»   » ಅಮ್ಮಂದಿರ ದಿನಕ್ಕೆ 'ಅಮ್ಮ ಐ ಲವ್ ಯೂ' ಗಿಫ್ಟ್

ಅಮ್ಮಂದಿರ ದಿನಕ್ಕೆ 'ಅಮ್ಮ ಐ ಲವ್ ಯೂ' ಗಿಫ್ಟ್

Posted By:
Subscribe to Filmibeat Kannada
ಅಮ್ಮಂದಿರ ದಿನಕ್ಕೆ ಚಿರು ಕಡೆಯಿಂದ ಗಿಫ್ಟ್ | Amma I Love You new poster released | Filmibeat Kannada

ನಟ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ದ್ವಾರಕೀಶ್ ಚಿತ್ರ ಸಂಸ್ಥೆಯಲ್ಲಿ ತಯಾರಾಗುತ್ತಿರುವ 51ನೇ ಸಿನಿಮಾ ಇದಾಗಿದ್ದು, ಮೇ ತಿಂಗಳಲ್ಲಿ ಅಮ್ಮಂದಿರ ದಿನಾಚರಣೆಯ ವಿಶೇಷವಾಗಿ ಈ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.

ಅಂದ್ಹಾಗೆ, 'ಅಮ್ಮ ಐ ಲವ್ ಯೂ' ಸಿನಿಮಾ ತಮಿಳಿನ 'ಪಿಚ್ಚಕಾರನ್' ಚಿತ್ರದ ರೀಮೇಕ್. ಕನ್ನಡದ ನೆಟಿವಿಟಿಗೆ ತಕ್ಕಂತೆ ಬದಲಾವಣೆಗಳನ್ನ ಮಾಡಿಕೊಂಡು ಕನ್ನಡಕ್ಕೆ ತರಲಾಗುತ್ತಿದೆ.

Amma I love you new posters released

ಈ ಭಾವಚಿತ್ರ ನೋಡಿ ಈ ನಟನನ್ನ ಗುರುತಿಸುವಿರಾ?

ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ. ನಿಶ್ವಿಕಾ ಈಗಾಗಲೇ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಮ್ಮ ಐ ಲವ್ ಯೂ ಈಕೆಗೆ ಎರಡನೇ ಸಿನಿಮಾ.

ತಾಯಿ ಮತ್ತು ಶ್ರೀಮಂತನ ಮಗನ ನಡುವೆ ಕಥಾಹಂದರ ನಡೆಯಲಿದ್ದು, ತಾಯಿ ಪಾತ್ರದಲ್ಲಿ ಹಿರಿಯ ನಟಿ ಸಿತಾರ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಪ್ರಕಾಶ್ ಬೆಳವಾಡಿ, ರವಿ ಕಾಳೆ, ಚಿಕ್ಕಣ್ಣ, ಬಿರಾದಾರ್ ಮೊದಲಾದ ಕಲಾವಿದರು ನಟಿಸಿರುವ ಚಿತ್ರಕ್ಕೆ ಗುರುಕಿರಣ್ ಸಂಗೀತ ಒದಗಿಸಿದ್ದಾರೆ.

English summary
Kannada actor chiranjeevi sarja starrer kannada Movie 'Amma I love you' new posters released. the movie directed by K m chaithanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X