Just In
- 34 min ago
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- 8 hrs ago
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
- 9 hrs ago
ಪವನ್ ಕಲ್ಯಾಣ್ ಪಾರ್ಟಿ ಮೀಟಿಂಗ್ ವಿಡಿಯೋ ವೈರಲ್: ಚಿರಂಜೀವಿ ಬಗ್ಗೆ ಭರ್ಜರಿ ಸುದ್ದಿ
- 10 hrs ago
ಆಘಾತ ತಂದ ನಿರ್ಣಯ: ವಿಜಯ್ ವಿರುದ್ಧ ಚಿತ್ರಮಂದಿರ ಮಾಲೀಕರು ತೀವ್ರ ಅಸಮಾಧಾನ
Don't Miss!
- News
ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂಸಿ ಮನಗೂಳಿ ವಿಧಿವಶ
- Lifestyle
ಗುರುವಾರದ ಭವಿಷ್ಯ : ಮೇಷದವರಿಗೆ ಆರ್ಥಿಕ ಬಲ, ಉಳಿದ ರಾಶಿಫಲ ಹೇಗಿದೆ?
- Sports
ಐಎಸ್ಎಲ್: ಸಮಬಲ ಸಾಧಿಸಿದ ಕೇರಳ ಬ್ಲಾಸ್ಟರ್ಸ್, ಜೆಮ್ಷೆಡ್ಪುರ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್ಯುವಿ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರಮಂದಿರಗಳು ಪೂರ್ಣ ತೆರೆಯದೇ ಇರುವ ಹಿಂದೆ ಅಂಬಾನಿ ಕೈವಾಡ: ದರ್ಶನ್ ಅನುಮಾನ
ನಟ ದರ್ಶನ್, ಉದ್ಯಮಿ ಅಂಬಾನಿಯ ಕುರಿತು ಅನುಮಾನವೊಂದನ್ನು ಎತ್ತಿದ್ದಾರೆ. ಚಿತ್ರಮಂದಿರಗಳನ್ನು ಪೂರ್ಣವಾಗಿ ತೆರೆಯದೇ ಇರುವ ಹಿಂದೆ ಅಥವಾ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನಿರಾಕರಿಸುತ್ತಿರುವ ಹಿಂದೆ ಅಂಬಾನಿಯ ಕೈವಾಡ ಇರಬಹುದು ಎಂದಿದ್ದಾರೆ ದರ್ಶನ್ ಎತ್ತಿದ್ದಾರೆ.
ಇಂದು ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ನಟ ದರ್ಶನ್, ಮಾರ್ಕೆಟ್‌ನಲ್ಲಿ, ಮದುವೆಗಳಲ್ಲಿ ಜನವಿದ್ದಾರೆ. ಸ್ಕೂಲು-ಕಾಲೇಜುಗಳು ಸಹ ತೆರೆದಿವೆ. ಎಲ್ಲೆಡೆ ಜನಗಳು ಗುಂಪು ಸೇರುತ್ತಿದ್ದಾರೆ ಆದರೆ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು ದರ್ಶನ್.
ಒಟಿಟಿಯಲ್ಲಿ ದರ್ಶನ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ಇಲ್ಲಿದೆ ಕಾರಣ
ಉದ್ಯಮಿ ಅಂಬಾನಿ 5ಜಿ ನೆಟ್‌ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣ ಎಂದು ನನಗೆ ಅನಿಸುತ್ತಿದೆ. 5ಜಿ ಓಡಬೇಕು ಎದರೆ ಒಟಿಟಿ ಸಿನಿಮಾಗಳು, ಆನ್‌ಲೈನ್ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು. ಅದೇ ಚಿತ್ರಮಂದಿರಗಳು ತೆರೆದುಬಿಟ್ಟರೆ ಒಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಹಾಗಾಗಿ ಅಂಬಾನಿ ಕೆಲವು ದೊಡ್ಡ-ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸಿರಬಹುದು ಎಂದರು ನಟ ದರ್ಶನ್.

ನನ್ನ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವೆ: ದರ್ಶನ್
ಚಿತ್ರಮಂದಿರಗಳಲ್ಲಿ ಈಗ 50% ಪ್ರೇಕ್ಷಕರಿಗೆ ಅಷ್ಟೆ ಅವಕಾಶ ನೀಡಬೇಕು ಎಂದು ನಿಯಮ ಮಾಡಲಾಗಿದೆ. ಒಂದು ವೇಳೆ ಅದನ್ನು 25% ಇಳಿಸಿದರೂ ಸರಿಯೇ ನನ್ನ ಸಿನಿಮಾವನ್ನು ನಾನು ಚಿತ್ರಮಂದಿರಲ್ಲಿಯೇ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು ನಟ ದರ್ಶನ್.

ತಮಿಳುನಾಡು ಸರ್ಕಾರ ಆದೇಶಕ್ಕೆ ಕೇಂದ್ರ ತಕರಾರು
ಕೆಲವು ದಿನಗಳ ಹಿಂದಷ್ಟೆ ತಮಿಳುನಾಡು ಸರ್ಕಾರವು ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರು ಕುಳಿತು ಸಿನಿಮಾ ವೀಕ್ಷಣೆ ಮಾಡಬಹುದು ಎಂದು ಆದೇಶ ಹೊರಡಿಸಿತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ತಕರಾರು ತೆಗೆದು, ಕೇಂದ್ರ ಸರ್ಕಾರ ನೀಡಿರುವ ಆದೇಶಗಳನ್ನೇ ರಾಜ್ಯ ಸರ್ಕಾರ ಪಾಲಿಸಬೇಕು, ತಮಿಳುನಾಡು ಸರ್ಕಾರ ನೀಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಸೂಚಿಸಿತು. ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ.
ರಾಬರ್ಟ್ ಸಿನಿಮಾ ಬಿಡುಗಡೆ ಯಾವಾಗ: ದರ್ಶನ್ ಹೇಳಿದ್ದು ಹೀಗೆ?

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪೂರ್ಣ ಅನುಮತಿ
ತಮಿಳುನಾಡು ಸರ್ಕಾರದ ನಂತರ ಇದೀಗ ಪಶ್ಚಿಮ ಬಂಗಾಳ ಸರ್ಕಾರವೂ ಸಹ ರಾಜ್ಯದಲ್ಲಿ ಚಿತ್ರಮಂದಿರಗಳು 100% ಪ್ರೇಕ್ಷಕರಿಗೆ ಅವಕಾಶ ನೀಡಬಹುದು ಎಂಬ ಆದೇಶ ನೀಡಿದೆ. ಪಶ್ಚಿಮ ಬಂಗಾಳದ ಮೇಲೂ ಕೇಂದ್ರ ಕೆಂಗಣ್ಣು ಬೀರುವ ಸಾಧ್ಯತೆ ಇದೆ.

ಕೇರಳ ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆದಿಲ್ಲ
ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ತೆರೆದಿವೆಯಾದರೂ ಬಹುತೇಕ ಎಲ್ಲ ಕಡೆ 50% ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕೇರಳ ರಾಜ್ಯದಲ್ಲಿ ಮಾತ್ರ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ.
ಕೊನೆ ಘಳಿಗೆಯಲ್ಲಿ ಥಿಯೇಟರ್ನಿಂದ ಹಿಂದೆ ಸರಿದ ರವಿತೇಜ ಕ್ರ್ಯಾಕ್, ಕಾರಣವೇನು?