»   » 'ಮಾಸ್ ಹೀರೋ' ಅಂತ ಅಂಬರೀಶ್ ಕರೆದದ್ದು ಯಾರಿಗೆ?

'ಮಾಸ್ ಹೀರೋ' ಅಂತ ಅಂಬರೀಶ್ ಕರೆದದ್ದು ಯಾರಿಗೆ?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಗಿಂತ ಕೊಂಚ ವಿಭಿನ್ನವಾಗಿ 'ಡವ್' ಪದವನ್ನು ಅರ್ಥೈಸಿರುವ 'ಅಲೆಮಾರಿ' ಸಂತು 'ಡವ್' ಸಿನಿಮಾ ರೆಡಿ ಮಾಡಿದ್ದಾರೆ. ಇದೇ ವಾರ 'ಡವ್' ತೆರೆಗೆ ಬರುತ್ತಿದೆ.

ಎರಡು ವರ್ಷಗಳಿಂದ ರೆಡಿಯಾಗುತ್ತಲೇ ಇದ್ದ 'ಡವ್' ಸಿನಿಮಾಗೆ ಇದೀಗ ಬಿಡುಗಡೆ ಭಾಗ್ಯ ದೊರಕಿದೆ. ರಿಲೀಸ್ ಗೂ ಮುನ್ನ 'ಡವ್' ಚಿತ್ರದ ಟ್ರೈಲರ್ ನ ನಿರ್ದೇಶಕ 'ಅಲೆಮಾರಿ' ಸಂತು, ರೆಬೆಲ್ ಸ್ಟಾರ್ ಅಂಬರೀಶ್ ಗೆ ತೋರಿಸಿದ್ದಾರೆ. [ಎಲ್ಲೋ ನನ್ 'ಡವ್' ಟೀಸರ್ ಔಟ್ ಕಣ್ಲಾ]

Ambareesh lauds kannada movie 'Dove' trailer.

'ಡವ್' ಚಿತ್ರದ ಟ್ರೈಲರ್ ನೋಡಿ ಅಂಬರೀಶ್ ಫುಲ್ ಖುಷ್ ಆಗಿದ್ದಾರೆ. 'ಡವ್' ಚಿತ್ರದ ನಾಯಕ ಸಾ.ರಾ.ಗೋವಿಂದು ಪುತ್ರ ಅನೂಪ್ ಸಾ.ರಾ.ಗೋವಿಂದು ನಟನೆಗೆ ಫಿದಾ ಆಗಿದ್ದಾರೆ. ಆದ ಕಾರಣ ಅವರಿಗೆ 'ಮಾಸ್ ಹೀರೋ' ಅಂತ ಟೈಟಲ್ ಬೇರೆ ಕೊಟ್ಟಿದ್ದಾರೆ. [ಪಿಯು ಸ್ಟೂಡೆಂಟ್ ಸಾರಾ ಗೋವಿಂದು ಮಗನ ಡವ್ ಕಹಾನಿ]

''ನನ್ನ ಕಣ್ ಮುಂದೆ ಬೆಳೆದ ಹುಡುಗ ಅನೂಪ್. ಇಷ್ಟು ಚೆನ್ನಾಗಿ ಆಕ್ಟ್ ಮಾಡ್ತಾನೆ ಅಂತ ಅಂದುಕೊಂಡಿರಲಿಲ್ಲ. ಟ್ರೈಲರ್ ನೋಡಿ ಖುಷಿ ಆಯ್ತು. 'ಮಾಸ್ ಹೀರೋ' ಹೆಸರಿಗೆ ತಕ್ಕ ನಟ. 'ಡವ್' ಸಿನಿಮಾ ರಿಲೀಸ್ ಆಗ್ತಿದ್ದಂತೆ, ನಾನು ಸಿನಿಮಾ ನೋಡುತ್ತೇನೆ'' ಅಂತ ಹೇಳಿದ್ದಾರೆ ಅಂಬರೀಶ್.

ಅಂಬಿ ಮಾತುಗಳನ್ನ ಕೇಳಿ ನಿರ್ದೇಶಕ 'ಅಲೆಮಾರಿ' ಸಂತು, ಸಾ.ರಾ.ಗೋವಿಂದು ಮತ್ತು ಅನೂಪ್ ಸಾ.ರಾ.ಗೋವಿಂದು ಖುಷಿಯಾಗಿದ್ದಾರೆ. ಇದೇ ವಾರ ಬೆಳ್ಳಿತೆರೆ ಮೇಲೆ 'ಡವ್' ಹಾರಾಡಲಿದೆ.

English summary
Kannada Actor Ambareesh watched Producer Sa.Ra.Govindu's son Annup's debut movie 'Dove' Trailer and praised. Santhu of 'Alemari' fame has directed this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada