For Quick Alerts
  ALLOW NOTIFICATIONS  
  For Daily Alerts

  ರಾಜ್ಯದ ಹಿತಕ್ಕಾಗಿ ನನ್ನ ಜೀವ ಮುಡಿಪು, ಅಂಬರೀಶ್

  By Rajendra
  |

  ಮಂಡ್ಯಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಅಂಬರೀಶ್ ಅವರು ಕಾವೇರಿ ಹೋರಾಟಕ್ಕೆ ಶುಕ್ರವಾರ (ಅ.5) ಬೆಂಬಲ ಸೂಚಿಸಿದರು.

  ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಕರ್ನಾಟಕಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ರಾಜಭವನ ಚಲೋ ಜಾಥಾವನ್ನು ಉದ್ದೇಶಿಸಿ ಅಂಬಿ ಮಾತನಾಡುತ್ತಿದ್ದರು.

  ಕಾವೇರಿ ನದಿ ಪ್ರಾಧಿಕಾರ ನೀಡಿರುವ ಕರ್ನಾಟಕ ವಿರೋಧಿ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಗೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಅಂಬಿ ಮಾತನಾಡಿದರು.

  ಈ ಪ್ರತಿಭಟನೆಯನ್ನು ರಾಜಕೀಯಕ್ಕಾಗಿ ಹಮ್ಮಿಕೊಂಡಿಲ್ಲ. ರಾಜಕೀಯದಿಂದ ನನಗೆ ಏನೂ ಆಗಬೇಕಾಗಿಲ್ಲ. ಕಾವೇರಿ ಕರ್ನಾಟಕದ ಆಸ್ತಿ. ರಾಜ್ಯದ ಜನರ ಹಿತಕ್ಕಾಗಿ ನನ್ನ ಜೀವನ ಮುಡಿಪು. ಕೇಂದ್ರ ಸರ್ಕಾರ ನೀರು ಬಿಡಲು ಆದೇಶಿಸಿದ ಬಳಿಕ ಅಧ್ಯಯನ ತಂಡ ಕಳುಹಿಸಿದೆ.

  ಕೇಂದ್ರದ ಈ ನಿಲುವಿಗೆ ಅಂಬಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅವರು ಚಳವಳಿ ನಿರತರರನ್ನು ಉದ್ದೇಶಿಸಿ ಶಾಂತಿಯುತ ಪ್ರತಿಭಟನೆಗೆ ಮನವಿ ಮಾಡಿದರು.

  ಈ ಪ್ರತಿಭಟನಾ ಮೆರವಣಿಗೆಯಲ್ಲಿ ಸಿನೆಮಾ ನಟರಾದ ಪ್ರೇಮ್ ಹಾಗೂ ಶಿವರಾಮ್ ಅವರೂ ಉಪಸ್ಥಿತರಿದ್ದರು. ನಟಿ ಪ್ರಿಯಾ ಹಾಸನ್ ಅವರೂ ಪಾಲ್ಗೊಂಡಿದ್ದರು. (ಒನ್ಇಂಡಿಯಾ ಕನ್ನಡ)

  English summary
  Rebel star Ambarish supports massive rally of Karnataka Rakshana Vedike (KRV), will begins their demonstration from National College Basavanagudi to Raj Bhavan. The crowd will march through the busy roads of JC Road, Hudson Circle, Mysore Bank Circle and Seshadri Road, affecting normal-flow of traffic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X