»   » ಅಂಬರೀಶ್ ಮನೆಯ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ನೋಡಿದ್ದೀರಾ?

ಅಂಬರೀಶ್ ಮನೆಯ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ನೋಡಿದ್ದೀರಾ?

By: ಹರ್ಷಿತಾ ರಾಕೇಶ್
Subscribe to Filmibeat Kannada

''ಕುತ್ತೇ...ಕನ್ವರ್ ನಹೀ...ಕನ್ವರ್ ಲಾಲ್ ಬೋಲೋ'', ''ಏ ಬುಲ್ ಬುಲ್...ಮಾತಾಡಕ್ಕಿಲ್ವಾ..'' - ರೆಬೆಲ್ ಸ್ಟಾರ್ ಅಂಬರೀಶ್ ಅಂದಕೂಡಲೆ ನೆನಪಾಗುವ ಡೈಲಾಗ್ ಗಳಿವು.

1972 ರಲ್ಲಿ ತೆರೆಕಂಡ 'ನಾಗರಹಾವು' ಮತ್ತು 1981 ರಲ್ಲಿ ತೆರೆಕಂಡ 'ಅಂತ' ಚಿತ್ರಗಳು ಅಂಬರೀಶ್ ವೃತ್ತಿಬದುಕಿನ ಎರಡು ಬಹುದೊಡ್ಡ ಮೈಲಿಗಲ್ಲುಗಳು. ಇದೇ ಚಿತ್ರಗಳ ಫೇಮಸ್ ಡೈಲಾಗ್ಸ್ ಅಂಬರೀಶ್ ರವರ ಸಿಗ್ನೇಚರ್ ಡೈಲಾಗ್ ಗಳಾದವು.

ಅಂಬರೀಶ್ ಕೆರಿಯರ್ ಗೆ ಹೊಸ ತಿರುವು ನೀಡಿದ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ಡೈಲಾಗ್ ಗಳನ್ನ ಅಂಬಿ ಪ್ರತಿನಿತ್ಯ ನೆನಪಿಸಿಕೊಳ್ಳುವುದು ಹೇಗೆ ಗೊತ್ತಾ? ತಮ್ಮ ಮುದ್ದಿನ ನಾಯಿ ಮರಿಗಳ ಮೂಲಕ.

ambareesh-pet

ಹೌದು, ಅಂಬರೀಶ್ ಮನೆಯಲ್ಲಿರುವ ನಾಯಿಯ ಹೆಸರು 'ಕನ್ವರ್ ಲಾಲ್'. ಪುಟ್ಟ ಮರಿಯಿಂದಲೂ ಅಂಬಿ ಮನೆಯಲ್ಲೇ ಸ್ಥಾನ ಪಡೆದಿರುವ 'ಕನ್ವರ್ ಲಾಲ್' ಅಂಬರೀಶ್ ಗೆ ಅತ್ಯಂತ ಪ್ರೀತಿಪಾತ್ರ ನಾಯಿ. ['ಅಂತ' ಚಿತ್ರದ ಅಂತರಂಗ ಬಿಚ್ಚಿಟ್ಟ ಅಂಬರೀಶ್]

ambareesh-pet

ಇದಕ್ಕೊಂದು ಜೋಡಿ ಬೇಕು ಅಂತ ಒಂದುವರೆ ವರ್ಷದ ಹಿಂದೆ ತಮ್ಮ ಮನೆಗೆ ಅಂಬರೀಶ್ ಹೊಸ ನಾಯಿ ತಂದರು. ಅದಕ್ಕೆ ಅಂಬಿ ನಾಮಕರಣ ಮಾಡಿದ್ದು 'ಬುಲ್ ಬುಲ್' ಅಂತ. ['ಮಂಡ್ಯದ ಗಂಡು' ಅಂಬರೀಶ್ ಮನೆಯಲ್ಲಿ ಬುದ್ಧಾವತಾರ]

ambareesh-pet

ಅಂಬರೀಶ್ ಅನಾರೋಗ್ಯದ ನಂತರ ಮನನೊಂದಿದ್ದ 'ಕನ್ವರ್ ಲಾಲ್'ಗೆ 'ಬುಲ್ ಬುಲ್' ಬಂದ್ಮೇಲಿಂದ ಹೊಸ ಹುರುಪು ಬಂದಿದ್ಯಂತೆ. ಪ್ರತಿನಿತ್ಯ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ಖುಷಿ ಖುಷಿಯಿಂದ ಮನೆ ತುಂಬ ಓಡಾಡುವುದನ್ನ ನೋಡಿ ಅಂಬರೀಶ್ ಮನಸ್ಸು ಹಗುರ ಆಗಿದ್ಯಂತೆ. (ಫಿಲ್ಮಿಬೀಟ್ ಕನ್ನಡ)

English summary
Have you seen Kannada Actor, Congress Politician Ambareesh's pet dogs? Ambareesh has named dogs as 'Kanvarlal' and 'Bul Bul' after his famous dialogues.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada