»   » ಚಳಿಚಳಿ ತಾಳೆನು ಅಂಬಿಕಾ ಸೆಕೆಂಡ್ ಇನ್ನಿಂಗ್ಸ್

ಚಳಿಚಳಿ ತಾಳೆನು ಅಂಬಿಕಾ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada
Actress Ambika
ಒಮ್ಮೆ ಫ್ಲ್ಯಾಶ್ ಬ್ಯಾಕ್ ಗೆ ಹೊರಳಿ...ಅದು ಎಂಬತ್ತರ ದಶಕ. 1983ರಲ್ಲಿ ತೆರೆಕಂಡ 'ಚಕ್ರವ್ಯೂಹ' ಚಿತ್ರದ "ಚಳಿಚಳಿ ತಾಳೆನು ಈ ಚಳಿಯಾ..." ಹಾಡನ್ನೊಮ್ಮೆ ನೆನಪಿಸಿಕೊಳ್ಳಿ. ಈ ಕಡುಬೇಸಿಗೆಯಲ್ಲೂ ತಣ್ಣನೆ ಅನುಭವವಾಗುತ್ತದೆ. ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಅಂಬಿಕಾ ಮಳೆಯಲ್ಲಿ ಮೀಯುತ್ತಾ ಮೋಹಕವಾಗಿ ಅಭಿನಯಿಸಿದ್ದರು.

ಈ ಹಾಡಿನ ಮೂಲಕ ಅಂಬಿಕಾ ಅವರು ಕಲಾರಸಿಕರ ಮನಸೂರೆಗೊಂಡಿದ್ದರು. ಈಗ್ಯಾಕೆ ಈ ಸುದ್ದಿ ಅಂತೀರಾ. ಅಂಬಿಕಾ ಅವರು ಈಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಆದರೆ ತೆರೆ ಮುಂದೆ ಅಲ್ಲ, ತೆರೆಯ ಹಿಂದೆ. ಅರ್ಥಾತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತಮಿಳು ಹಾಗೂ ಮಲಯಾಳಂನ 'ನಿಝಲ್' ಎಂಬ ದ್ವಿಭಾಷಾ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ವಿಶೇಷ ಎಂದರೆ ಛಾಯಾಗ್ರಾಹಕನಿಲ್ಲದೆ ಚಿತ್ರೀಕರಿಸುತ್ತಿರುವುದು! ಅಂದರೆ ಚಿತ್ರದಲ್ಲಿನ ಪಾತ್ರವರ್ಗವೇ ಕ್ಯಾಮೆರಾಮೆನ್ ಗಳು. ಒಬ್ಬರ ಅಭಿನಯನ್ನು ಇನ್ನೊಬ್ಬರ ಬಳಿ ಇರುವ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗುತ್ತದೆ.

ಪ್ರೇಕ್ಷಕರು ಚಿತ್ರವನ್ನು ನೋಡುತ್ತಿರುವಷ್ಟೂ ಹೊತ್ತೂ ನಟರೊಂದಿಗೆ ಇದ್ದಂತೆಯೇ ಭಾಸವಾಗುತ್ತದೆ ಎನ್ನುತ್ತದೆ ಚಿತ್ರತಂಡ. ಸಂಪೂರ್ಣ ಹೊಸಬರೇ ತುಂಬಿರುವ ಈ ಚಿತ್ರಕ್ಕಾಗಿ 40 ದಿನಗಳ ಕಾರ್ಯಾಗಾರವನ್ನು ನಡೆಸಿ ತರಬೇತಿ ನೀಡಿದ್ದೇವೆ ಎನ್ನುತ್ತಾರೆ ಅಂಬಿಕಾ. ಈ ಚಿತ್ರದಲ್ಲಿ ಅವರು ಸಹ ನಿರ್ದೇಶಕಿ. ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ.

ಅಂದಹಾಗೆ ಇದು ಅಂಬಿಕಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ. ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಮೂರು ಜನ್ಮ, ಬಜಾರ್ ಭೀಮ, ಜೀವನ ಜ್ಯೋತಿ, ಚಕ್ರವ್ಯೂಹ, ಪ್ರಳಯಾಂತಕ ಎಂಬ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ ಅಂಬಿಕಾ ಅಭಿನಯಿಸಿದ್ದಾರೆ. ಎಂಬತ್ತರ ದಶಕದಲ್ಲಿ ಹಾಟ್ ಬೆಡಗಿ ಎನ್ನಿಸಿದ್ದ ಅಂಬಿಕಾ ನಿರ್ದೇಶಿಸಲಿರುವ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಇದ್ದೇ ಇದೆ. (ಒನ್ಇಂಡಿಯಾ ಕನ್ನಡ)

English summary
Yesteryear actress Ambika, a popular South Indian face of the 1980s, has wielded the megaphone for upcoming Tamil-Malayalam bilingual romantic-thriller Nizhal. "Ambika is co-directing the film with Suresh, a Malayalam actor. This will be the first 'point of view' (POV) film that will have no cameraman.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada