»   » ಸಚಿವ ಸ್ಥಾನದಲ್ಲಿ ಕಂಗೊಳಿಸಲಿದ್ದಾರೆ ರೆಬೆಲ್ ಸ್ಟಾರ್ ಅಂಬರೀಶ್.!

ಸಚಿವ ಸ್ಥಾನದಲ್ಲಿ ಕಂಗೊಳಿಸಲಿದ್ದಾರೆ ರೆಬೆಲ್ ಸ್ಟಾರ್ ಅಂಬರೀಶ್.!

Posted By:
Subscribe to Filmibeat Kannada

ಈಗ ಕರ್ನಾಟಕ ಹೊತ್ತಿ ಉರಿಯುತ್ತಿರುವುದಕ್ಕೂ, ಪ್ರಸಕ್ತ ರಾಜಕೀಯ ವಿದ್ಯಮಾನಕ್ಕೂ, ಶಾಸಕ ಅಂಬರೀಶ್ ಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗುವುದಕ್ಕೂ ಯಾವುದೇ ಸಂಬಂಧ ಇಲ್ಲ.!

ಅಸಲಿಗೆ ನಾವು ಹೇಳುತ್ತಿರುವುದು ರಾಜಕೀಯದ ರಿಯಲ್ ಸುದ್ದಿ ಅಲ್ಲ. ಬದಲಾಗಿ ಅಪ್ಪಟ ಕನ್ನಡ ಚಿತ್ರರಂಗದ ರೀಲ್ ಸುದ್ದಿ. [ಸಂಪುಟದಿಂದ ಅಂಬರೀಶ್ ಕಿಕ್ ಔಟ್: ಕನ್ನಡ ಚಿತ್ರೋದ್ಯಮ ಬಂದ್.!]

ವಸತಿ ಸಚಿವರಾಗಿದ್ದ ಅಂಬರೀಶ್ ರವರನ್ನ ಸಿಎಂ ಸಿದ್ಧರಾಮಯ್ಯ ಕ್ಯಾಬಿನೆಟ್ ನಿಂದ ಕೈಬಿಟ್ಟಿರಬಹುದು. ಆದ್ರೆ, ರೆಬೆಲ್ ಸ್ಟಾರ್ ರನ್ನ ಸ್ಯಾಂಡಲ್ ವುಡ್ ಎಂದೂ ಕೈಬಿಡುವುದಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಚಿತ್ರವೊಂದರಲ್ಲಿ ಅಂಬರೀಶ್ 'ಸಚಿವ'ರಾಗಿ ಅಭಿನಯಿಸುತ್ತಿದ್ದಾರೆ. ಮುಂದೆ ಓದಿ....

ಸಚಿವರಾಗಿ ಅಂಬರೀಶ್.!

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಅಳಿಯ ಅನಿರುದ್ಧ ನಟಿಸುತ್ತಿರುವ 'ರಾಜಾ ಸಿಂಹ' ಚಿತ್ರದಲ್ಲಿ ಅಂಬರೀಶ್ ಸಚಿವರ ಪಾತ್ರ ಪೋಷಿಸುತ್ತಿದ್ದಾರೆ. [ಮತ್ತೆ ತೆರೆಯ ಮೇಲೆ ಸಾಹಸಸಿಂಹ ವಿಷ್ಣುವರ್ಧನ್ ಘರ್ಜನೆ]

ಅಂಬಿ ಹೆಸರೇನು ಗೊತ್ತಾ.?

'ರಾಜಾ ಸಿಂಹ' ಚಿತ್ರದಲ್ಲಿ ಅಂಬಿ ಪಾತ್ರದ ಹೆಸರು ಸಚಿವ ಅಮರ್ ನಾಥ್ ಅಂತ.! [ಸಾಹಸ ಮಾಡಲು ಹೋಗಿ ಕಣ್ಣಿಗೆ ಏಟು ಮಾಡಿಕೊಂಡ ನಟ ಅನಿರುದ್ಧ್]

ಅಂಬರೀಶ್ ರಿಯಲ್ ಹೆಸರು ಅದು.!

ಅಂಬರೀಶ್ ರವರ ನಿಜನಾಮ ಅಮರ್ ನಾಥ್ ಅಂತ ನಿಮಗೆಲ್ಲಾ ಗೊತ್ತಿದೆ. ಅದೇ ಹೆಸರಿನ ಸಚಿವರಾಗಿ ಅಂಬರೀಶ್ ನಟಿಸುತ್ತಿರುವುದು ವಿಶೇಷ.

ಮತ್ತೊಂದು ಸ್ಪೆಷಾಲಿಟಿ ಕೇಳಿ....

'ರಾಜಾ ಸಿಂಹ' ಚಿತ್ರದಲ್ಲಿ ನಟ ವಿಷ್ಣುವರ್ಧನ್ ರವರ ಕಂಚಿನ ಪ್ರತಿಮೆ ಅನಾವರಣ ಮಾಡುತ್ತಾರಂತೆ ಸಚಿವ ಅಮರ್ ನಾಥ್ (ಅಂಬರೀಶ್). ಈಗಾಗಲೇ ಈ ಸನ್ನಿವೇಶದ ಚಿತ್ರೀಕರಣ ಟಿ.ನರಸೀಪುರ ರಸ್ತೆಯಲ್ಲಿ ಬರುವ ದುದ್ದಗೆರೆ ಗ್ರಾಮದಲ್ಲಿ ನಡೆದಿದೆ.

ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು.!

ವಿಷ್ಣುವರ್ಧನ್ ರವರ ಕಂಚಿನ ಪ್ರತಿಮೆ ಅನಾವರಣ ಮಾಡುವ ಸನ್ನಿವೇಶದ ಚಿತ್ರೀಕರಣಕ್ಕಾಗಿ ಅಂಬರೀಶ್ ರವರ ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನ ದುದ್ದಗೆರೆ ಗ್ರಾಮದಲ್ಲಿ ಹಾಕಲಾಗಿತ್ತು.

ಸಿಂಹಾದ್ರಿ ಗ್ರಾಮ

'ರಾಜಾ ಸಿಂಹ' ಚಿತ್ರದಲ್ಲಿ ವಿಷ್ಣುವರ್ಧನ್ ಪ್ರತಿಮೆ ಇರುವ ಗ್ರಾಮಕ್ಕೆ 'ಸಿಂಹಾದ್ರಿ ಗ್ರಾಮ' ಅಂತ ಹೆಸರಿಟ್ಟಿರುವುದು ಮತ್ತೊಂದು ವಿಶೇಷ.

ನಾಯಕ ನಟನಾಗಿ ಅನಿರುದ್ಧ

'ರಾಜಾ ಸಿಂಹ' ಚಿತ್ರದಲ್ಲಿ ಅನಿರುದ್ಧ ಅಕ್ಷರಶಃ ಸಿಂಹದಂತೆ ಘರ್ಜಿಸಲಿದ್ದಾರಂತೆ. ಮೈನವಿರೇಳಿಸುವ ಸಾಹಸ ಈ ಚಿತ್ರದಲ್ಲಿದೆ.

ಭಾರತಿ ವಿಷ್ಣುವರ್ಧನ್ ಕೂಡ ನಟನೆ.!

'ರಾಜಾ ಸಿಂಹ' ಚಿತ್ರದಲ್ಲಿ ಅನಿರುದ್ಧನ ತಾಯಿ ಪಾತ್ರದಲ್ಲಿ ನಟಿ ಭಾರತಿ ವಿಷ್ಣುವರ್ಧನ್ ನಟಿಸುತ್ತಿದ್ದಾರೆ.

ವಿಷ್ಣು ಜೀವನದ ಕಥೆ.!

''ರಾಜಾ ಸಿಂಹ' ಸಿನಿಮಾ ವಿಷ್ಣು ಜೀವನದ ಕಥೆ'' ಅಂತ ಖುದ್ದು ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ. ಈ ಚಿತ್ರಕ್ಕೆ ರವಿರಾಮ್ ಆಕ್ಷನ್ ಕಟ್ ಹೇಳ್ತಿದ್ರೆ, ಡಿ.ಬಸಪ್ಪ ನಿರ್ಮಾಣ ಮಾಡುತ್ತಿದ್ದಾರೆ.

English summary
Rebel Star Ambareesh is roped into play as 'Minister' in Kannada Movie 'Raja Simha'. The movie stars Aniruddh and Bharathi Vishnuvardhan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada