್ನು ಮರೆಯಲು ಪ್ರಯತ್ನ ಮಾಡುತ್ತಾಳೆ.
'ಒಲವಿನ' ಬದುಕಿನಲ್ಲಿ ನೊಂದ ನಟಿ ಮಹಾಲಕ್ಷ್ಮಿ 'ಸನ್ಯಾಸಿನಿ' ಆದ ಕಥೆ-ವ್ಯಥೆ

ಪಾತ್ರಕ್ಕೆ ಎರಡು ಶೇಡ್ ಇದೆ
ತಾನ್ಯ ಹೋಪ್ ಪಾತ್ರಕ್ಕೆ ಎರಡು ಶೇಡ್ ಇದೆ. ಮೊದಲ ಬಾಬಿಯಾಗಿ ಸ್ಟೈಲಿಶ್ ಕಾಲೇಜ್ ಹುಡುಗಿಯಾಗಿ ತಾನ್ಯ ಕಾಣಿಸಿಕೊಂಡಿದ್ದಾರೆ. ಬೈಕ್ ರೈಡ್ ಮಾಡುತ್ತ, ಅಮರ್ ಜೊತೆಗೆ ಪ್ರೀತಿಯಲ್ಲಿ ಬೀಳುವ ಈಕೆ, ಮುಂದೆ ಕ್ರೈಸ್ತ ಸನ್ಯಾಸಿನಿ ಆಗುತ್ತಾಳೆ. ಈ ಎರಡು ಶೇಡ್ ನಲ್ಲಿ ತುಂಬ ಚೆನ್ನಾಗಿ ತಾನ್ಯ ಹೋಪ್ ನಟಿಸಿದ್ದಾರೆ.

'ಅಮರ್' ಸಿನಿಮಾ ಹೇಗಿದೆ ?
ನಿರ್ದೇಶಕ ನಾಗಶೇಖರ್ ಲವ್ ಸ್ಟೋರಿ ಮಾಡುವುದರಲ್ಲಿ ಎತ್ತಿದ ಕೈ ಎಂದು ಈಗಾಗಲೇ ತೋರಿಸಿದ್ದಾರೆ. ಅದೇ ರೀತಿ ಇಲ್ಲಿಯೂ ಒಂದು ಸುಂದರ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಹೇಳಿದ್ದಾರೆ. ಅಪ್ಪನಂತೆ ಗತ್ತು ತೋರಿಸುತ್ತ, ಡೈಲಾಗ್, ಫೈಟ್ ಜೊತೆಗೆ ಲವರ್ ಬಾಯ್ ಆಗಿ ಅಭಿ ಆಗಮನ ಆಗಿದೆ. ಅಭಿಷೇಕ್ ಸ್ಟೈಲ್ ನಲ್ಲಿಯೇ ಹೇಳಬೇಕು ಅಂದರೆ, ಇದು 'ಲವ್ ಸ್ಟೋರಿ ತರ ಅಲ್ಲ.. ಲವ್ ಸ್ಟೋರಿನೇ..'