»   » ಸರ್ಜಾರ ರಹಸ್ಯ 'ಗೇಮ್' ಚಿತ್ರದ ಸ್ಪೆಷಾಲಿಟಿ ಏನು?

ಸರ್ಜಾರ ರಹಸ್ಯ 'ಗೇಮ್' ಚಿತ್ರದ ಸ್ಪೆಷಾಲಿಟಿ ಏನು?

Posted By:
Subscribe to Filmibeat Kannada

ಸದಾ ನೈಜ ಘಟನೆಯಾಧರಿತ ಸಿನಿಮಾ ಮಾಡುವಲ್ಲಿ ಹೆಸರುವಾಸಿಯಾದ ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು 'ಪೊಲೀಸ್ ಕ್ವಾಟರ್ಸ್', 'ಸೈನೈಡ್' ಮತ್ತು 'ಅಟ್ಟಹಾಸ' ಚಿತ್ರದ ನಂತರ ಇದೀಗ ಮತ್ತೊಮ್ಮೆ ನೈಜ ಕಥೆಯಾದ 'ಗೇಮ್' ಎಂಬ ಸಿನಿಮಾದ ಮೂಲಕ ಮತ್ತೆ ಗಾಂಧಿನಗರಕ್ಕೆ ವಾಪಸಾಗಿದ್ದಾರೆ.

ಏಕಕಾಲಕ್ಕೆ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಾಳೆ (ಫೆಬ್ರವರಿ 26) ಇಡೀ ಕರ್ನಾಟಕದಾದ್ಯಂತ ತೆರೆ ಕಾಣುತ್ತಿರುವ 'ಗೇಮ್' ಚಿತ್ರ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದ್ದು, ಸಖತ್ ಥ್ರಿಲ್ಲಿಂಗ್ ಆಗಿದೆ ಅನ್ನೋದನ್ನ ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಹೇಳುತ್ತದೆ.[ಅರ್ಜುನ್ ಸರ್ಜಾ, ಮನಿಷಾ 'ಗೇಮ್' ಟ್ರೈಲರ್ ನೋಡಿದ್ರಾ?]


ಇಡೀ ಚಿತ್ರದ ಶೇ.40 ರಷ್ಟು ಭಾಗ ಒಂದು ಲ್ಯಾಬ್ ನಲ್ಲಿ ನಡೆದಿರುವುದರಿಂದ ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು ಲ್ಯಾಬ್ ನ ಒಂದು ಸೆಟ್ ಅನ್ನೇ ಹಾಕಿದ್ದಾರಂತೆ. ಒಟ್ನಲ್ಲಿ ಪ್ರೇಕ್ಷಕರಿಗೆ ಭಾರಿ ಕುತೂಹಲ ಕೆರಳಿಸುವಲ್ಲಿ 'ಗೇಮ್' ಯಶಸ್ವಿಯಾಗುತ್ತೇ ಅನ್ನೋದು ನಿರ್ದೇಶಕರ ಅಭಿಪ್ರಾಯ.[ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಗೇಮ್' ಶುರು]


ಇನ್ನು ಈ ಚಿತ್ರದ ಸ್ಪೆಷಾಲಿಟಿ ಏನು? ಹಾಗೂ ನಾಳೆ ಬಿಡುಗಡೆ ಆಗುತ್ತಿರುವ 'ಗೇಮ್' ಚಿತ್ರವನ್ನು ಯಾಕೆ ನೋಡಬೇಕು ಎಂಬುದನ್ನು ನಾವು ಹೇಳ್ತೀವಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


50 ಲಕ್ಷ ವೆಚ್ಚದಲ್ಲಿ ಸೆಟ್

ಚಿತ್ರದ ಹೆಚ್ಚಿನ ಭಾಗ ಪೋರೆನ್ಸಿಕ್ ಲ್ಯಾಬ್ ನ ಒಳಗಡೆ ನಡೆಯುವುದರಿಂದ, ಸುಮಾರು 50 ಲಕ್ಷ ವೆಚ್ಚದಲ್ಲಿ ಲ್ಯಾಬ್ ನ ಸೆಟ್ ಹಾಕಲಾಗಿದೆ. ಇದು ಕೊಲೆ ಆಧಾರಿತ ಸಿನಿಮಾ ಆಗಿರುವುದರಿಂದ, ಕೊಲೆಯ ರೂವಾರಿಗಳು, ಕೊಲೆಯ ಕಾರಣ ಹಾಗೂ ಅದಕ್ಕೆ ಬಳಸಿದ ಪರಿಕರಗಳ ಪರಿಶೀಲನೆ ಅಂತ ಹೀಗೆ ಹಂತ ಹಂತವಾಗಿ ತನಿಖೆ ನಡೆಯುತ್ತದೆ. ಅವೆಲ್ಲಾ ನಡೆಯುವುದು ಈ ಲ್ಯಾಬ್ ನಲ್ಲಿ.[ಸ್ಯಾಂಡಲ್ ವುಡ್ ನಲ್ಲಿ ಮನಿಷಾ ಕೊಯಿರಾಲ 'ಗೇಮ್']


ಕೊಲೆಯ ಜಾಡು ಹಿಡಿದ ಅರ್ಜುನ್ ಸರ್ಜಾ

ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿರುವ ಅರ್ಜುನ್ ಸರ್ಜಾ ಅವರು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರು ಕೊಲೆಯ ಜಾಡು ಹಿಡಿದು ಸಾಗುವ ಪಾತ್ರ ವಹಿಸಿದ್ದಾರೆ. ಒಟ್ನಲ್ಲಿ ಒಬ್ಬ ಇನ್ ವೆಸ್ಟಿಗೇಷನ್ ಆಫೀಸರ್ ಆಗಿ ಸಖತ್ ಖಡಕ್ಕಾಗಿ ಅರ್ಜುನ್ ಸರ್ಜಾ ಅವರು ಮಿಂಚಿದ್ದಾರೆ.


ನೈಜ ಘಟನೆ ಆಧರಿಸಿದ ಸಿನಿಮಾ

ಯಾವಾಗಲೂ ನೈಜ ಘಟನೆಯಾಧರಿತ ಸಿನಿಮಾ ಮಾಡುವಾಗ ನಿರ್ದೇಶಕ ರಮೇಶ್ ಅವರು ಘಟನೆ ನಡೆದ ಸ್ಥಳದಲ್ಲಿಯೇ ಶೂಟಿಂಗ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರು. ಇದು ಅವರ ಸ್ಪೆಷಾಲಿಟಿ ಕೂಡ ಆಗಿತ್ತು. ಆದರೆ ಈ ಬಾರಿ ಲೊಕೇಷನ್ ವಿಚಾರದಲ್ಲಿ ಸ್ವಲ್ಪ ಚೇಂಚ್ ಮಾಡಿಕೊಂಡ ರಮೇಶ್ ಅವರು ತಾವೇ ಒಂದು ವಿಧಿ ವಿಜ್ಞಾನ ಲ್ಯಾಬ್ ಅನ್ನು ಸೃಷ್ಟಿ ಮಾಡಿ ಅದರಲ್ಲಿ ಶೂಟಿಂಗ್ ಮಾಡಿದ್ದಾರೆ.


ಎಲ್ಲೆಲ್ಲಿ ಶೂಟಿಂಗ್

ಅಂದಹಾಗೆ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಸೇರಿದಂತೆ ಬ್ಯಾಂಕಾಂಕ್ ನಲ್ಲಿ ಚಿತ್ರದ ಕೆಲವಾರು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಸಂಗೀತ ನಿರ್ದೇಶಕ ಇಳೆಯರಾಜ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


ಗುಟ್ಟು ಬಿಟ್ಟುಕೊಡದ ನಿರ್ದೇಶಕರು

ಅಷ್ಟಕ್ಕೂ 'ಗೇಮ್' ಸಿನಿಮಾ ನೈಜ ಘಟನೆಯನ್ನು ಆಧರಿಸಿದೆಯೋ ಅಥವಾ ಇಲ್ವೋ ಎಂಬ ಕುತೂಹಲಿಗರ ಪ್ರಶ್ನೆಗೆ ನಿರ್ದೇಶಕರು ಗುಟ್ಟು ಬಿಟ್ಟು ಕೊಡುತ್ತಿಲ್ಲ. ಅದನ್ನು ಚಿತ್ರಮಂದಿರದಲ್ಲಿಯೇ ಬಂದು ನೋಡಿ. ಆವಾಗ ತಿಳಿಯುತ್ತದೆ. ಸುಮ್ಮನೆ ಈಗಲೇ ಹೇಳಿ ಸಮಸ್ಯೆ ಬೇಡ ಎಂದು ಕುತೂಹಲಿಗರ, ಕುತೂಹಲಕ್ಕೆ ತಣ್ಣೀರೆರೆಚಿದ್ದಾರೆ.


'ಗೇಮ್' ನಲ್ಲಿ ಯಾರ್ಯಾರಿದ್ದಾರೆ

'ಮುದಲ್ವನ್' ಎಂಬ ತಮಿಳು ಚಿತ್ರದಲ್ಲಿ ಅರ್ಜುನ್ ಸರ್ಜಾಗೆ ಜೋಡಿಯಾಗಿದ್ದ ಬಾಲಿವುಡ್ ನಟಿ ಮನೀಷಾ ಕೊಯಿರಾಲ ಮತ್ತೆ ಬಂದಿದ್ದಾರೆ. ತಮಿಳು ನಟ ಶ್ಯಾಮ್ ಹಾಗೂ ರತ್ನಜ ಅವರ 'ಪ್ರೀತಿಯಲ್ಲಿ ಸಹಜ' ಖ್ಯಾತಿಯ ನಟಿ ಕಾಶ್ಮೀರಿ ಚೆಲುವೆ ಅಕ್ಸಾ ಭಟ್ ಮುಂತಾದವರು ಗೇಮ್ ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.


English summary
Kannada Movie 'Attahasa' fame Director A.M.R Ramesh's Kannada Movie 'Game' releasing This week (Feb 26th). Kannada Actor Arjun Sarja, Actress Manisha Koirala, Tamil Actor Shyam in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada